Free Shipping Charge on Orders above ₹300

Shop Now

Science in Religious Samskaras Kannada edition Sale -10%
Rs. 360.00Rs. 400.00
Vendor: BEETLE BOOK SHOP
Type: PRINTED BOOKS
Availability: 5 left in stock
ನುಡಿ-ನಮನ
ಪರಮಪೂಜ್ಯ ಡಾ|| ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರರು ವೀರಾಪುರ ಹಿರೇಮಠ, ತಾ|| ಸಾಗರ.
ಇವರು ನಾಡಿನ ಆಧ್ಯಾತ್ಮಿಕ ಪ್ರಪಂಚಕ್ಕೆ ಅತ್ಯಂತ ಚಿರಪರಿಚಿತ ಪೂಜನೀಯರು. ಪೂಜ್ಯರ ಚಿಂತನೆಗಳು,
ಕೇವಲ ಒಂದು ಧರ್ಮ-ಜಾತಿಗೆ ಸೀಮಿತಗೊಳ್ಳದೆ, ಎಲ್ಲಾ ಜಾತಿ-ಧರ್ಮದವರಲ್ಲಿರುವ ಮೌಡ್ಯಗಳ ಬಗ್ಗೆ
ನಿರಂತರ ಜಾಗೃತಿ ಮೂಡಿಸುವ ಬಹುದೊಡ್ಡ ಆಧ್ಯಾತ್ಮಿಕ ಕಳಕಳಿ ಹೊಂದಿರುವ ಶ್ರೀಗಳು.
ನಾನು ಕಳೆದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಶ್ರೀ ಮಠದ ಭಕ್ತನಾಗಿ, ಗುರುಗಳ ಅತ್ಯಂತ
ಹತ್ತಿರದ ಒಡನಾಡಿಯಾಗಿ, ಅವರ ಆಧ್ಯಾತ್ಮಿಕ ಚಿಂತನೆಗಳನ್ನು ಶ್ರೇಷ್ಠ ಉಪನ್ಯಾಸವನ್ನು ಸವಿಯುತ್ತಾ
ಬಂದವನು. ಶ್ರೀಗಳ ಪರಮಚಿಂತನೆಗಳು ಹಾಗೂ ಭಗವಂತ ಅವರಿಗೆ ಕರುಣಿಸಿರುವ ಶ್ರೇಷ್ಠಜ್ಞಾನ ಸಮಾಜಕ್ಕೆ
ಮಾರ್ಗದರ್ಶನವಾಗಲೆಂದು ಚಿಂತಿಸಿದ ನನ್ನಂತಹ ಅವರ ಅನೇಕ ಶಿಷ್ಯರುಗಳು, ಇವರಲ್ಲಿ ಮನವಿ ಮಾಡಿ
ಗುರುಗಳ ಆಧ್ಯಾತ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪರಂಪರೆಯ ಎಲ್ಲ ಶ್ರೇಷ್ಠ ಜ್ಞಾನವು ಪುಸ್ತಕ
ರೂಪದಲ್ಲಿರಬೇಕೆಂದು ಪ್ರಾರ್ಥನೆ ಮಾಡಿದ ಫಲವೇ ಇಂದು ನಮ್ಮೆದುರಿಗೆ ಇರುವ ಅವರ ಅನೇಕ
ಗ್ರಂಥಗಳು ಮತ್ತು ಲೇಖನಗಳು ಪ್ರಕಟಗೊಂಡು ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಅನನ್ಯ
ಕೊಡುಗೆಯಾಗಿವೆ ಎನ್ನಬಹುದು.
ಪೂಜ್ಯ ವೀರಾಪುರ ಶ್ರೀಗಳು ತಂದೆಯನ್ನೇ ಗುರುವಾಗಿ ಸ್ವೀಕರಿಸಿ ಅವರಿತ್ತ ವಿದ್ಯೆಯ ಬಲದಿಂದಲೇ
ಜ್ಞಾನವನ್ನು ಪಡೆದವರು. ಭದ್ರಾವತಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ
ಚೌಳಹಿರಿಯೂರು ಹಿರೇಮಠದ ಪರಂಪರಾಗತ ವೀರಾಪುರ ಹಿರೇಮಠದಲ್ಲಿ
ವಂಶಪರಂಪರೆಯಂತೆ ಪಟ್ಟಾಧಿಕಾರಿಗಳಾಗಿ ಆಶ್ರಮ ಧರ್ಮವನ್ನು
ಪಾಲಿಸುತ್ತಲೆ, ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣದಲ್ಲಿ
ಸ್ನಾತಕೋತ್ತರ ಪದವೀಧರರಾಗಿ, ಇವರು ಬರೆದ “ಭಾರತೀಯ ಸಂಸ್ಕಾರ
ಹಾಗೂ ಸಾಂಸ್ಕೃತಿಕ ಪರಂಪರೆ” ಎಂಬ ಮಹಾಪ್ರಬಂಧವನ್ನು ಪರಿಗಣಿಸಿ
ಅಮೇರಿಕಾದ ಕಾಸ್ಕೋಪೊಲಿಟನ್ ಯೂನಿವರ್ಸಿಟಿಯವರು ಅವರಿಗೆ ಗೌರವ
ಡಾಕ್ಟರೇಟ್ ಪದವಿ ನೀಡಿದ್ದಾರೆ. ನಂತರ “ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ
ವೈಜ್ಞಾನಿಕ ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ
ವಿಶ್ವವಿದ್ಯಾಲಯ, ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್.) ಪದವಿ ನೀಡಿ ಗೌರವಿಸಿದೆ. ರಾಯಚೂರಿನ ಕೃಷಿ
ವಿಶ್ವವಿದ್ಯಾಲಯ ಶ್ರೀಗಳನ್ನು ಆಮಂತ್ರಿಸಿ. ಇವರು ಬರೆದ “ಋಷಿ ಮುನಿಗಳ ಕೃಷಿ” ಎಂಬ ಗ್ರಂಥವನ್ನು
ಮುದ್ರಿಸಿ ಗೌರವಿಸಿದ್ದಾರೆ, ಇವರು ಬರೆದ ದೇವಿ ಮಹಾತ್ಮಿಯ ಬಗ್ಗೆ ಅವರ ವೈಚಾರಿಕ ವಿಶ್ಲೇಷಣೆ ಎಂಬ
ಗ್ರಂಥವನ್ನು ಭಕ್ತಸ್ತೋಮ ಮಸ್ಕಿ ನಗರದಲ್ಲಿ ಆನೆಯ ಮೇಲೆ ಅಂಬಾರಿ ಉತ್ಸವ ನಡೆಸಿದ್ದು ಹೆಗ್ಗಳಿಕೆಗೆ
ಪಾತ್ರವಾಗಿದೆ.
:
ಈಗಾಗಲೇ ಇವರಿಂದ ಅನೇಕ ಲೇಖನಗಳು ಮತ್ತು ಕೃತಿಗಳು ರಚನೆಯಾಗಿ ಜನಮನಕ್ಕೆ
ತಲುಪಿರುವುದು ಹೆಮ್ಮೆಯ ವಿಚಾರ ಹಾಗೂ ಕನ್ನಡ ಸಾಹಿತ್ಯದ ಬಗೆಗೆ ಅವರಿಗಿರುವ ಪ್ರಬುದ್ಧತೆ
ಭಾಷಾಶಾಸ್ತ್ರದಲ್ಲಿನ ಪರಿಣತೆ, ಶಿಲ್ಪಶಾಸ್ತ್ರ ಮತ್ತು ವಾಸ್ತುಶಾಸ್ತ್ರಗಳ ಮೇಲಿನ ಅವರ ಆಳವಾದ ಅಧ್ಯಯನ
ಇದೆಲ್ಲಕ್ಕಿಂತ ಹೆಚ್ಚು ಶಬ್ದ-ಶಬ್ದಗಳ ನಡುವಿನ ಪದಗಳಿಗೆ ವಿನೂತನ ವ್ಯಾಖ್ಯಾನ ಹಾಗೂ ಆಧ್ಯಾತ್ಮಿಕ ಪರಿಕಲ್ಪನೆ
ತುಂಬಾ ಶ್ಲಾಘನೀಯವಾದುದು. ಇಂತಹ ಶ್ರೀಗಳಿಗೆ ಈ ನಾಡಿನ ಕನ್ನಡದ ಮನಸ್ಸುಗಳ ಪರವಾಗಿ
ನಮನಗಳನ್ನು ಸಲ್ಲಿಸುತ್ತಾ ಇವರಿಂದ ಇನ್ನು ಹೆಚ್ಚಿನ ಸಂಶೋಧನೆ ನಡೆಯಲೆಂದು ಆಶಿಸುವ
ಡಾ|| ಆರ್ ಎಮ್ ಕುಬೇರಪ್ಪ .A, Ph.D (USA)
ರಾಣೀಬೆನ್ನೂರು.

Guaranteed safe checkout

Science in Religious Samskaras Kannada edition
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading