Your cart is empty now.
ಚಾಲ್ತಿಯಲ್ಲಿರುವ ಕಟ್ಟು ಕಥೆಗಳಲ್ಲಿ ಹೆಚ್ಚು ಕಡಿಮೆ ಮುಕ್ಕಾಲು ಪಾಲು ಕಥೆಗಳು ಪ್ರಾಣಿಗಳನ್ನು ಕುರಿತದ್ದಾಗಿವೆ, ಮತ್ತು ಈ ಮಾದರಿಯು, ಮೂಲ ಸ್ವರೂಪದ್ದೂ, ಹಾಗೂ, ಯಾವಾಗಲೂ ಬಹು ಜನಪ್ರಿಯವಾದದ್ದೂ ಆಗಿತ್ತೆನ್ನುವುದರಲ್ಲಿ ಯಾವ ಸಂಶಯವೂ ಇರಲಾರದು. ಇವುಗಳ ಪೈಕಿ ಎಲ್ಲೋ ಕೆಲವು ಮಾತ್ರ, ಸಸ್ಯವರ್ಗ, ಅಥವಾ ಸಮುದ್ರ, ನದಿಗಳು, ಸೂರ್ಯ, ಮಾರುತ - ಇತ್ಯಾದಿ ನೈಸರ್ಗಿಕ ವಿಷಯಗಳನ್ನು ಕುರಿತದ್ದಾಗಿವೆ. ದೇವತೆಗಳು ಅಥವಾ ಮನುಷ್ಯರು, ಅಥವಾ, ದೇವತೆಗಳೂ ಮನುಷ್ಯರೂ ಪಾತ್ರಗಳಾಗಿರುವ ಕಥೆಗಳೂ ಹಲವಾರು ಇವೆ. ಇವುಗಳಲ್ಲಿ ಅನೇಕವು ಕಾರ‍್ಯ ಕಾರಣವನ್ನು ಸೂಚಿಸುವಂಥವು. ಉಳಿದವುಗಳಲ್ಲಿ ಅನೇಕವು, ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ರೀತಿಯ ಒಳ್ಳೆಯ ಚತುರೋಕ್ತಿಯಿಂದ ಮುಕ್ತಾಯವಾದ ಕೇವಲ ದಂತ ಕಥೆಗಳಾಗಿದ್ದು, ಸಾಮಾನ್ಯವಾಗಿ, ಯಾವುದಾದರೂ ಒಂದು ನೀತಿ ಪಾಠವನ್ನು ಅಥವಾ ಒಂದು ಬುದ್ಧಿವಾದವನ್ನು ತೂಗು ಹಾಕಲು ಸಾಧ್ಯವಾದ ರೀತಿಯಲ್ಲಿವೆ. ಈ ಸಂಕಲನಕ್ಕೆ ಕಥೆಗಳನ್ನು ಸಂಗ್ರಹಿಸಿ ರೂಪಾಂತರಿಸಿದವರು ಕನ್ನಡದ ಹೆಸರಾಂತ ಕಥೆಗಾರರಾದ ಶ್ರೀ ಆನಂದ ಅವರು. ಇದರಲ್ಲಿ ೧೨೦ ಕಥೆಗಳಿವೆ. ಅಲ್ಲದೆ, ಚಿತ್ರಶಿಲ್ಪಿ ಎಂ.ಸಿ.ವೀರ್ ಅವರು ರಚಿಸಿದ ಸೊಗಸಾದ ೧೧೦ ಚಿತ್ರಗಳಿವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.