Free Shipping Above ₹500 | COD available

Vismaya Vimarshe
Rs. 100.00
Vendor: BEETLE BOOK SHOP
Type: PRINTED BOOKS
Availability: 7 left in stock

ವಿಸ್ಮಯ ವಿಮರ್ಶೆ (ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದ ಅವಲೋಕನ) ಚಂದ್ರಕಾಂತ ವಡ್ಡು, Chandrakanta Vaddu

ಒಂದು ಕೃತಿಯನ್ನೋ, ಒಬ್ಬ ಕೃತಿಕಾರರನ್ನೋ ಆರಾಧಿಸುವವರು ಒಂದು ಕಡೆ ಇದ್ದರೆ ಇನ್ನೊಂದು ಕಡೆ ಆ ಕೃತಿಯಲ್ಲಿ ಇಲ್ಲವೇ ಕೃತಿಕಾರರ ರಚನೆಗಳಲ್ಲಿ `ಇರುವ' ಕೊರತೆಗಳನ್ನು ಎತ್ತಿ ತೋರಿಸುವವರು ಇರುತ್ತಾರೆ. ಪೂಚಂತೇ ಅವರ ಬರಹಗಳನ್ನು ಓದಿದವರು ಹೀಗೆ ಎರಡು ಎದುರುಬದುರಾದ ನೆಲೆಗಳಲ್ಲಿ ನಿಂತು ಮಾತಾಡುತ್ತಿರುವುದನ್ನು ಕಂಡಾಗ ಅದು ನನ್ನಂತಹ ವಯಸ್ಸಾದವರಲ್ಲಿ ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಈ ಅಭಿಪ್ರಾಯಗಳಿಗೆ ಕಾರಣಗಳು ಓದುಗರಲ್ಲಿ ಮತ್ತು ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಇರುತ್ತವೆಯೇ ಹೊರತು ಕೃತಿಗಳಲ್ಲೇ ಅಂತರ್ಗತವಾಗಿರುವುದಿಲ್ಲ.

ಪೂಚಂತೇ ಅವರ ಬರಹಗಳನ್ನು `ವಿಸ್ಮಯ'ದ ಸಾಕಾರ ರೂಪವೆಂದು ತಿಳಿಯುವವರು ತಾವೇ ಒಂದೋ ವಿಸ್ಮಯಗಳ ಬೆನ್ನು ಹತ್ತಿರುತ್ತಾರೆ, ಇಲ್ಲವೇ ವಿಸ್ಮಯಗಳಿಗೆ ಮರುಳಾಗಿರುತ್ತಾರೆ. ಇನ್ನೊಂದೆಡೆ ಪೂಚಂತೇ ಅವರು ಪಲಾಯನವಾದಿ ಬರಹಗಾರರು ಎಂದು ಹೇಳುವವರು ಯಾವುದೇ ಕೃತಿ ಇಲ್ಲವೇ ಕೃತಿಕಾರರನ್ನು ಕಟಕಟೆಯಲ್ಲಿ ಇರಿಸುವ ಇರಾದೆಯನ್ನು ಹೊಂದಿರುತ್ತಾರೆ; ಅದಕ್ಕೆ ಬೇಕಾದ ಸಾಹಿತ್ಯ ತತ್ವದ ಬೆಂಬಲವನ್ನು ಪಡೆದುಕೊಳ್ಳುತ್ತಿರುತ್ತಾರೆ. ಇದೊಂದು ಪ್ರಕ್ರಿಯೆ; ಇದು ಕೃತಿಗಳನ್ನು ಓದದೆಯೂ ಸಾಹಿತ್ಯ ಕುತೂಹಲಿಗಳಾಗಿರುವವರಿಗೆ ಅಗತ್ಯವಾದ ಸಾಮಗ್ರಿಯನ್ನು ಒದಗಿಸಬಲ್ಲುದು. ಇದನ್ನೇ ಸಾಹಿತ್ಯ ವಿಮರ್ಶೆ ಎಂದು ತಿಳಿಯುವ ತಪ್ಪನ್ನು ಮಾಡುವುದು ಮಾತ್ರ ಸರಿಯಾಗದು.

* ಕೆ. ವಿ. ನಾರಾಯಣ

Guaranteed safe checkout

Vismaya Vimarshe
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.