Your cart is empty now.
ನಾನು ಈ ಕವಿ ಬತ್ತಲೇಶ್ವರನ ಬರವಣಿಗೆಯನ್ನು ಮೆಚ್ಚಿದ್ದೇನೆ; ಅವನ ಸರಳ ದೇಸಿಗಳು, ಉಪಮೆಗಳು, ಕಣ್ಮುಂದೆ ಚಿತ್ರ ಕಟ್ಟಬಲ್ಲ ವರ್ಣನೆಗಳು ನನಗೆ ಸಂತೋಷವನ್ನು ಕೊಟ್ಟಿವೆ. ಆತ ನನಗೆ ರಾಮಾಯಣದ ಪಾಠವನ್ನು ವಿಲಾಸವನ್ನಾಗಿ ಮಾಡಿ ತೋರಿಸಿದ್ದಾನೆ. ಅದರ ಹೆಸರಿನ ವಿಚಾರ 'ಕೌಶಿಕ' ರಾಮಾಯಣವೆಂದು ರೂಢಿಯಿಂದ ಬಂದಿರುವ ಹೆಸರು ನನ್ನ ಆಸುಪಾಸಿನಲ್ಲಿ ಪ್ರಚಾರದಲ್ಲಿದೆ. ಒಂದೆರಡು ತಾಡವಾಲೆಗಳಲ್ಲಿ 'ಕೌಶಿಕ ರಾಮಾಯಣ ಬರೆಯುವುದಕ್ಕೆ ಶುಭಮಸ್ತು' ಎಂದೂ ಸೂಚಿಸಿದ್ದಾರೆ. ಕವಿಯು ಎಲ್ಲೂ ಹಾಗೆ ಹೇಳಿಲ್ಲ. ಆತ ಮೂಲ ಕವಿಯಾದ ವಾಲ್ಮೀಕಿಯ ಹೆಸರನ್ನೇ ಸೂಚಿಸಿದ್ದಾನೆ. ಅವನು 'ಛೋಟಾ' ವಾಲ್ಮೀಕಿ ಎಂದು ಅನಿಸಿಕೊಳ್ಳುವುದಕ್ಕೂ ಪ್ರಯತ್ನಿಸಿಲ್ಲ. ಹಲವಾರು ರಾಮಾಯಣಗಳಿರುವಾಗ, ಇದಕ್ಕೂ ಒಂದು ವಿಶೇಷಣ ಬೇಕೇ ಬೇಕು. ವಸಿಷ್ಠ ರಾಮಾಯಣವೂ ಇದೆ. ಇಲ್ಲಿನ ಪ್ರಸಂಗದಲ್ಲಿ ರಾಮ, ಲಕ್ಷ್ಮಣರು ತಮ್ಮ ವೈರಿಗಳಾದ ಇಂದ್ರಜಿತು, ರಾವಣರನ್ನು ನಾಶಪಡಿಸಲು ಬಿಲ್ಲು ಹಿಡಿದಾಗಲೆಲ್ಲವೂ, ತಮ್ಮ ಗುರುವಾದ ಕೌಶಿಕನನ್ನು ನೆನೆದುದನ್ನು ಈ ಕವಿ ಸೂಚಿಸಿದ್ದಾನೆ. ರಾಮಾಯಣದಲ್ಲಿ ಅವರಿಗೆ ನೆರವಾದ ಶಸ್ತ್ರ ಸಾಮರ್ಥ್ಯವು ಕೌಶಿಕನಿಂದ ದೊರಕಿದ್ದೆಂಬ ಅರ್ಥದಲ್ಲಿ 'ಕೌಶಿಕ' ಎಂಬ ವಿಶೇಷಣವನ್ನು ಬಳಸಿದ್ದರೆ, ಅದು ಸಾಧುವೇ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.