Your cart is empty now.
ಶ್ರದ್ಧಾ' ಕೂಡಿ ನಿಮ್ಮ ಹಳೆಯ ಬರಹಗಳು ನನಗೆ ತುಂಬಾ ಇಷ್ಟವಾಗಿದ್ದವು. ಈ ಸಂಕಲನದ ಮೊದಲ ಐದು ಬರಹಗಳಂತೆ, ನನಗೆ ತುಂಬ ಅಪರೂಪದ ಅಸಾಧಾರಣ ಅನುಭವ ಕೊಟ್ಟಿವೆ. ಮೂರು ನಾಲ್ಕು ದಿನ ಅವು ನನ್ನನ್ನ ಆವರಿಸಿಬಿಟ್ಟಿದ್ದವು. ಯಾವುದೇ ಅತ್ಯುತ್ತಮ ಸಾಹಿತ್ಯಕೃತಿ ಕೊಡುವ ಬಹು ಗಾಢ ಅನುಭಾವವನ್ನು ಇವು ನನಗೆ ಕೊಟ್ಟಿವೆ. ನಿಮ್ಮ ಬರವಣಿಗೆ ನಮಗೆ ಬೇಂದ್ರೆಯವರನ್ನು ಅರ್ಥಮಾಡಿಸಿ ಕೊಡುತ್ತದೆ. ಧಾರವಾಡವನ್ನು ಅರ್ಥಮಾಡಿಸಿಕೊಡುತ್ತದೆ. ಕನ್ನಡ ಒಟ್ಟು ಸಾಹಿತ್ಯದ ಕೆಲವು ಗುಣಗಳನ್ನು ಅರ್ಥಮಾಡಿಸಿ ಕೊಡುತ್ತದೆ ಅಥವಾ ಇವೆಲ್ಲ ಹೆಣೆದುಕೊಂಡಿರುವ 'ಕನ್ನಡ' ದಲ್ಲಿ ನೀವು ನಿಮ್ಮನ್ನು ಕೂಡಿಸಿ ನೆಯ್ದುಕೊಂಡು ಬಿಟ್ಟಿದ್ದೀರಿ, ದಯಮಾಡಿ ಇನ್ನಷ್ಟು ಬರೆಯಿರಿ. ನೀವು ಮುಂದೆ ಬರೆಯುತ್ತೀರೋ ಇಲ್ಲವೋ. ನೀವು ಬರೆದಷ್ಟನ್ನು ಎಷ್ಟು ಜನ ಓದುತ್ತಾರೋ, ಓದಿದರೂ ಅದೆಷ್ಟು ಜನ ಸಹೃದಯತೆಯಲ್ಲಿ ಅನುಭವಗೊಳ್ಳುತ್ತಾರೋ- ಇತ್ಯಾದಿ ಬಗ್ಗೆ ಕೂಡಾ ನಾನು ಚಿಂತಿಸುವುದಿಲ್ಲ. ನಿಮ್ಮಂಥ ಒಂದು ಸಂಪದ್ಭರಿತ ಮನಸ್ಸು ಕನ್ನಡದಲ್ಲಿ ಕೆಲಸ ಮಾಡಿದೆ ಎನ್ನುವುದು ಈ ಅಥವಾ ಈ 'ಕನ್ನಡವು ನಿಮ್ಮಂಥ ಒಂದು ಮನಸ್ಸನ್ನು ಸೃಷ್ಟಿಸಿಕೊಂಡಿತು ಎನ್ನುವುದು- ಈ ಎರಡೂ ಸಂಗತಿಗಳು ನನಗೊಂದು ಮಹತ್ತರ ಭರವಸೆ ಕೊಟ್ಟಿದೆ. ನಾನು ಹೆಚ್ಚು ಸ್ಥಿರವಾಗಿದ್ದೇನೆ. ಅಭಿನಂದನೆ, ಅಭಿನಂದನೆ.
ಕೆ.ವಿ.ಸುಬ್ಬಣ್ಣ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.