ಬೇಲೂರು ಕೇಶವದಾಸರು ವಿಜಯದಾಸರ ಪೀಳಿಗೆಗೆ ಸೇರಿದ ಪ್ರಖ್ಯಾತ ಹರಿದಾಸರ ವಂಶದಲ್ಲಿ 1844ರಲ್ಲಿ ಮುಕ್ಕೋಟು ಏಕಾದಶಿಯೆಂದು ಜನಿಸಿದರು. ತಂದೆ ವೆಂಕಟಸುಬ್ಬದಾಸರು ಸುರಪುರದ ಆನಂದದಾಸರ ಶಿಷ್ಯರು ; ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಿಂದ ಬೇಲೂರಿಗೆ ಬಂದು ಶ್ರೀ ಚನ್ನಕೇಶವನ ಸನ್ನಿಧಿಯಲ್ಲಿ ನೆಲೆಸಿದ್ದರು. ಬೇಲೂರು ಕೇಶವದಾಸರು ಬೇಲೂರಿನ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗಮಾಡಿ ಉಪನಯನವಾದ ಬಳಿಕ ಅಲ್ಲಿನ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಧ್ಯಯನಗಳನ್ನು ಮಾಡಿದರು. ತುಮಕೂರು ತರಗತಿಗಳಲ್ಲಿ ವ್ಯಾಸಂಗ ಮಾಡಿ, ಮೆಟ್ರಿಕ್ಯುಲೇಶನ್‌ನಲ್ಲಿ ಉತ್ತೀರ್ಣರಾಗಿ ಹರಿದಾಸಸಾಹಿತ್ಯ ಸಂಗೀತಗಳನ್ನು ಆಳವಾಗಿ ಅಭ್ಯಸಿಸಿದರು. ಕಾವ್ಯವ್ಯಾಸಂಗ, ಹಾಸನಗಳಲ್ಲಿ ಪ್ರೌಢಶಾಲೆಯ ಶ್ರೀಯುತರು ಕೀರ್ತನಕಾರರಾಗಿ ಕರ್ನಾಟಕದಲ್ಲೆಲ್ಲ ಸಂಚರಿಸಿ ನಾಲ್ಕು ದಶಕ ಕಾಲ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆರ್ಯ ಸಂಸ್ಕೃತಿಯಲ್ಲಿ ಗೌರವ ಮೂಡುವಂತೆ ಕೀರ್ತನಸೇವೆ ಸಲ್ಲಿಸಿದರು. ಇವರ ಕೀರ್ತನ ಶೈಲಿಯನ್ನು ಮೆಚ್ಚಿಕೊಂಡು ಪಂಡಿತ ಮದನಮೋಹನ ಮಾಲಿವೀಯ ಅವರು ಇವರಿಗೆ ಕೀರ್ತನಾಚಾರ ಎಂಬ ಬಿರುದನ್ನಿತ್ತು ಗೌರವಿಸಿದರು. ಬೇಲೂರು ಕೇಶವದಾಸರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲುಗೊಂಡ ಸ್ವಾತಂತ್ರ್ಯ ಯೋಧರೂ ಆಗಿದ್ದರು. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನ್ನು ಕೀರ್ತನದ ಮೂಲಕ ಸಂಘಟಿಸಿ ಪ್ರಚಾರ ಮಾಡಿದರು. ಶ್ರೀಯುತರ ಆಹ್ವಾನವನ್ನು ಮನ್ನಿಸಿ ಗಾಂಧೀಜಿಯವರು 1927 ರಲ್ಲಿ ಬೇಲೂರಿಗೆ ಭೇಟಿ ನೀಡಿದ್ದರು. ಕೀರ್ತನಕಾರರಷ್ಟೆ ಅಲ್ಲದೆ ಉತ್ಕೃಷ್ಟ ಗ್ರಂಥಕಾರರಾಗಿ ಶ್ರೀಯುತರು 'ಕರ್ನಾಟಕ ಭಕ್ತವಿಜಯ' 'ಶ್ರೀರಾಘವೇಂದ್ರ ವಿಜಯ', 'ಶ್ರೀಕನ್ಯಕಾಪುರಾಣ', 'ಹರಿದಾಸ ಸಾಹಿತ್ಯ ವಿಮರ್ಶೆ', 'ಶ್ರೀರಾಮ ಕೃಷ್ಣ ವಚನಾಮೃತ' ಮುಂತಾದ ಅಮೂಲ್ಯ ಕೃತಿಗಳನ್ನು ರಚಿಸಿ 1948 ರಲ್ಲಿ ಆಶ್ವಯುಜ ಬಹುಳ ತ್ರಯೋದಶಿಯಂದು ಇಹಲೋಕ ವ್ಯಾಪಾರ ಮುಗಿಸಿ ಕೀರ್ತಿಶೇಷರಾದರು. ಶ್ರೀಯುತರ ಕೃತಿಗಳಲ್ಲಿ ಮಾನವತಾ ಕಳಕಳಿಯಿಂದ ಕೂಡಿದ ಭಾಗವತ ಧರ್ಮದ ಲೌಕಿಕ ಮೌಲ್ಯಗಳನ್ನೂ ಸಮಾಜೋದ್ಧಾರದ ಸಮಾಜೋದ್ಧಾರದ ಆಶಯವನ್ನೂ ಸಂತತವಾಗಿ ಕಾಣಬಹುದಾಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.