ಗರುಡ ಪುರಾಣವನ್ನು ಕೇವಲ ಮೃತರ ಅತ್ಮ ಶಾಂತಿಗಾಗಿ ಪಠಿಸಬೇಕೆಂಬ ತಪ್ಪು ಕಲ್ಪನೆಯಿದೆ. ಆದರೆ ಈ ಪುರಾಣವೂ ಸಹ ಎಲ್ಲಾ ಪುರಾಣಗಳಂತೆ ನಿತ್ಯಪಾರಾಯಣಕ್ಕೆ ಯೋಗ್ಯವಾದ ಪ್ರರಾಣ ಗ್ರಂಥವಾಗಿದೆ. ಸಾಕ್ಷತ್ ಶ್ರೀ ಮಹಾವಿಷ್ಣು ಗರುತ್ಮಂತಮನಿಗೆ ಹೇಳಿದಂತಹ ಮಾನವ ಮೋಕ್ಷ ಪ್ರದವಾದ ಗರುಡ ಪುರಾಣವನ್ನು ಮನೆಗಳಲ್ಲಿ ಇಟ್ಟು ಕೊಳ್ಳಬಾರದೆಂದು, ಸೂತಕದ ಸಮಯದಲ್ಲಿಯೇ ವಿನಃ ಇತರೇ ಸಮಯದಲ್ಲಿ ಪರಿಸಬಾರದೆಂದು ಕೆಲವರು ಹೇಳುತ್ತಾರೆ ಅದು ಕೇವಲ ತಪ್ಪು ಕಲ್ಪನೆಯಷ್ಟೇ. ಅದು ಸತ್ಯಕ್ಕೆ ದೂರವಾದುದು. ಈ ಗರುಡ ಪುರಾಣವನ್ನು ಮನೆಗಳಲ್ಲಿಟ್ಟು ಕೊಂಡು ಪರ್ವದಿನಗಳಂದು, ಪುಣ್ಯ ತಿಥಿಗಳಂದು ಪಠಿಸಬಹುದು. ಇದೊಂದು ಜ್ಞಾನ ಸರ್ವಸ್ವವೆಂದು ತಿಳಿಯಬೇಕು. ಗರುಡ ಪುರಾಣವು ಹೆಚ್ಚಾಗಿ ಮರಣಾನಂತರದಲ್ಲಿ ಜೀವಿಯು ಅನುಭವಿಸುವ ಶಿಕ್ಷೆಗಳ ಬಗ್ಗೆ ತಿಳಿಯಪಡಿಸಿದರೂ, ಪರೋಕ್ಷವಾಗಿ ಇದು ನಮಗೆ ಜ್ಞಾನವನ್ನು ಕ್ರಮ ಶಿಕ್ಷಣವನ್ನು, ಸಾಮಾಜಿಕ ಹೊಣೆಯನ್ನು ಬೋಧಿಸುತ್ತದೆ. ಗರುಡ ಪುರಾಣವೆಂಬ ಈ ಗ್ರಂಥವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಇಟ್ಟು ಕೊಂಡು ನಿತ್ಯ ಪಾರಾಯಣ ಮಾಡಿದರೆ ಸಮಾಜದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯಲು ದಿಕ್ಕೂಚಿ ಯಾಗುತ್ತದೆ ಈ ಗ್ರಂಥವನ್ನು ಹಂಸ ಪ್ರತಿಮೆಯೊಂದಿಗೆ ದಾನ ಮಾಡಿದರೆ ಉತ್ತಮ ಫಲವು ಲಭಿಸುತ್ತದೆಂದು ಹಿರಿಯರು ಹೇಳುತ್ತಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.