ಬಾಬಾಸಾಹೇಬರ ಬೆನ್ನ ಹಿಂದಿನ ದೊಡ್ಡ ಶಕ್ತಿಯಾಗಿ ನಿಂತವರು ರಮಾಬಾಯಿ ಅಂಬೇಡ್ಕರ್, ಡಾ. ಅಂಬೇಡ್ಕರ ರವರ ಜೀವನ ಸಂಗಾತಿಯಾಗಿ ಸಂಸಾರದ ಜವಾಬ್ದಾರಿ ಹೊರವುದಷ್ಟೇ ಅಲ್ಲದೆ, ಪ್ರತಿ ಹಂತದಲ್ಲೂ ಅವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ತಮ್ಮ ನಾಲ್ಕು ಮಕ್ಕಳು ಅಗಲಿದಾಗಲೂ ಎದೆಯಲ್ಲಿ ಮಡುಗಟ್ಟಿದ ದುಃಖದ ಅಲೆಗಳು ಬಾಬಾಸಾಹೇಬರಿಗೆ ತಟ್ಟದಂತೆ ಕಾಪಿಟ್ಟುಕೊಂಡು ಅವರ ಓದು ಮತ್ತು ಹೋರಾಟಕ್ಕೆ ಜತೆಯಾದರು. ಆ ಸಂದರ್ಭದ ಅವರ ಯಾತನೆಯ ದಿನಗಳು ಎಂಥಹ ಕಠಿಣ ಹೃದಯಗಳನ್ನೂ ಕರಗಿಸಬಲ್ಲದು. ನಿಜವೆಂದರೆ, ರಮಾಬಾಯಿ ಹೊರತಾಗಿ ಮತ್ಯಾರಿಗೂ ಈ ಸಂಯಮದ ಬದುಕು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಬಾಬಾಸಾಹೇಬರು ರಮಾತಾಯಿಗೆ ಬರೆದ ಪತ್ರಗಳೇ ಕನ್ನಡಿಯಾಗಿವೆ. ಅವು ಬಾಬಾಸಾಹೇಬರು 'ರಮಾಯಿ' ಬಗೆಗೆ ಇಟ್ಟುಕೊಂಡ ಅದಮ್ಯ ಪ್ರೀತಿಯ ನೂಲುಗಳಿಂದ ಹೆಣೆದ ಸಮತೆಯ ಬಟ್ಟೆಯಂತೆ ಗೋಚರಿಸುತ್ತವೆ. ಚರಿತ್ರೆಯ ಪುಟಗಳಲ್ಲಿ ದಲಿತರ ಬದುಕು ಹಸನಾಗಲಿಕ್ಕೆ ತನ್ನನ್ನೇ ತೇದುಕೊಂಡ ರಮಾಬಾಯಿ ಅವರ ತ್ಯಾಗಕ್ಕೆ ಚಾರಿತ್ರಿಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಹೋರಾಟದ ನಾಯಕಿ ಅಶ್ವಿನಿ ಮದನಕರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ರಮಾತಾಯಿಯ ಕುರಿತು ಪ್ರಾಜ್ಞರು ಬರೆದ ಈ ನುಡಿಚಿತ್ರದ ಕೃತಿಯು ಕನ್ನಡಿಗರ ಮನೆ ಮನವನ್ನು ತಲುಪಲಿ ಎಂದು ಹಾರೈಸುತ್ತೇನೆ.

ಡಾ. ಸುರೇಶ ಎಲ್. ಶರ್ಮಾ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.