Your cart is empty now.
ತನ್ನ ಬದುಕನ್ನು ತಾನೇ ಬದುಕಬೇಕು. ತನ್ನ ಅನುಭವಗಳ ಶಿಲುಬೆಯ ಭಾರವನ್ನು ಬಾಳಿನುದ್ದಕ್ಕೂ ತಾನೇ ಹೊರಬೇಕು. ತನ್ನ ಜೀವನದ ರೀತಿನಿಯಮಗಳನ್ನು, ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲುದೇ ಹೊರತು,ವರದಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ ಪ್ರಶ್ನೆಯುಳ್ಳ, ಬಹುಷಃ ಕನ್ನಡದ ಮೊತ್ತಮೊದಲಿನ ವಿಶಿಷ್ಟ ಕಾದಂಬರಿ 'ಮುಕ್ತಿ'
ಕಾದ೦ಬರಿಯ ಕೇಂದ್ರವ್ಯಕ್ತಿ ಗೌರೀಶ, ತನಗೆ ಬಂದ ಪ್ರಚಂಡ ಅನುಭವಗಳಿಂದ, ರೂಪ ಆಕಾರವಿಲ್ಲದೆ ಘಾಸಿಗೊಳಿಸುವ ಭೂತಕಾಲದ ಭೂತದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟವೇ ಈ ಕಾದಂಬರಿಯ ವಸ್ತು ತಾನು ಪಾರಾಗಬಯಸುವ ಈ ನಿರಾಕಾರ ಅನುಭವಗಳಿಗೆ ಭಾಷೆಯಲ್ಲೇ ಒಂದು ಆಕಾರ ಕೊಡಬಯಸಿದಾಗ ಹುಟ್ಟಿದ ಆಕೃತಿ ಬದ್ಧವಾದ ನೆನವರಿಕೆಯೇ ಈ ಕಾದಂಬರಿಯ ಹರಹು. ಬದುಕು ಮತ್ತು ಕಲೆಗಳ ನಡುವಿರುವ ಸಂಬಂಧವನ್ನು ಅರಿಯುವ ದೃಷ್ಟಿ ಈ ಕಾದಂಬರಿಯ ತಂತ್ರವನ್ನು ನಿಶ್ಚಯಿಸಿದೆ.
ಬದುಕಿನಿಂದ ಪಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕತೆ, ಅದೇ ತಾನೇ ಜೀವ ತಳೆಯುತ್ತಿರುವ ಆರೋಗ್ಯವಂತ ಸದೃಢ ಹೊಸ ಸಂಬಂಧದ ಸೂಚನೆಯೊಂದಿಗೆ ಮುಗಿಯುತ್ತದೆ. ಮೇಲುನೋಟಕ್ಕೆ ಅನೈತಿಕವೆನ್ನಿಸಬಹುದಾದ ಸಂಬಂಧದ ನಿಜವಾದ ಅರ್ಥಮೌಲ್ಯಗಳನ್ನು ಅರಿಯುವುದೇ ಇಡೀ ಕಾದ೦ಬರಿಯ ಕಾಳಜಿಯಾಗಿದೆ.
ಅನುಭವವನ್ನು ನೋಡುವ ದೃಷ್ಟಿಯಲ್ಲಿಯಂತೆ ಅದನ್ನು ಭಾಷೆಯಲ್ಲಿ ಸಾಕಾರಗೊಳಿಸುವಲ್ಲಿ ವ್ಯಕ್ತಪಡಿಸಿದ ದಿಟ್ಟತನ, ಪ್ರಾಮಾಣಿಕತೆ, ಉಪಯೋಗಿಸಿದ ತಂತ್ರದಲ್ಲಿನ ನಾವೀನ್ಯ- ಈ ಕಾದಂಬರಿಯ ಮಹತ್ವದ ಗುಣಗಳಾಗಿವೆ.
- ಯಶವಂತ ಚಿತ್ತಾಲ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.