ಚಹರೆಗಳೆಂದರೆ, ಗಾಯಗಳೂ ಹೌದು' ಕೃತಿಯಲ್ಲಿನ ಸಮುದಾಯ ಅಧ್ಯಯನಗಳ ಕುರಿತ ಕಥನಗಳು ವರ್ತಮಾನದಲ್ಲಿ ನಮ್ಮೊಡನೆ ಬದುಕುತ್ತಿರುವ ಬುಡಕಟ್ಟು, ಆದಿವಾಸಿ ಸಮುದಾಯಗಳ ವೈರುಧ್ಯಗಳಿಂದ ಕೂಡಿದ ಸಮಾಜೋ-ಆರ್ಥಿಕ ಬದುಕಿನ ವಾಸ್ತವಗಳೇ ಆಗಿದ್ದರೂ, ನಾಗರೀಕ ಜಗತ್ತಿನ ಚಿಂತನಾಕ್ರಮವಲ್ಲದ ವಾಸ್ತವಿಕ ಸತ್ಯಗಳಾಗಿವೆ. ಈ ಐತಿಹಾಸಿಕ ಮತ್ತು ವರ್ತಮಾನದ ಸತ್ಯಾಂಶಗಳನ್ನು ಕಥನದರೂಪದಲ್ಲಿ ಕಟ್ಟಿಕೊಟ್ಟಿರುವ ಕ್ರಮವು ಪ್ರೌಢತೆಯಿಂದಲೂ ಉನ್ನತ ಸಾಮಾಜಿಕ ಜವಾಬ್ದಾರಿಯಿಂದಲೂ ಕೂಡಿರುವುದನ್ನು ಗಮನಿಸಬಹುದು. ಡಾ. ಎ ಎಸ್ ಪ್ರಭಾಕರ ಅವರು ತಮ್ಮ ಎಂದಿನ ಭಾಷಾ ಕೌಶಲ್ಯವನ್ನು ಈ ಕೃತಿಯಲ್ಲಿಯೂ ಉತ್ತಮವಾಗಿ ಬಳಸಿಕೊಂಡಿದ್ದು ಲೇಖನಗಳನ್ನು ಓದುವವರಿಗೆ 'Reading is not walking on the words; it's grasping the soul of them' ಎಂಬ ಶೈಕ್ಶಣಿಕ ತತ್ವಜ್ಞಾನಿ ಪೌಲೋ ಪ್ರೈಯರ್‌ನ ಮಾತುಗಳನ್ನು ಆಧರಿಸಿಯೇ ಕೃತಿಯಲ್ಲಿನ ಎಲ್ಲಾ ಲೇಖನಗಳನ್ನು ಓದಬೇಕಾದ ಜವಾಬ್ದಾರಿಯನ್ನು ಮೂಡಿಸುತ್ತದೆ. ಈ ಕೃತಿಯ ಪ್ರತೀ ಲೇಖನದ ಪ್ರತೀ ಸಾಲುಗಳಲ್ಲಿ ಈ ನೆಲದ ದಮನಿತರ ಧ್ವನಿಗಳ 'ಆತ್ಮ' ವಿರುವುದನ್ನು ಓದುಗರು ಗ್ರಹಿಸುವುದು ಖಂಡಿತ.
- ಪ್ರೊ. ಬಿ ರಮೇಶ್ ಕುಲಸಚಿವರು, ಬೆಂಗಳೂರು ನಗರ ವಿಶ್ವವಿದ್ಯಾಲಯ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.