Your cart is empty now.
ಈ ಕೃತಿಯು ಸೈದ್ಧಾಂತಿಕವಲ್ಲ. ಆದರೆ ಹಿರಿದಾದ ಅರ್ಥದಲ್ಲಿ The personal is the political
ಎನ್ನುವ ಮಾದರಿಯ ರಾಜಕೀಯ ಕೃತಿಯಾಗಿದೆ. ಒಂದು ಕಡೆ ಬ್ಯಾಪಾರಿ ಎನ್ನುವ ಈ ವ್ಯಕ್ತಿಯ
ಬದುಕುವ ಛಲ, ಪ್ರತಿಭೆ, ಪ್ರತಿರೋಧ ಇವುಗಳ ಪ್ರಭಾವಿ ಕಥನವಾಗಿದ್ದರೆ ಇನ್ನೊಂದೆಡೆ ಆಧುನಿಕ
ಭಾರತದ, ಸಮಾಜದ ಅನಾರೋಗ್ಯ ಕ್ರೌರ್ಯಗಳ ಅನಾವರಣವೂ ಆಗಿದೆ. ದಲಿತ ಬರಹಗಳಲ್ಲಿ
ಬಹುಮುಖ್ಯವಾದುದು Testimonia ಅಂದರೆ ವೈಯಕ್ತಿಕ ಅನುಭವ ಹಾಗೂ ಚಿಂತನೆಗಳ
ನಿರೂಪಣೆ. ಈ ಆತ್ಮಕಥೆಯಲ್ಲಿ ದಲಿತ ಎಂದು ಪ್ರತ್ಯೇಕವಾಗಿ ಗುರುತಿಸುವ ಅಂಶಗಳು ಪ್ರಧಾನವಲ್ಲ.
ಬ್ಯಾಪಾರಿ ಆಧುನಿಕ ಭಾರತದ ಪ್ರಜೆ. ಇಲ್ಲಿಯ ರಾಜಕೀಯದಲ್ಲಿ ಕ್ರಿಯಾಶೀಲರು. ಜೊತೆಗೆ
ಅವರು ದಲಿತರೂ ಹೌದು. ಅವರ ಅನುಭವ ಜಾತಿಕೇಂದ್ರಿತವಲ್ಲದ ಸಮಕಾಲೀನ ದಂದುಗಗಳನ್ನು
ಒಳಗೊಂಡಿದೆ. ನಾಗಭೂಷಣರ ಅನುವಾದದ ಸಾಧನೆ ಇರುವುದು ಈ ಶೈಲಿಯನ್ನು ಸಮರ್ಥವಾಗಿ
ಬಳಸಿಕೊಂಡಿರುವುದರಲ್ಲಿ ಹೇಳುತ್ತಿರುವ ಘಟನೆಗಳು ಅತಿವಾಸ್ತವಿಕ ಎನಿಸುವಾಗಲೂ ಭಾಷೆ ತನ್ನ
ವಸ್ತು ನಿಷ್ಠತೆಗೆ ಅಂಟಿಕೊಂಡ ಭಾಷಾಡಂಬರವನ್ನು ದೂರವಿಡುತ್ತದೆ.
ಡಾ. ರಾಜೇಂದ್ರ ಚೆನ್ನಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.