Your cart is empty now.
ಆರ್ಯರಿಗಾಗಿ ಹುಡುಕಾಟ (ಹೊರಗೆ -ಒಳಗೆ) ಶೀರ್ಷಿಕೆಯ ಈ ಕೃತಿಯನ್ನು ಲೇಖಕ ಎಸ್. ಶಂಕರಪ್ಪ ತೋರಣಗಲ್ಲು ಅವರು ರಚಿಸಿದ್ದು, ಆರ್ಯರು ಎಂದರೆ ಯಾರು? ಅವರೇಕೆ ಭಾರತದತ್ತ ಆಗಮಿಸಿದರು, ನಂತರ ಅವರ ಕಾರ್ಯಚಟುವಟಿಕೆಗಳ ಸ್ವರೂಪ ಹೇಗಿತ್ತು? ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಲು ಅವರ ಕಾರ್ಯ ತಂತ್ರಗಳು ಹೇಗಿದ್ದವು ಇತ್ಯಾದಿ ಕುರಿತು ವಿಶ್ಲೇಷಣೆ ಇಲ್ಲಿದೆ.
'ಆರ್ಯ' ಜಗತ್ತಿನ ಪ್ರಾಚೀನ ಜನಾಂಗಗಳಲ್ಲಿ ಒಂದು. ಈಗ ಪ್ರಚಲಿತವಿರುವ 'ಹಿಂದೂ ಧರ್ಮ' ಆರ್ಯರೊಂದಿಗೆ ಸಮೀಕರಿಸಲ್ಪಟ್ಟಿದೆ. ಆರ್ಯರ ಬಾಳ್ವೆ, ನಂಬಿಕೆ, ಧರ್ಮ ಮತ್ತು ಆಚರಣೆಗಳ ಮುಖವಾಣಿಗಳಾದ ವೇದಗಳನ್ನು ಪರಿಶೀಲನೆಯ ದೃಷ್ಟಿಯಿಂದ ಓದಿದ ಕೆಲವರಿಗೆ ಆರ್ಯರ ಪ್ರಾಚೀನತೆ ಮತ್ತು ವ್ಯಾಪ್ತಿಗಳ ಬಗ್ಗೆ ಕುತೂಹಲಗಳು ಮೂಡಿದ್ದವು. ಆದರೆ ಆರ್ಯರು ಯಾರು ಮತ್ತು ಅವರ ಮೂಲ ನೆಲೆ ಎಲ್ಲಿದ್ದಿತು ಎನ್ನುವ ಪ್ರಶ್ನೆಗಳು ಯಾರಿಗೂ, ಎಂದಿಗೂ ಎದುರಾಗಿರಲಿಲ್ಲ. ಹದಿನೆಂಟನೇ ಶತಮಾನದ ಕೊನೆಯ ದಶಕಗಳಲ್ಲಿ ಭಾಷಾವಿಜ್ಞಾನದಲ್ಲಿ ಜರುಗಿದ ಸಂಶೋಧನೆಗಳು ಆರ್ಯರು ಯಾರು? ಅವರ ತವರು ಯಾವುದು? ಎನ್ನುವ ಪ್ರಶ್ನೆಗಳನ್ನು ಮುಂಚೂಣಿಗೆ ತಂದಿರಿಸಿ ಅವರ ಹುಡುಕಾಟಕ್ಕೆ ಪ್ರೇರಣೆಯಾದವು. ಆರ್ಯರನ್ನು ಕುರಿತಾದ ಈ ಪ್ರಶ್ನೆಗಳು ಜಗತ್ತಿನ ಶ್ರೇಷ್ಟ ಇತಿಹಾಸಕಾರರಿಗೆ, ಸಾಮಾಜಿಕ ವಿದ್ವಾಂಸರಿಗೆ, ಭಾಷಾತಜ್ಞರಿಗೆ, ಪುರಾತತ್ತ್ವಶಾಸ್ತ್ರಜ್ಞರಿಗೆ, ಸಾಂಸ್ಕೃತಿಕ ಸಂಶೋಧಕರಿಗೆ, ವಿಜ್ಞಾನಿಗಳು ಸೇರಿದಂತೆ ನಾನಾ ವಿಷಯ ಪರಿಣಿತರಿಗೆ ಎಸೆದ ಸವಾಲುಗಳಾದವು. ಈ ಹಿನ್ನೆಲೆಯಲ್ಲಿ ಕಳೆದ ಎರಡು ಶತಮಾನಗಳಿಂದ ಆರ್ಯರನ್ನು ಕುರಿತಾಗಿ ತೀವ್ರ ಹುಡುಕಾಟಗಳು ಸಾಗಿವೆ. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದರು ಎಂದು ಒಂದು ಬಣ ವಾದಿಸಿದರೆ ಅದರ ಎದುರು ಬಣದವರು ಆರ್ಯರ ತವರು ಭಾರತವಲ್ಲದೆ ಬೇರೆ ಆಗಿರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಹಾಗಾದರೆ ಆರ್ಯರು ಯಾರು? ಅವರ ತವರು ಯಾವುದು ಎನ್ನುವ ಹುಡುಕಾಟದಲ್ಲಿ ಈ ಕೃತಿಯ ಮೂಲಕ ನೀವೂ ಭಾಗಿಗಳಾಗಿ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.