ಲೇಖಕ ಆಕರ್ಷ ರಮೇಶ್ ಕಮಲ ಅವರ `ಬರಿಯ ನೆನಪಲ್ಲ!’ ಪ್ಯಾಲಸ್ತೀನಿ ಭಾವುಕ ಕಥನ’ ಎಂಬುದು ಅನುವಾದಿತ ಕೃತಿ. ಕೆನಡಾದ ಮಾರ್ಸೆಲ್ಲೊ ಡಿ ಸಿಂಟಿಯೊ ಎಂಬ ಬರಹಗಾರನ ‘ಪೆ ನೋ ಹೀಡ್ಸ್ ಟು ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್ ಎಂಬ ಅನುಭವ ಕಥನದ ಕನ್ನಡ ಅನುವಾದವಾಗಿದೆ. ಈ ಕೃತಿ ಸಮಕಾಲೀನ ಪ್ಯಾಲೆಸ್ತೀನ್ ಬದುಕನ್ನು, ಆ ಪ್ರದೇಶದ ಶ್ರೀಮಂತ ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ನೆಲವಿಲ್ಲದವರ ಬದುಕಿನ ಬವಣೆಗಳು, ಪ್ರೇಮ-ಗೆಳೆತನ, ಕುಡಿದು ಖಾಲಿಯಾದ ಚಹಾ-ಕಾಫಿಗಳ ಪರಿಮಳ, ಕ್ರಾಂತಿಯ ಕಿಚ್ಚುಗಳು ಈ ಕೃತಿಯಲ್ಲಡಗಿವೆ. ಹಾರಿಹೋದ ಹೂಗಳ ಸುಗಂಧವಿದೆ. ಅಂತೆಯೇ, ಪಥಭ್ರಾಂತರಾಗಿ ಮರೆಯಾದ, ಹುತಾತ್ಮರಾದ ಪ್ರೀತಿಪಾತ್ರರ ಮುಖಗಳಿವೆ. ಘಸ್ಸಾನ್ ಕನಫಾನಿಯಂತಹ ಲೇಖಕರಿದ್ದಾರೆ. ಮಹಮೂದ್ ದರ್ವಿಶ್ ರಂಥ ಕವಿಗಳು ಕೆತ್ತಿದ ಶಾಸನದಂತಹ ಕವಿತೆಗಳಿವೆ. ಈ ಕವಿತೆಗಳು ಕೆಚ್ಚೆದೆಯ ಹೋರಾಟಗಾರರಿಗೆ ಬೆಳಕು-ಭರವಸೆಯನ್ನು, ಮುಂದಣ ಕವಿಗಳಿಗೆ ಕಾವ್ಯದುಸಿರನ್ನು ತುಂಬುತ್ತವೆ. ಈ ಪುಸ್ತಕವು ಗತ - ವರ್ತಮಾನಗಳನ್ನು ಮುಖಾಮುಖಿಯಾಗಿಸುತ್ತ ಭವಿಷ್ಯವನ್ನು ಕನಸುತ್ತದೆ. ಕನ್ನಡದ ಓದುಗರಿಗೆ ಪ್ಯಾಲೆಸ್ತೀನಿನ ಕಾವ್ಯ, ಕಾವು, ಕನಸುಗಳನ್ನು ಪರಿಚಯಿಸುತ್ತದೆ ಎಂಬುದಾಗಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.