Your cart is empty now.
ಪುಸ್ತಕದ ಬಗ್ಗೆ : ಮಹಾಕಾಲ-2
ನೇತಾಜಿ ಬಾಲ್ಯದಲ್ಲಿ ಹೇಗಿದ್ದರು?
ಅವರ ವ್ಯಕ್ತಿತ್ವಕ್ಕೆ ಶಿವಾಜಿಯ ಸ್ಪೂರ್ತಿ ಮೆರುಗು ಕೊಟ್ಟದ್ದು ಹೇಗೆ?
ಪ್ರತಿಷ್ಠಿತ ಬಂಗಾಳಿ ಕುಟುಂಬದಲ್ಲಿ ಜನಿಸಿದ, ಸದಾ ಶ್ರೀಮಂತಿಕೆಯಲ್ಲೇ ತೇಲಾಡಬಹುದಾಗಿದ್ದ ಯುವಕ ಸುಭಾಷ್ ಯಾಕೆ ಐಸಿಎಸ್ ಪರೀಕ್ಷೆ ಬರೆದರು? ಬರೆದು ತೇರ್ಗಡೆಯಾದ ಮೇಲೂ ಸಹ ಯಾಕೆ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು?
ಗಾಂಧೀಜಿಗೂ ಅವರಿಗೂ ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಬಂತು? ನೆಹರು ಮತ್ತು ಗಾಂಧೀಜಿಯ ಪರಿವಾರ ಕಾಂಗ್ರೆಸ್ಸಿನ ಒಳಗೆ ನೇತಾಜಿಯವರ ವಿರುದ್ಧ ಏನೇನು ಪಿತೂರಿಗಳನ್ನು ಮಾಡಿತು?
ಈ ಎಲ್ಲ ಘಟನಾವಳಿಗಳ ಸುತ್ತ ತಿರುಗುತ್ತದೆ 'ಮಹಾಕಾಲ'ದ ಎರಡನೇ ಭಾಗ 'ಸ್ಥಿತಿ'.
ಇದರಲ್ಲಿ ಕಾರ್ಯಕಾರಣ ಸಂಬಂಧಗಳ ಅನ್ವೇಷಣೆ ಇದೆ, ಜೊತೆಗೆ ಯಾವ ತರ್ಕಕ್ಕೂ ಸಿಕ್ಕದ ಮನುಷ್ಯರ ಆಕಾಂಕ್ಷೆ-ದುಗುಡ-ಅಸ್ಥಿರತೆಗಳ ಶೋಧನೆಯು ಘಟನೆಗಳ ಒಳಗೆ ಬೆರೆತು ಹೋಗಿದೆ. ಮೊದಲ ಬಾರಿಗೆ ಮಾನವೀಯ ನೆಲೆಯಲ್ಲಿ ನಮ್ಮ ಇತಿಹಾಸದ ಪೂರ್ವಜರನ್ನು ನಮ್ಮ ಕಾಲಕ್ಕೆ ಬರಮಾಡಿಕೊಳ್ಳುವ ಪ್ರಯತ್ನ ಇದು.
ಇಲ್ಲಿ ಕಥನವು ಉಯ್ಯಾಲೆಯಂತೆ 'ಸೃಷ್ಟಿ'ಯಿಂದ ಹಿಂದಕ್ಕೆ ಜೀಕಿಕೊಂಡು 'ಸ್ಥಿತಿ'ಯನ್ನು ಕಥನದ ಹಂದರದಲ್ಲಿ ಹಿಡಿಯಲು ಹವಣಿಸಿದೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.