Your cart is empty now.
ಉಷಾ ಅವರು 'ಬಾಳ ಬಟ್ಟೆ' ಕಾದಂಬರಿಯಲ್ಲಿ ಜೀವಂತ ಲೋಕವನ್ನು ನಿರ್ಮಿಸಿದ್ದಾರೆ. ವಿವರಗಳನ್ನು ಗಮನಿಸುತ್ತ ಸಾವಕಾಶವಾಗಿ ಓದುತ್ತ ನುಡಿಲೋಕವನ್ನು ಕಟ್ಟಿಕೊಳ್ಳಲು ಬಯಸುವ ಓದುಗರಿಗೆ ಇಲ್ಲಿ ಸಮೃದ್ಧವಾದ ಸಾಮಗ್ರಿ ಇದೆ. ಚಾಮರಾಜನಗರದ ಸೀಮೆಯಲ್ಲಿ 1925ರಿಂದ 1965ರ ಕಾಲದ ಮಿತಿಯಲ್ಲಿ ಬದುಕಿದ ಮಧ್ಯಮ ಮತ್ತು ಮೇಲುಜಾತಿಗಳ ಸಮುದಾಯದ ಮೂರು ತಲೆಮಾರುಗಳ ಕಥೆ ಹೇಳುತ್ತ ಆ ಕಾಲದ ಬದುಕಿನ ದಾರಿಯ ತಿರುವು, ಏರಿಳಿತಗಳನ್ನು ಬಲುಮಟ್ಟಿಗೆ ತಮ್ಮ ಬಾಲ್ಯದ ನೆನಪುಗಳಲ್ಲಿ ಊರಿಕೊಂಡು ಚಿತ್ರಿಸಿದ್ದಾರೆ. ಈಗ ಬದುಕಿನ ಆರನೆ ದಶಕಕ್ಕೆ ಕಾಲಿಡುತ್ತಿರುವ ಹಲವರು ತಮ್ಮ ಬಾಲ್ಯ ಕಾಲದ ಕನಸಿನ ಲೋಕವನ್ನು ಕಾದಂಬರಿಗೊಳಿಸುತ್ತಿದ್ದಾರೆ. ಈಗ ಕಾಣುವ ಆ ಕಾಲದ ಕನಸನ್ನು ಹೆಣ್ಣು ಪಾತ್ರಗಳ ನೋಟದ ಮೂಲಕ ಚಿತ್ರಿಸುವುದು ಈ ಕೃತಿಯ ಹೆಚ್ಚುಗಾರಿಕೆ.
ಆಧುನಿಕತೆಗೆ ಹೊರಳುವ ವ್ಯಕ್ತಿಗಳಾಗಿ ತಮ್ಮತನ ಸ್ಥಾಪಿಸುವ ಆಸಕ್ತಿ, ತವಕಗಳ ಜೊತೆಗೇ ಪರಿಚಿತ ಬದುಕಿನ ಕ್ರಮವನ್ನು ಬಿಡಲಾರದ ತೊಳಲಾಟ ಎಲ್ಲ ಕಾಲದ ಎಲ್ಲ ಸಮಾಜಗಳಲ್ಲೂ ಕಾಣುವುದು ಸಹಜ ಉಷಾ ಅವರ ಕಾದಂಬರಿ ದೈನಿಕ ಬದುಕಿನ ವಿವರಗಳ ಮೂಲಕವೇ ವಿವಿಧ ಪಾತ್ರಗಳ ಮನಸಿನ ಲೋಕವನ್ನೂ, ಹೊರಲೋಕದ ಬದಲಾವಣೆಗಳನ್ನೂ ಹಿಡಿದಿಡಲು ಅಪೇಕ್ಷಿಸುತ್ತದೆ. ಅಮ್ಮ, ಅತ್ತೆ, ವಾರಗಿತ್ತಿ ಇಂಥ ಸಂಬಂಧಗಳ ಸಿಕ್ಕು, ಗೋಜಲುಗಳ ಮೂಲಕ, ಊಟ, ಉಪಚಾರ, ಹಬ್ಬ, ಸಂತೆ ಮತ್ತು ಎಂತಹ ಗ್ರಾಮೀಣ ಬದುಕನ್ನೂ ಅಲುಗಿಸಿ ಬದಲಿಸುವ ಅಧಿಕಾರ ವ್ಯವಸ್ಥೆಗಳ ಮೂಲಕವೇ ಬಾಳಬಟ್ಟೆಯ ಲೋಕ ರೂಪ ಪಡೆದಿದೆ. ವ್ಯಕ್ತಿ, ಮನೆ, ಊರು, ಸಮಾಜ, ಲೋಕ ಹೀಗೆ ಗತದ ಕನಸಿನ ವಿಸ್ತಾರ ಹಿಗ್ಗುತ್ತದೆ. ಉಪಾ ತಮ್ಮ ಮೊದಲ ಕಾದಂಬರಿಯಲ್ಲೇ ವಿವರ, ವಿಚಾರ ಮತ್ತು ನುಡಿಯ ಪದವನ್ನು ಸಾಧಿಸುವಲ್ಲಿ ಯಶಸ್ಸು ಪಡೆದಿದ್ದಾರೆ.
- ಓ ಎಲ್ ನಾಗಭೂಷಣ ಸ್ವಾಮಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.