Free Shipping Charge on Orders above ₹300

Shop Now

Zero Balance (poetry) Sale -10%
Rs. 135.00Rs. 150.00
Vendor: BEETLE BOOK SHOP
Type: PRINTED BOOKS
Availability: 81 left in stock

‘ಜ್ಹೀರೋ ಬ್ಯಾಲೆನ್ಸ್’ ಕವಿ ಶ್ರುತಿ ಬಿ.ಆರ್ ಅವರ ಕವನ ಸಂಕಲನ. ಹಿರಿಯ ಕವಿ ಡಾ.ಎಚ್.ಎಲ್. ಪುಷ್ಪಾ ಅವರು ಬೆನ್ನುಡಿ ಬರೆದು‘ ಶ್ರುತಿ ಬಿ.ಆರ್. ವೃತ್ತಿಯಿಂದ ವಾಣಿಜ್ಯ ತೆರಿಗೆ ಅಧಿಕಾರಿ, ಪ್ರವೃತ್ತಿಯಿಂದ ಅಪ್ಪಟ ಕವಿ. ವೃತ್ತಿ ಪ್ರವೃತ್ತಿ ಎರಡೂ ಕೂಡಾ ಯಶಸ್ವಿ ಬದುಕಿನಲ್ಲಿ ಗೆಲ್ಲಲೇಬೇಕಾದ ಸಾಧ್ಯತೆಗಳು. ಕವಿತೆಗಳ ಕ್ಷೇತ್ರವನ್ನು ಕವಯತ್ರಿ ಗಂಭೀರವಾಗಿ ಅರಸಿಕೊಂಡಿದ್ದಾರೆ ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿ. ಹೂವಿನ ಚೆಂದವನ್ನು ಧನ್ಯತೆಯಲ್ಲಿ ಬೀಗಿ ವರ್ಣಿಸುವ ಕವಿ ಬೆರಳಿಗೆ ಮುಳ್ಳು ಚುಚ್ಚಿ ಅದು ಚೆಲ್ಲುವ ಒಂದು ಹನಿ ಮುತ್ತಿನಂತಹ ರಕ್ತಬಿಂದುವನ್ನೂ ಸಹ ಗಮನಿಸಬೇಕು. ಆ ರಕ್ತದ ಬಿಂದು ವಿವಿಧ ವರ್ಗ, ವರ್ಣ, ಲಿಂಗಗಳಲ್ಲಿನ ಶರೀರದಲ್ಲಿ ಅಡಗಿರುವ ಕ್ರಮ, ದುಮದುಮನೆ ಒಳಗೇ ಕುದಿಯುವ ಕ್ರಮವನ್ನೂ ಸಹ ಅರಿತಿರಬೇಕು. ಹುಟ್ಟಿನ ಕಾರಣಕ್ಕೆ ಜಾತಿ, ಸಾಮಾಜಿಕ ಸ್ಥಾನ ಲಭ್ಯವಾಗಿರುವ ಚರಿತ್ರೆಯನ್ನೂ ಅರಿತಿರಬೇಕು. ಈ ಎಲ್ಲ ಚಲನವಲನವನ್ನು ಶ್ರುತಿಯವರ ಕಾವ್ಯ ದಾಖಲಿಸುತ್ತದೆ ಎನ್ನುತ್ತಾರೆ ಎಚ್.ಎಲ್. ಪುಷ್ಪಾ. ಶ್ರುತಿ. ಅವರ ಕಾವ್ಯದಲ್ಲಿ ವೇಗವಾಗಿ ಪ್ರವಹಿಸಿ ಎಲ್ಲವನ್ನೂ ತಲುಪಿ ಮೆಚ್ಚಿಸಬೇಕೆಂಬ ಹಠವಿಲ್ಲ. ತಾನು ನಿಂತ ವರ್ತಮಾನ ಹಾಗೂ ಭವಿಷ್ಯವನ್ನು ಕಾಣಬಲ್ಲ ಮುನ್ಸೂಚಿ ನೋಟಗಳಿವೆ ಎಂದೂ ಪ್ರಶಂಸಿಸಿದ್ದಾರೆ.

Guaranteed safe checkout

Zero Balance (poetry)
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading