Your cart is empty now.
ಮೌಖಿಕ ಧಾರೆಯಲ್ಲಿ ಜನರು ಕಟ್ಟಿದ ಪರ್ಯಾಯಗಳನ್ನು ನಾವು ಹೊಸತಾಗಿ ಕಟ್ಟಿಕೊಳ್ಳಬೇಕಿದೆ. ಜಾನಪದ ಅಧ್ಯಯನದ ಆರಂಭಕ್ಕೆ ಪ್ರವೇಶ ಪಡೆದ ಮೇಲುಜಾತಿಯ ಸಂಶೋಧಕರು ಜನತೆಯ ಪರ್ಯಾಯದ ಕಡೆ ಗಮನಹರಿಸಲಿಲ್ಲ. ಬದಲಾಗಿ ಯಥಾಸ್ಥಿತಿಯ ಮುಂದುವರಿಕೆಯಂತೆ ಎಲ್ಲವನ್ನೂ ರಮ್ಯವಾಗಿ ವರ್ಣಿಸಿ ಕೈತೊಳೆದುಕೊಂಡಂತಿದೆ. ಇದು ಇವರ ಕಾಲದ ಮಿತಿಯೂ ಇರಬಹುದು. ಈಗ ದಮನಿಯ ಸಮುದಾಯಗಳಿಂದ ಬಂದ ಯುವ ಸಮುದಾಯವೇ ಹೊಸ ಬಗೆಯ ಅಧ್ಯಯನ ವಿಶ್ಲೇಷಣೆಯನ್ನು ಶುರು ಮಾಡಬೇಕು. ಪ್ರಿಯ ಗೆಳೆಯ ಪ್ರಕಾಶ ಮಂಟೇದ, ಈ ಕೃತಿಯಲ್ಲಿ ಅಂತಹ ಅನೇಕ ಸುಳಿವುಗಳನ್ನು ನೀಡಿದ್ದಾರೆ. ಕೃತಿಯು ಚರ್ಚೆಗೆ ಒಳಗಾಗಲಿ.
-ಅರುಣ್ ಜೋಳದಕೂಡ್ಲಿಗಿ
ಸೇಡು ತೀರಿಸಿಕೊಳ್ಳುವ ತವಕಿಸುವ ಮನುಷ್ಯನ ಮೂಲಭೂತ ಅಂಗಾಂಗವನ್ನೇ ಕಳೆದುಕೊಂಡು, ದಯಾಮಯನಾಗಿಯೂ, ಕ್ಷಮಾರೂಪಿಯಾಗಿಯೂ ಬದುಕಲು ತುಡಿಯುವ ಜೀವ ಈ ಪ್ರಕಾಶ್ ಮಂಟೇದ ಹೆಸರಿಗೆ ತಕ್ಕಂತೆ ಪ್ರಕಾಶಮಾನವೂ ಹೌದು, ಉರಿಕೆಂಡವೂ ಹೌದು! ಅಕಾಡೆಮಿಕ್ ಪರಿಧಿಯಲ್ಲಿ ಜನಪದ ಮತ್ತು ಮಾನವಶಾಸ್ತ್ರವನ್ನು ಕಟ್ಟಿಕೊಡುವ ಇಲ್ಲಿನ ಲೇಖನಗಳ ಭಾಷೆ ಕನ್ನಡಕ್ಕೆ ಹೊಸದು. ಹೀಗೆ ಹೊಸದು ಬರೆದ ಕಾರಣಕ್ಕೆ ತೀವ್ರ ವಿರೋಧವನ್ನೂ ಎದುರಿಸಿ, ಬರವಣಿಗೆಯನ್ನು ತಣ್ಣನೆಯ ಕ್ರಾಂತಿಯ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಮಂಟೇದ, ಈ ಕಾಲಕ್ಕೆ ಬೇಕಾದ ಜೀವದ್ರವ್ಯವನ್ನು ತಾನು ಜೀವಿಸಿ ಅನುಭವಿಸಿದ ಅನುಭಾವದಿಂದ ಮೊಗೆದು ಲೇಖನದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕಾರಣಕ್ಕೆ ಇದೊಂದು ಮುಖ್ಯವಾದ ಕೃತಿ.
-ವಿ.ಆರ್.ಕಾರ್ಪೆಂಟರ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.