‘ದಿನದ ಪ್ರಾರ್ಥನೆ’ ಸವಿತಾ ನಾಗಭೂಷಣ ಅವರ ಕವನಸಂಕಲನವಾಗಿದೆ. ಈ ಕೃತಿಯು ಎಲ್ಲಾ ತೆರನಾದ ವಿಚಾರಗಳ ಕುರಿತು ಮಾತನಾಡುತ್ತದೆ. ಕಾವ್ಯ ಎಂಬವುದು ಹೃದಯದ ಭಾವಾಭಿನಯ ಎನ್ನುವ ಕವಯಿತ್ರಿ ಇಲ್ಲಿ ತನ್ನ ಕವಿತೆಯ ವಸ್ತುಗಳನ್ನಾಗಿ ಮಳೆ, ಸಿಡಿಲು, ಮಿಂಚು, ಹೂವು, ಹೆಣ್ಣು, ಹಕ್ಕಿ, ಕೀಟ ಹೀಗೆ ಎಲ್ಲವುಗಳನ್ನು ಆಯ್ಕೆಮಾಡಿದ್ದಾರೆ. ಇಲ್ಲಿನ ವಿಚಾರಧಾರೆಗಳು ಕೂಡ ಎಲ್ಲದರೊಂದಿಗೆ ಒಡನಾಡಿಯಾಗಿ ಪದಗಳಿಗೆ ಜೀವನೀಡಿದೆ. ಪ್ರಕೃತಿ ಹಾಗೂ ಹೆಣ್ಣನ್ನು ಈ ಕವನಸಂಕಲನವು ಸಮಾನವಾಗಿ ಹಿಡಿದಿಟ್ಟಿದೆ. 60 ಕವನಗಳನ್ನು ಒಳಗೊಂಡಿರುವ ಈ ಕೃತಿಯು ಭಾಷಿಕವಾಗಿ, ಭಾವನೆಗಳ ಗುಚ್ಛವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ. ಈ ಕೃತಿಯ ಆಯ್ದ ಒಂದು ಕವನ; ಮುಂದೆ ಒಂದು ದಿನ ಮುಂದೆ ಒಂದು ದಿನ ಬಾಳೆ ಕತ್ತರಿಸಿ ಎಸೆದಂತೆ ಕಟ್ಟಡಗಳ ನೆಲಸಮಗೊಳಿಸಿ ಕೆರೆಕಟ್ಟೆಗಳನ್ನಾಗಿಸಿ ಮಳೆನೀರ ತುಂಬಿಡುವರು ಹೊಂಡ ಗುಂಡಿ ಗಿಂಡಿ ಎನದೆ ನೀರ ತುಂಬಿಡುವರು ಬಾಳೆ ಕತ್ತರಿಸಿ ಎಸೆದಂತೆ ಕಟ್ಟಡಗಳ ಕಿತ್ತೆಸೆದು ಭತ್ತರ ರಾಗಿ ಜೋಳ ಹೂವು ಹಣ್ಣು ಬೆಳೆವರು ಬಯಲಲ್ಲಿ ಬಿಸಿಲಿಗೆ ಮೈಯೊಡ್ಡಿ ಬದುಕು ಮಾಡುವರು ರಾತ್ರಿ ಚಂದ್ರನ ಹೊದ್ದು ಕನಸು ಕಾಣುವರು! ಸಾಗರಗಳು ಸಾವಿರ ಇದ್ದರೂ ಸಲಹದಿದ್ದರೆ ಸುಡುಗಾಡು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.