Free Shipping Charge on Orders above ₹400

Shop Now

THERIGATHA KANISIDA HENNU
(Boudha Dharmadalli Mahile) Sale -21%
Rs. 155.00 Rs. 195.00
Vendor: BEETLE BOOK SHOP
Type: PRINTED BOOKS
Availability: 97 left in stock

“ಮುಕ್ತಿಯ ಹಾದಿಯಲ್ಲಿ ಸಾಗುವಾಗ ಗಂಡು ಸ್ವಭಾವ ಮತ್ತು ಹೆಣ್ಣು ಸ್ವಭಾವ ಎನ್ನುವುದಕ್ಕೆ ಏನಾದರೂ ಪ್ರಸ್ತುತತೆ ಇದೆಯೇ," ಅನ್ನುವುದು ಥೇರೀ ಸೋಮಾಳ ಪ್ರಶ್ನೆ. ಇದು ಬೌದ್ಧಧರ್ಮದಲ್ಲಿ ಮಹಿಳೆಯನ್ನು ಕುರಿತ ಓದಿಗೆ ಹಲವು ಕಿಟಕಿಗಳನ್ನು ಒಟ್ಟಿಗೆ ತೆರೆಯುತ್ತದೆ. 2500 ವರ್ಷಗಳ ಹಿಂದಿನ ಸಮಾಜದಲ್ಲಿದ್ದ ವಿಭಿನ್ನ ಧರ್ಮಗಳಲ್ಲಿ ಮಹಿಳೆಯರು ಇರಲೇ ಇಲ್ಲ ಎನ್ನಬಹುದು. ಹಾಗಿದ್ದಾಗ ಅವರಿಗೆ ಸ್ವತಂತ್ರವಾಗಿ ಮುಕ್ತಿಸಾಧನೆ ಸಾಧ್ಯ ಎಂಬ ಕಲ್ಪನೆಯಂತೂ ಕನಸು ಬಿಡಿ. ಅವರೇನಿದ್ದರೂ ಮುಕ್ತಿಸಾಧನೆಗೆ ಅಡ್ಡಿ ಅನ್ನೋ ಅಂಬೋಣವಿತ್ತು ಅಷ್ಟೆ. ಹಾಗಂತ ಮಹಿಳೆಯರು ಮೋಕ್ಷಸಾಧನೆಗೆ ಅಡ್ಡಿ ಅನ್ನೋ ಅಂತಹ ಮಾತುಗಳು ಬೌದ್ಧ ಧರ್ಮದಲ್ಲಿ ಇರಲೇ ಇಲ್ಲ ಅಂತಲೂ ಅಂದುಕೊಳ್ಳಬಾರದು. ಅಷ್ಟಾದರೂ ಹೆಣ್ಣಿಗೆ ಸಂಬಂಧಿಸಿದಂತೆ ಬೌದ್ಧ ಧರ್ಮ ಬೇರೇನೆ. ಏಕೆಂದರೆ, ಮಹಿಳೆಯರಿಗೆ ಮೋಕ್ಷಸಿದ್ಧಿ ಸಾಧ್ಯ ಎಂದು ಬುದ್ಧ ಘಂಟಾಘೋಷವಾಗಿ ಹೇಳಿದ. ಚರ್ಚೆ, ಜಿಜ್ಞಾಸೆ, ಮುಕ್ತ ಸಂವಾದಗಳಿಗೆ ಬೇಕಾದ ಆವರಣ ಸೃಷ್ಟಿಯಾಗಿತ್ತು. 

ಹೆಣ್ಣುಮಕ್ಕಳು ಸ್ವತಂತ್ರವಾಗಿ, ದಿಟ್ಟವಾಗಿ ತಮಗೇನು ಬೇಕು ಅಂತ ಹೇಳೋದನ್ನು ಅದು ಸಾಧ್ಯವಾಗಿಸಿತ್ತು. ಹೆಣ್ಣುಮಕ್ಕಳು ನಿಯಮಗಳನ್ನು ಧೈರ್ಯವಾಗಿ ಪ್ರಶ್ನಿಸಿದರು. ಇಂದು ಕೂಡ ನಾವು ಚರ್ಚೆಮಾಡುವುದಕ್ಕೆ ಸಂಕೋಚ ಮಾಡಿಕೊಳ್ಳುವ ಮುಟ್ಟು, ಬಸಿರು, ಲೈಂಗಿಕ ಬಯಕೆಗಳು ಮುಂತಾದ ವಿಷಯಗಳನ್ನು ಅಂದು ಉಳಿದ ಭಿಕ್ಕುಗಳು ಮತ್ತು ಬುದ್ಧನ ಜೊತೆಗೆ ಚರ್ಚಿಸುವುದಕ್ಕೆ ಅವರಿಗೆ ಸಾಧ್ಯವಾಗಿತ್ತು. ಇದನ್ನು ಸ್ವೀಕರಿಸುವಂತಹ ಮನಃಸ್ಥಿತಿಯನ್ನು ಪುರುಷರಲ್ಲಿ ಮತ್ತು ಸಮಾಜದಲ್ಲಿ ಹುಟ್ಟುಹಾಕುವ ಅವಶ್ಯಕತೆ ಇಂದಿಗೂ ಇದೆ. ತಮ್ಮ ಕಾಲದೊಂದಿಗೆ ಆ ಮಹಿಳೆಯರು ಅನುಸಂಧಾನ ಮಾಡಿದ ಅಪೂರ್ವ ಕ್ರಮ ಇಂದಿಗೂ ಪ್ರಸ್ತುತ.

-
+

Guaranteed safe checkout

THERIGATHA KANISIDA HENNU (Boudha Dharmadalli Mahile)
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading