Your cart is empty now.
ಶೀರ್ಷೇಂದು ಮುಖೋಪಾಧ್ಯಾಯ ಲೋಕದಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಗಮನ
ಸೆಳೆದವರು. ಹದವಾದ ಭಾಷೆ ಹಾಗೂ ಸಂಯಮದ ನಿರೂಪಣೆ ಅವರ ಕಥೆಗಳಲ್ಲಿ ಕಾಣುವ ಪ್ರಧಾನ ಅಂಶಗಳು. ಕಥಾವಸ್ತುವಿನ ಆಯ್ಕೆಯ ವಿಷಯದಲ್ಲಿ ಇವರ ಎಚ್ಚರಿಕೆಯ ನಡೆ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವೇ ಪಾತ್ರಗಳ ಮೂಲಕ, ಅಚ್ಚುಕಟ್ಟಾದ ಪರಿಸರದ ವರ್ಣನೆಯೊಂದಿಗೆ ಸಾಗುವ ಇವರ ಕಥೆಗಳು ಪ್ರತಿಯೊಂದು ಹಂತದಲ್ಲಿಯೂ ಕುತೂಹಲವನ್ನು
ಕಾಪಾಡಿಕೊಳ್ಳುತ್ತವೆ ಎನ್ನುವುದು ಗಮನೀಯ. ಶೀರ್ಷೇಂದುರವರು
ವಿವಿಧ ಕಾಲಘಟ್ಟದಲ್ಲಿ ಬರೆದಿರುವ ಕಥೆಗಳನ್ನು ಆಯ್ದು ಒಂದು ಕಡೆಯಲ್ಲಿ ನೀಡುವ ಪ್ರಯತ್ನ ಶ್ಲಾಘನೀಯ, ಬಂಗಾಳದ ಪರಿಸರ, ಕುಟುಂಬ ವ್ಯವಸ್ಥೆ, ಚಿಂತನಾ ವಿಧಾನ, ಜೀವನಶೈಲಿ ಇತ್ಯಾದಿಗಳ ಮೇಲೆಯೂ ಇಲ್ಲಿನ ಕಥೆಗಳು ಬೆಳಕು ಚೆಲ್ಲುತ್ತವೆ. ಕಥೆಗಳ ಆಯ್ಕೆಯಲ್ಲಿಯೂ ಜಾಗರೂಕತೆ ; ಕಂಡುಬರುತ್ತದೆ. ಓದಿದ ನಂತರ ಬಹುಕಾಲ ನೆನಪಿನಲ್ಲಿ
ಉಳಿಯುವಂತಹ ಕಥೆಗಳನ್ನು ನೀಡಿದ ಶೀರ್ಷೇಂದುರವರು ಅಭಿನಂದನಾರ್ಹರು.
ಡಾ. ನಾಗ ಎಚ್.ಹುಬ್ಳಿಯವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅತ್ಯಂತ ಸರಳ ರೂಪದಲ್ಲಿ ಬಂಗಾಳಿಯಿಂದ ನೇರವಾಗಿ ಕನ್ನಡಕ್ಕೆ ಈ ಕತೆಗಳನ್ನು ತಂದಿದ್ದಾರೆ. ಕನ್ನಡ ಪುಸ್ತಕ ಲೋಕಕ್ಕೆ ಈ ಕೃತಿ ಒಂದು ಉತ್ತಮ ಸೇರ್ಪಡೆ.
-ಪ್ರೊ. ಶಾಂತಿ ಗಂಗೂಲಿ (ರಾಂಚಿ ವಿಶ್ವವಿದ್ಯಾಲಯ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.