Your cart is empty now.
ROBERT.H. SCHULLER
ರಾಬರ್ಟ್ ಎಚ್. ಶುಲ್ಲರ್‌ರವರ “ಯಶಸ್ಸಿಗೆಂದಿಗು ಕೊನೆಯಿಲ್ಲ, ವಿಫಲತೆ ಎಂದಿಗು ಅಂತಿಮವಲ್ಲ” ಎಂಬ ಈ ಕೃತಿಯನ್ನು ಇಂಗ್ಲೀಷ್ ಮೂಲ ಕೃತಿಯಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ.
ರಾಬರ್ಟ್ ಎಚ್. ಶುಲ್ಲರ್‌ರವರನ್ನು ನಾರ್ಮನ್ ವಿನ್ಸೆಂಟ್ ಪೀಲೆಯವರ ಉತ್ತರಾಧಿಕಾರಿಯೆಂದು ವ್ಯಾಪಕವಾಗಿ ಗುರುತಿಸಲಾಗಿದೆ. ಅವರು ತಮ್ಮ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳ ಮೂಲಕ ಮಿಲಿಯಾಂತರ ಜನರಿಗೆ ಚಿರಪರಿಚಿತರಾಗಿದ್ದಾರೆ. ಅವರ ಅಧಿಕಾರದ ಘಳಿಗೆ ಎಂಬ ಟೀ.ವಿ. ಕಾರ್ಯಕ್ರಮ ವಿಶ್ವದಲ್ಲೇ ಅತಿ ಹೆಚ್ಚು ಜನರಿಂದ ನೋಡಲ್ಪಟ್ಟ ಕಾರ್ಯಕ್ರಮ.
ತಿ
ಶುಲ್ಲರ್‌ರವರು ತಮ್ಮ ಈ ಕೃತಿಯಲ್ಲಿ ಯಶಸ್ಸು ಮತ್ತು ವಿಫಲತೆಯ ನಡುವಣ ಸೂಕ್ಷ್ಮ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ವಿಫಲತೆಯನ್ನೆದುರಿಸಿದಾಗ ನಮ್ಮ ಮನಃಸ್ಥಿತಿ ಹೇಗಿರಬೇಕು ಎಂಬುದನ್ನು ಅನೇಕ ನಿದರ್ಶನಗಳೊಂದಿಗೆ ವಿವರಿಸಿದ್ದಾರೆ, ಮತ್ತು ಯಶಸ್ಸಿಗೆ ಕಾರಣವಾಗುವ ವಿವಿಧ ಹಂತಗಳನ್ನು ವಿವರಿಸಿದ್ದಾರೆ. ಯಶಸ್ಸು ಮತ್ತು ವಿಫಲತೆ ಅದರ ಆಯ್ಕೆ ನಿಮ್ಮದೇ ಆಗಿದೆ ಎಂಬುದನ್ನು ಸುಧೀರ್ಘವಾಗಿ ಉದಾಹರಣೆಗಳ ಸಮೇತ ವಿವರಿಸಿದ್ದಾರೆ. ನಮ್ಮ ಕನ್ನಡದ ಜನತೆ ನನ್ನ ಈ ಪರಿಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುವರೆಂಬ ಭರವಸೆ ನನಗಿದೆ.
- ಬಿ.ಎನ್. ಶೋಭಾದೇವಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.