ಬಸವಣ್ಣ ಈ ಸಂಪಾದನಾ ಗ್ರಂಥದಲ್ಲಿನ ಒಟ್ಟು ೨೩ ಪ್ರಬಂಧಗಳು ಬಸವಣ್ಣನವರ ಒಳಗು-ಹೊರಗು ಅಚ್ಚುಕಟ್ಟಾಗಿ ವಿಮರ್ಶಿಸುವ ಗುರುತರವಾದ ಕೆಲಸ ಮಾಡಿವೆ.
ಬಸವಣ್ಣನವರು ಬ್ರಾಹ್ಮಣ್ಯದ ಶ್ರೇಷ್ಟತೆಯ ಕಲ್ಮಶವನ್ನು ಕಳೆದುಕೊಳ್ಳಲು ಮಾಡಿದ ಅನನ್ಯ ಪ್ರಯತ್ನ ಹಾಗು ತನ್ನನ್ನು ತಾನು ಅಪವರ್ಣೀಕರಣಗೊಳಿಸಿಕೊಳ್ಳಲು ಅವರಿಂದ "ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವನಯ್ಯ..." ಅನ್ನಿಸಿದರೆ ವೈದಿಕರಿಂದ ತಿರಸ್ಕರಿಸಲ್ಪಟ್ಟು ಹೊಸ ಧರ್ಮಕ್ಕೆ ಸೇರಿದವನು ಎಂಬ ಹೆಮ್ಮೆಯ ಅಭಿವ್ಯಕ್ತಿಗೆ "ಮಾದಾರ ಚೆನ್ನಯ್ಯನ ಮಗ ನಾನು..." ಎಂದನ್ನಿಸಿ ತನ್ನ ಹೊಸ ಧರ್ಮವನ್ನು ಪವಿತ್ರೀಕರಿಸಿಕೊಳ್ಳುವ ಪ್ರಾಮಾಣಿಕ ಹಾಗು ಆತ್ಮವಿಮರ್ಶಕ ನಡೆಯನ್ನು ಲೇಖಕರು ಜೀವಂತವಾಗಿ ಕಟ್ಟಿಕೊಟ್ಟಿದ್ದಾರೆ.
ಬಸವಣ್ಣನವರನ್ನು ವಿಮರ್ಶಿಸುವ ಕೆಲಸ ಅಷ್ಟು ಸುಲಭ ಹಾಗು ಸರಳವಾದದ್ದಲ್ಲ. ಕನ್ನಡ ಸಾಹಿತ್ಯ ಲೋಕವನ್ನು ಬಸವಣ್ಣ ಆವರಿಸಿದಷ್ಟು ಮತ್ತಾರೂ ಆವರಿಸಿಲ್ಲ ಎಂದರೆ ತಪ್ಪಾಗಲಾರದು. ಒಟ್ಟಾರೆ ಸಂಪಾದಕರಾದ ಡಾ. ಅಮರೇಶ ನುಡಗೋಣಿ ಹಾಗು ಡಾ.ನಂದೀಶ್ವರ ದಂಡೆ ಅವರ ಈ ಪ್ರಯತ್ನ ಅನನ್ಯವಾದದ್ದು.
~ ಡಾ. ಜೆ ಎಸ್ ಪಾಟೀಲ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.