Sheru Maarukatte
by;Rangaswamy Mookanahalli
Sawanna Enterprises
ಷೇರು ಮಾರುಕಟ್ಟೆ ಎಂದ ತಕ್ಷಣ ಬಹುತೇಕರದು ತೆನಾಲಿ ರಾಮನ ಬೆಕ್ಕಿನ ಕಥೆ! ಹಾಲು ತಣ್ಣಗಿದ್ದರೂ ಬೆಕ್ಕು ಬಟ್ಟಲನ್ನ ಮುಟ್ಟಲು ಹೆದರುವ ಹಾಗೆ, ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದ್ದರೂ ‘ಅಯ್ಯೋ ಅದು ನನಗಲ್ಲಪ್ಪ’ ಎನ್ನುವ ಮನೋಭಾವ. ಹೀಗೇಕಾಗುತ್ತದೆ? ಎನ್ನುವುದನ್ನ ನಾವು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸ್ವಲ್ಪ ಈ ಬಗ್ಗೆ ಯೋಚಿಸಿದರೆ ಢಾಳವಾಗಿ ಕಣ್ಣಿಗೆ ರಾಚುವ ಸತ್ಯವೇನು ಗೊತ್ತೇ? ಕಲಿಕೆಯ ಕೊರತೆ, ಮಾಹಿತಿಯ ಕೊರತೆ. ನೀವೊಂದು ಆಟದಲ್ಲಿ ಭಾಗಿಯಾಗಿರುತ್ತೀರಿ ಎಂದುಕೊಳ್ಳಿ, ಆ ಆಟಕ್ಕೆ ಸಂಬಂಽಸಿದ ನಿಯಮಾವಳಿಗಳನ್ನ ತಿಳಿದುಕೊಳ್ಳದೆ ನೀವು ಆಟದಲ್ಲಿ ಪಾಲ್ಗೊಂಡರೆ ಗೆಲ್ಲುವ ಮಾತು ಬಹುದೂರ, ಸೋಲು ಶತಸ್ಸಿದ್ಧ. ಹೀಗಾಗಿ ಈ ಪುಸ್ತಕದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಪ್ರಮುಖ ಅಂಶಗಳಾದ ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್ ಜೊತೆಗೆ ಹೆಚ್ಚಾಗಿ ಪ್ರಸ್ತಾಪವಾಗದೆ ಇರುವ ಆದರೆ ಬಹುಮುಖ್ಯವಾದ ಸೆಂಟಿಮೆಂಟ್ ಅನಾಲಿಸಿಸ್ ಬಗ್ಗೆ ಕೂಡ ಮಾಹಿತಿಯನ್ನ ನೀಡಲಾಗಿದೆ. ಇದರ ಜೊತೆಗೆ ಪ್ರೈಮರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಡಿರೈವೆಟಿವ್ಸ್ ಮಾರುಕಟ್ಟೆಯ -ಚರ್ ಮತ್ತು ಆಪ್ಷನ್ ಮಾರುಕಟ್ಟೆ ಬಗ್ಗೆ ಕೂಡ ಒಂದಷ್ಟು ತಿಳಿಸುವ ಪ್ರಯತ್ನವಿದೆ. ಹೂಡಿಕೆಯಿಂದ ಬರುವ ಅಪಾಯಗಳೇನು? ಷೇರುದಾರನ ಹಕ್ಕುಗಳೇನು? ಷೇರಿನ ಮೇಲಿನ ತೆರಿಗೆ ನೀತಿಯೇನಿದೆ? ಅಲ್ಗೊ ಟ್ರೇಡಿಂಗ್, ಪಿಎಂಎಸ್, ಸೆಕ್ಯುರಿಟೀಸ್, ಷೇರು ಮಾರುಕಟ್ಟೆ ಟರ್ಮಿನಾಲಜಿಗಳು, ಹೂಡಿಕೆದಾರನ ರಕ್ಷಣೆ, ಅಹವಾಲು, ಪರಿಹಾರದ ತನಕ ಷೇರು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಬೇಕಾದ ಸಂಪೂರ್ಣ ಮಾಹಿತಿಯನ್ನ ಕಟ್ಟಿಕೊಡುವ ಪುಟ್ಟ ಪ್ರಯತ್ನ ಇಲ್ಲಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.