Your cart is empty now.
ಇದು ಕಲ್ಲು, ಮರಳು, ಸಿಮೆಂಟುಗಳಿಂದ ಕಟ್ಟೋಣ ಕಟ್ಟುವ ಸಿವಿಲ್ ಇಂಜಿನಿಯರೊಬ್ಬರ ಮೂರನೇ ಕಥಾ ಸಂಕಲನ ಹಿಂದಿನ ಸಂಕಲನಗಳಲ್ಲಿ ಕನ್ನಡಕ್ಕೆ ಹೊಸತೆನ್ನಿಸುವ ವೃತ್ತಿಪರ ಅನುಭವಗಳು ದಟ್ಟವಾಗಿದ್ದರೆ, ಈ ಸಂಕಲನದ ಹರವು ವಿಸ್ತಾರವಾಗಿದೆ.
ಅಭಿವ್ಯಕ್ತಿ ಸಲೀಸಲ್ಲದ ಈ ಹೊತ್ತಿನಲ್ಲಿ ಸಮಕಾಲೀನ ಸಂಕಟ, ವೈರುಧ್ಯಗಳನ್ನು ಕಂಡರಿಸುವುದು ಕಷ್ಟದ ಕೆಲಸ. ಚಂದ್ರಪ್ರಭ ಕಠಾರಿ ಇಂತಹ ಸವಾಲುಗಳಿಗೆ ಮುಖಾಮುಖಿಯಾಗಲು ಬಯಸುತ್ತಾರೆ. ವಲಸೆ ಕಾರ್ಮಿಕರ ಸಮಸ್ಯೆಗಳು, ಕಟ್ಟಡ ಕಾರ್ಮಿಕರ ಬವಣೆಗಳು, ಕೋವಿಡ್ ಅವಾಂತರಗಳು ತಾಜಾ ಎನ್ನುವಂತೆ ಶಬ್ದಚಿತ್ರಗಳಲ್ಲಿ ಮೂಡುತ್ತವೆ; ತೀಕ್ಷ್ಯ ವಿಡಂಬನೆಯ ಮೂಲಕ ಸುಳ್ಳಿನ ಸಾಮ್ರಾಜ್ಯವನ್ನು ಬೆತ್ತಲುಮಾಡುತ್ತಾರೆ. ಇಲ್ಲಿನ ಕತೆಗಳಲ್ಲಿ ಹೆಣ್ಣುಮಕ್ಕಳು ಸಮಸ್ಯೆಗಳಿಗೆ ಹೆದರಿ ಪಲಾಯನ ಮಾಡುವವರಲ್ಲ; ದಿಟ್ಟವಾಗಿ ಎದುರಿಸುವ ಸಬಲೆಯರು.
ಬೆಂಗಳೂರಲ್ಲಿ ಹುಟ್ಟಿ ಬೆಳೆದ ಕಠಾರಿಯವರ ಕತೆಗಳಿಗೆ ಕಾಸ್ಕೋಪೊಲಿಟನ್ ಗುಣವಿದೆ. ಸಾಮಾಜಿಕ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವುದು ಲೇಖಕನೊಬ್ಬನ ಜವಾಬ್ದಾರಿ ಎನ್ನುವ ಎಚ್ಚರದಲ್ಲಿ ಅವರು ಬರೆಯುತ್ತಾರೆ.
ಎಂ ನಾಗರಾಜ ಶೆಟ್ಟಿ ಸಿನಿಮಾ ವಿಶ್ಲೇಷಕರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.