Free Shipping Charge on Orders above ₹300

Shop Now

Jeevana Dharma Yoga (Srimad Bhagavadgita Tatparya) Sale -12%
Rs. 818.00Rs. 930.00
Vendor: BEETLE BOOK SHOP
Type: PRINTED BOOKS
Availability: 3 left in stock

ಭಗವದ್ಗೀತೆಯು ಮೋಕ್ಷಶಾಸ್ತ್ರ ಮಾತ್ರವಲ್ಲ. ಜೀವನಶಾಸ್ತ್ರವೂ ಹೌದು. ಮೋಕ್ಷವನ್ನು ಉದ್ದೇಶದಲ್ಲಿರಿಸಿಕೊಳ್ಳದ ಸಾಮಾನ್ಯ

ಜನರಿಗೂ ಗೀತೆಯಿಂದ ಪ್ರಯೋಜನವುಂಟು. ಲೋಕಜೀವನದ ವಿಷಯದಲ್ಲಿ ಗೌರವಬುದ್ಧಿಯನ್ನೂ ಕರ್ತವ್ಯಾಚರಣೆಯಲ್ಲಿ ಉತ್ಸಾಹವನ್ನೂ ಆಪತ್ಕಾಲದಲ್ಲಿ ಧೈರ್ಯವನ್ನೂ ಸಂಶಯಗ್ರಸ್ತರಾದಾಗ ಮನಸ್ಸಿಗೆ ನೆಮ್ಮದಿಯನ್ನೂ ಉಂಟುಮಾಡಬಲ್ಲದ್ದು ಗೀತೆ. ಹೀಗೆ ಜನಸಾಮಾನ್ಯದ ಆವಶ್ಯಕತೆಯ ದೃಷ್ಟಿಯಿಂದ ಗೀತೆಯನ್ನು ನೋಡುವುದು ಪ್ರಕೃತ ಗ್ರಂಥದ ಉದ್ದೇಶ. ಸತ್ಯ ಒಂದು, ಸತ್ಯದರ್ಶನಗಳು ಸಾವಿರ. ದೈತಾತಾದಿ ನಾನಾಮತಗಳ ನಡುವೆ ಸಾಮರಸ್ಯವು ಸಾಧ್ಯವೆಂಬುದು ಇಲ್ಲಿ ಇರಿಸಿಕೊಂಡಿರುವ ನಂಬಿಕೆ, ವಿವಾದಾಸ್ಪದಗಳಾದ ಅಂಶಗಳನ್ನು ಪಕ್ಕಕ್ಕಿರಿಸಿ, ನಮ್ಮ ಮತಾಚಾರ್ಯರುಗಳ ಉಪದೇಶಗಳಲ್ಲಿ ಯಾವುದೂ ಯಾರಿಗೂ ವಿರೋಧವಾಗದಂತೆಯೂ ಸರ್ವಸಮ್ಮತವಾದ ಉಪದೇಶಾಂಶಗಳಿಗೆ ಹೆಚ್ಚು ಗಮನ ಸೆಳೆಯುವಂತೆಯೂ ಅರ್ಥಾವಲೋಕನ ಮಾಡುವುದು ಇಲ್ಲಿಯ ಪ್ರಯತ್ನ.

ಧರ್ಮಾಭ್ಯಾಸಕ್ಕೆ ಮನುಷ್ಯಜೀವನದಲ್ಲಿ ಸ್ಥಾನವಿರುವಂತೆಯೇ ಭೋಗ ಭಾಗ್ಯಗಳಿಗೂ ಅವವುಗಳಿಗೆ ತಕ್ಕ ಸ್ಥಾನಗಳುಂಟು. ಈ ಸ್ಥಾನನಿಷ್ಕರ್ಷೆಗೆ ಬೇಕಾದ ವಿವೇಕವನ್ನು ಜಗಜೀವನದ ಆಧಾರತತ್ತ್ವಗಳ ನಿರೂಪಣೆಯ ಮೂಲಕ ಭಗವದ್ಗೀತೆ ನಮಗೊದಗಿಸಿದೆ. ಭಗವತ್ ಸ್ಮರಣೆಯೊಡಗೂಡಿ ನಡೆದ ಜಗದ್ವವಹಾರಗಳು ಜೀವಬಾಧಕಗಳಾಗದೆ ಜೀವತಾರಕಗಳೂ ಜಗತ್ಕಲ್ಯಾಣಗಳೂ ಆಗುತ್ತವೆ.

ಸಮ್ಯಗ್ರೀವನವೇ ಭಗವದಾರಾಧನೆಯೆಂಬುದು ಇಲ್ಲಿಯ ತತ್ತ್ವ ಲೋಕಜೀವನದ ಸಮೃಧಾನವೇ ಧರ್ಮ ; ಧರ್ಮದ ಪರಿಪೂರ್ಣಫಲವೇ ಮೋಕ್ಷ. ಹೀಗೆ ಯಾವುದು ಪೂರ್ವಿಕರಿಗೆ ಮೋಕ್ಷಶಾಸ್ತ್ರವಾಯಿತೋ ಅದು ಇಂದಿನವರಿಗೆ ಜೀವನ ಧರ್ಮಶಾಸ್ತ್ರವೂ ಆಗಿದೆ.

Guaranteed safe checkout

Jeevana Dharma Yoga (Srimad Bhagavadgita Tatparya)
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading