Your cart is empty now.
ಕಳೆದ ಮೂರು ವರ್ಷದ (1994-1997) ಅವಧಿಯಲ್ಲಿ ನನ್ನ ಕಾಯಿಲೆ, ಒತ್ತಡ, ಆತಂಕದ ದಿನಗಳಲ್ಲಿ ಬಿಡುವು ದೊರೆತಾಗಲೆಲ್ಲ ನೆನೆಸಿಕೊಂಡ ನನ್ನ ಬದುಕಿನ ಕ್ಷಣಗಳು ಈ ಪುಸ್ತಕದಲ್ಲಿವೆ.
ಮನುಷ್ಯ ತನ್ನ ಬಗ್ಗೆ ಬರೆದುಕೊಳ್ಳುವುದು ಕಷ್ಟ. ನಾನು ನನ್ನ ಬಗ್ಗೆ ತಿಳಿದಿದ್ದು, ನನ್ನ ಪರಿಚಿತರು ನನ್ನ ಬಗ್ಗೆ ಗ್ರಹಿಸಿದ್ದು, ನನ್ನ ಕೃತಿಗಳಿಂದ ಓದುಗರು ಊಹಿಸಿದ್ದು ಇದೆಲ್ಲ ಪೂರ್ತಿ ನಿಜವಿರಲಾರದು; ಹಾಗೆಯೇ ಇವೆಲ್ಲದರಲ್ಲಿ ಸತ್ಯದ ಅಂಶ ಇರಹುದು; ಈ ಅಂಶಕ್ಕಾಗಿ ಹುಡುಕುವುದು ಆತ್ಮಕಥನ ಬರೆಯುವವನ ಆಶಯ. ಹೀಗೆ ಹೇಳುತ್ತಲೇ ನಾನು ನಿಮಗೆ ಒಂದು ಭರವಸೆ ಕೊಡಬಲ್ಲೆ; ಇಲ್ಲಿ ಹೇಳಿರುವುದರಲ್ಲಿ ಒತ್ತು, ಕೊಂಬು, ಕಾಮ ಸ್ವಲ್ಪ ಹೆಚ್ಚುಕಮ್ಮಿಯಾಗಿರಬಹುದು. ಆದರೆ ಲೆಕ್ಕ, ವ್ಯಾಮೋಹ ಮತ್ತು ವಿಷಾದ ಮುಕ್ಕಾಗದೆ ಬಂದಿದೆ. ಹುಲುಮಾನವನಾದ ನಾನು ಬರೆಯುವಲ್ಲಿ ತಪ್ಪೇ ಮಾಡಿದ್ದರೂ ಅದು ಬೇಕಂತಲೇ ಮಾಡಿದ ತಪ್ಪಲ್ಲ.
ಪಿ . ಲಂಕೇಶ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.