Your cart is empty now.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಚಿತ್ರ ಮತ್ತು ಸಾಹಿತ್ಯಚಿಂತನೆ
ತಮ್ಮ ಬದುಕಿನುದ್ದಕ್ಕೂ ಅತ್ಯಂತ ಕ್ರಿಯಾಶೀಲರಾಗಿದ್ದ ತೇಜಸ್ವಿಯವರು ಸಮಾನತೆಯ ಪರವಾಗಿ ಚಿಂತಿಸಿ, ಹೋರಾಟ ನಡೆಸಿ, ಸಮ ಸಮಾಜದ ಕನಸು ಕಂಡರು. ಅವರ ಚಿಂತನೆಯಲ್ಲಿ ಮುಖ್ಯವಾಗಿ ಗಾಂಧಿ, ಲೋಹಿಯಾ ಮೂಲಧಾತುವಾಗಿ ಕೆಲಸ ಮಾಡಿದ್ದರೂ ಅವರು ಜಗತ್ತಿನಲ್ಲಿ ಬಂದು ಹೋದ ಎಲ್ಲಾ ಜನಪರ ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು.
ಪ್ರತಿಯೊಂದನ್ನು ವಿಮರ್ಶೆ ಮಾಡಿ, ವಿವೇಚಿಸಿ ಮೌಲ್ಯ ನಿರ್ಧರಿಸುವ ಆರೋಗ್ಯಕರ ಮನಸ್ಥಿತಿ ಅವರದಾಗಿತ್ತು. ಭಾವೀ ಭಾರತದ ಅಂತಃಸತ್ತ್ವವನ್ನು ಸತ್ವಭರಿತವಾಗಿ ರೂಪಿಸಬೇಕೆಂದು ಪ್ರತಿಕ್ಷಣ ಅವರು ತಹತಹಿಸುತ್ತಿದ್ದರು. ಜಗತ್ತಿನ ಚರಿತ್ರೆಯಿಂದ ಕಲಿಯುವಂತಹದ್ದು, ವರ್ತಮಾನದಲ್ಲಿ ಭವಿಷ್ಯದ ಬೀಜಗಳನ್ನು ಅರ್ಥಪೂರ್ಣವಾಗಿ ಬಿತ್ತುವಂಥದ್ದು, ಯುವ ಜನತೆಯನ್ನು ವೈಚಾ-ರಿಕ ಹಾಗೂ ವೈಜ್ಞಾನಿಕ ಮನೋನೆಲೆಯಲ್ಲಿ ಹದಗೊಳಿಸುವಂಥದ್ದು ಅತ್ಯಂತ ಜರೂರಿನ ಕೆಲಸವೆಂದು ಅವರು ಸ್ಪಷ್ಟವಾಗಿ ಮನಗಂಡಿದ್ದರು. ಆದ್ದರಿಂದಲೇ ತಮ್ಮ ಅನುಕ್ಷಣದ ಸಮಯ ಸ್ವಲ್ಪವೂ ವ್ಯರ್ಥವಾಗದಂತೆ ನೋಡಿಕೊಂಡರು. ಯುವಜನತೆಯನ್ನು; ಮುಖ್ಯವಾಗಿ ಕಲಿಯುವ ಮನಸ್ಸುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವಿರತವಾಗಿ, ಕಾಲಬದ್ಧವಾಗಿ ಸಾಹಿತ್ಯ ರಚನೆ ಮಾಡಿದರು.
-ಪ್ರೊ.ಬಿ.ಎನ್.ಶ್ರೀರಾಮ್
Tejasvi also a great writer. ಆದರೆ ಕನ್ನಡದ ಉಳಿದೆಲ್ಲ ಲೇಖಕರಿಗಿಂತ ತೇಜಸ್ವಿ style ಬೇರೆಯೇ ಆಗಿದೆಯೆಂದರೆ ಅತಿಶಯ ಎನಿಸುವುದಿಲ್ಲ. ತೇಜಸ್ವಿಯವರಂತಹ ಸಂವೇದನಾಶೀಲ ಲೇಖಕ ಭಾರತದಲ್ಲಿ ಮಾತ್ರವಲ್ಲ; ಇಡೀ ಜಗತ್ತಿನಲ್ಲಿಯೇ ಅಪರೂಪ ಎಂದೇ ಹೇಳಬಹುದು.
-ಜಸ್ಟೀಸ್ ಎನ್.ಡಿ.ವೆಂಕಟೇಶ್
ತೇಜಸ್ವಿ ನಮ್ಮ ಕಾಲದ ಚರಿತ್ರೆಯನ್ನು ತಮ್ಮ ಕೃತಿಗಳ ಮೂಲಕ ವ್ಯಾಖ್ಯಾನ ಮಾಡುತ್ತಿದ್ದ ದೊಡ್ಡ ದಾರ್ಶನಿಕ ಲೇಖಕ. ಹಾಗಾಗಿ ಅವರ ಚೈತನ್ಯವೀಗ ಭೂಮಿಯಿಂದ ಆಕಾಶದವರೆಗೆ ಹಬ್ಬಿನಿಂತಿದೆ. ಅದೇ, 'ವಿಜ್ಞಾನವೋ, ಅಧ್ಯಾತ್ಮವೋ?' ಎಂಬ ಪ್ರಶ್ನೆಗೆ ಉತ್ತರವೂ ಆಗಿದೆ...
- ಡಿ.ಎಸ್.ನಾಗಭೂಷಣ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.