Your cart is empty now.
ಬದುಕಿನ ನೈಜ ಘಟನೆಗಳನ್ನು ತೆರೆದಿಡುವಾಗ ಯಾವುದೇ ಕೀಳರಿಮೆಯೂ ನಮ್ಮನ್ನು ಬಾಧಿಸಬೇಕಾದದ್ದಿಲ್ಲ. ನಮಗೆ ಅವಮಾನವಾಯಿತೆಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಎಲ್ಲ ಸಮಾಜಗಳಲ್ಲಿಯೂ ಧರ್ಮದ ಹೆಸರಿನಲ್ಲಿ ಹಲವು ವಿಧಗಳಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಲೇ ಇದೆ. ಯಾವ ಸಮಾಜವೂ ನಮ್ಮ ಸಮಾಜಕ್ಕಿಂತ ಮೇಲೂ ಅಲ್ಲ; ಕೀಳೂ ಅಲ್ಲ. ಎಲ್ಲ ಸಮಾಜಗಳಲ್ಲೂ ಕುಂದುಕೊರತೆಗಳಿದ್ದೇ ಇವೆ. ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಸತಿಸಹಗಮನ ಪದ್ಧತಿ ಮುಂತಾದವುಗಳೆಲ್ಲವೂ ಯಾವ ಸಮಾಜಕ್ಕೂ ಗೌರವ ತರುವ ಪದ್ಧತಿಗಳಲ್ಲ. ಬಂಗಾಳೀ ಸಮಾಜದ ಬಾಲ್ಯ ವಿವಾಹ, ಬಾಲ ವಿಧವಾ ಸಮಸ್ಯೆ ಮುಂತಾದುವುಗಳನ್ನು ಶರತ್ ಚಂದ್ರ ಚಟರ್ಜಿ, ರವೀಂದ್ರನಾಥ್ ಠಾಗೋರ್ ಮುಂತಾದ ಮಹಾನ್ ಲೇಖಕರು ಸಾಹಿತ್ಯದ ಮೂಲಕ ತೆರೆದಿಡದೇ ಹೋಗಿದ್ದರೆ ಬಹುಶಃ ಇಂದಿಗೂ ಆ ಸಮಸ್ಯೆಗಳೆಲ್ಲ ಪರಿಹಾರ ಕಾಣದೆ ಯಾವ ರೀತಿ ಉರಿಯುತ್ತಿದ್ದುವು ಎಂದು ಹೇಳುವುದು ಕಷ್ಟ. ಎಲ್ಲ ಸಮಾಜಗಳೂ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಾಹಿತ್ಯದ ಮೂಲಕ ಪ್ರತಿಬಿಂಬಿಸುತ್ತಾ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಪರಿಪೂರ್ಣವಾದ, ಶೋಷಣಾ ರಹಿತ ಸಮಾಜ ಯಾವುದೂ ಇಲ್ಲ. ಎಲ್ಲ ರೀತಿಯ ಅನಿಷ್ಟಗಳನ್ನೂ ಒಕ್ಕೊರಲಿನಿಂದ ಪ್ರತಿಭಟಿಸಿದಾಗಲೇ ಶೋಷಣೆರಹಿತ ನವಸಮಾಜ ನಿರ್ಮಾಣಕ್ಕೊಂದು ತಳಹದಿ ನಿರ್ಮಿಸಲು ಸಾಧ್ಯ ಎಂಬುದನ್ನು ಮಾತ್ರ ನಾನು ಹೇಳಬಯಸುತ್ತೇನೆ.
- ಸಾರಾ ಅಬೂಬಕ್ಕರ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.