Free Shipping Above ₹500 | COD available

Aa 117 Dinagalu Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 9 left in stock

ಮರೈಸ್-ಮರಲಿನ್‌ ದಂಪತಿಗಳ ಕಡಲ ದುರಂತದ ನಿಜಕಥೆ ! 

ಸಾಹಸಿಗಳಾದ ಮರಲಿನ್ ಮತ್ತು ಮರೈಸ್ ಬೈಲಿ ಸತಿಪತಿಗಳು ಒಂದಾಗಿ, ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಪೆಸೆಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನ್ಮರಣದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ರೋಚಕ ಕಥೆಯಿದು. ದಂಪತಿಗಳು ಪಯಣ ಆರಂಭಿಸಿದ ಮತ್ತು ತಲುಪಿದ ಬಿಂದುಗಳ ನಡುವಿನ ಕಡಲಿನ ಹರಹನ್ನು ಭೂಪಟದಲ್ಲಿ ನೋಡಿದರೆ ನಿಜಕ್ಕೂ ದಂಗುಬಡಿಯುತ್ತದೆ. ಈ ಕಥೆಯಲ್ಲಿರುವ ದಂಪತಿಗಳ ಪಯಣದ ಪೂರ್ವದ, ಪಯಣದ ಹಾಗೂ ಪಯಣೋತ್ತರದ ಬಾಳಿನ ಪ್ರೇಮ ಸಾಹಸ ಆನಂದ ದುಃಖ ಆಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದ ಮೇಲೊಂದು ಬಂದು ಓದುಗರನ್ನು ಅಪ್ಪಳಿಸುತ್ತವೆ. ಈ ಕೃತಿಯನ್ನು ಓದುವಾಗ ತೇಜಸ್ವಿಯವರ 'ಮಹಾಪಲಾಯನ' ಕೃತಿ ನೆನಪಾಗುತ್ತದೆ.

ಮರಲಿನ್ ಮತ್ತು ಮರೈಸ್ ಜೋಡಿ ಮಾಡುವ ಯಾನವನ್ನು ಓದುವ ಕನ್ನಡಿಗರಿಗೆ, 
'ʼಜುಗಾರಿ ಕ್ರಾಸ್‌ ʼ ನ  ಸುರೇಶ್-ಗೌರಿಯರು ನೆನಪಾದರೆ ಆಶ್ಚರ್ಯವಿಲ್ಲ. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಸಾಮಾನ್ಯವಾಗಿ ಗಂಡು ಹೆಚ್ಚು ಕ್ರಿಯಾಶೀಲ ಮತ್ತು ಧೈರ್ಯಶಾಲಿ. ಆದರೆ ಈ ಪ್ರವಾಸ ಕಥನದಲ್ಲಿ ಬಾಳಕಡಲಿನೊಳಗೆ ಹುಟ್ಟನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನ ಪ್ರದರ್ಶಿಸುತ್ತಾಳೆ. ಹೀಗಾಗಿ ಈ ಕೃತಿಯು, ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ.

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ, ಈ ಅಪರೂಪದ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು ಎಂದು ಅನಿಸುತ್ತದೆ.

ರಹಮತ್ ತರೀಕೆರೆ

Guaranteed safe checkout

Aa 117 Dinagalu
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.