Free Shipping Above ₹500 | COD available

Gramsciya Chintanegalu Soldout
Rs. 135.00Rs. 150.00
Vendor: BEETLE BOOK SHOP
Type: PRINTED BOOKS
Availability: -1 left in stock

ಮಾರ್ಕ್ಸ್ವಾದ-ಲೆನಿನ್ವಾದದ ಜ್ಞಾನ ಭಂಡಾರಕ್ಕೆ, ವಿ.ಐ.ಲೆನಿನ್ ನಂತರ ಜರ್ಮನಿಯ ರೋಸಾ ಲಕ್ಸೆಂಬರ್ಗ್, ಚೈನಾದ ಮಾವೋ ತ್ಸೆ ತುಂಗ್ ಮುಂತಾದವರಂತೆ, ಮೂಲಭೂತ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಿದ ಮಾರ್ಕ್ಸ್ ವಾದಿ ಚಿಂತಕ ಮತ್ತು ಕ್ರಾಂತಿಕಾರಿಗಳ ಸಾಲಿಗೆ ಗ್ರಾಮ್ಮಿ ಸೇರುತ್ತಾರೆ. ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಇವರಿಂದ ರೂಪುಗೊಂಡ ಕಾರ್ಮಿಕ ವರ್ಗದ ದರ್ಶನ, ರಾಜಕೀಯ ಮತ್ತು ಸಾಂಸ್ಕೃತಿಕ ಧೋರಣೆಗಳನ್ನು ರಾಷ್ಟ್ರ ಮೀಮಾಂಸೆ, ಸಾಂಸ್ಕೃತಿಕ ನೆಲೆಗಟ್ಟು, ಇಟಲಿ ಕ್ರಾಂತಿಯ ಅನುಭವಗಳೊಂದಿಗೆ ಪುನರ್-ಅವಿಷ್ಕಾರ ಮಾಡಿ, ಆ ಮೂಲಕ ಮಾರ್ಕ್ಸ್ವಾದಿ-ಲೆನಿನ್ವಾದಿ ಅಧ್ಯಯನಗಳು ಮತ್ತು ಜ್ಞಾನ ಮೀಮಾಂಸೆಗಳನ್ನು ಗ್ರಾಮ್ಮಿ ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಗ್ರಾಮ್ಮಿಯ 'ಜೈಲು ಟಿಪ್ಪಣಿ'ಗಳನ್ನು ಕರಗತ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಮಾರ್ಕ್ಸ್ವಾದಿ-ಲೆನಿನ್ ವಾದಿಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.

  • ಇ.ಎಂ.ಎಸ್. ನಂಬೂದಿರಿಪಾಡ್, ಪಿ. ಗೋವಿಂದ ಒಳ್ಳೆ

----------

1970ರ ನಂತರದ ಕಾಲದಲ್ಲಿ ಪಂಡಿತ ವಲಯದಲ್ಲಿ ಗ್ರಾಮ್ಮಿಯ ವಿಚಾರಗಳ ಕುರಿತು ವಿಶೇಷ ಆಸಕ್ತಿ ಕಾಣಿಸಿಕೊಂಡಿತು. ತುಂಬು ಬೌದ್ಧಿಕ ಜಿಜ್ಞಾಸೆ, ಪಾಂಡಿತ್ಯದ ಭಾಷಾ ಬಳಕೆಗಳು ಇರುವ ಅಂತಹ ಕೃತಿಗಳಲ್ಲಿ ಚಿಂತನೆಗಳಿಗೆ ಸಂಘಟನಾ ಜಾಗೃತಿಯ ಪ್ರಾಯೋಗಿಕ ಆಚರಣೆಗಳ ರೂಪ ಕೊಡುವ ತುರ್ತು ಕಾಣುವುದಿಲ್ಲ. ಪ್ರಸ್ತುತ ಪುಸ್ತಕದ ಇಬ್ಬರೂ ಲೇಖಕರು ದಶಕಗಳ ಕಾಲ ದುಡಿಯುವ ವರ್ಗವನ್ನು ಸಂಘಟಿಸುವ ಕಾರ್ಯಾಚರಣೆಯ ಭಾಗವಾಗಿ ಬೌದ್ಧಿಕ ಜ್ಞಾನ ಪಡೆದವರಾಗಿ ಇರುವುದರಿಂದ, ಇಲ್ಲಿನ ಚಿಂತನಾ ನಿರೂಪಣೆಯು ಸಂಘಟನಾ ಕಾರ್ಯಶೀಲತೆಯ ಕುಲುಮೆಯಲ್ಲಿ ಬೆಂದು, ಪ್ರಯೋಗದ ಸುತ್ತಿಗೆ ಹೊಡೆತದಲ್ಲಿ ಆಕಾರ ಪಡೆದು, ಕಾರ್ಯಕರ್ತರು ಬಳಸಬಹುದಾದ ಸಂಘಟನಾ ಸಾಧನದ ರೂಪದಲ್ಲಿ ಪ್ರಕಟವಾಗಿದೆ. ಶತಮಾನದ ಇತಿಹಾಸವಿರುವ ದುಡಿಯುವ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಕಾರ್ಯಕ್ರಮ - ಕಾರ್ಯತಂತ್ರಗಳ ಒರೆಗಲ್ಲಿಗೆ ಉಜ್ಜಿ ಗ್ರಾಮ್ಮಿಯ ವಿಚಾರಗಳ ಮೌಲ್ಯಮಾಪನ ಮಾಡಿರುವುದು ಈ ಕಿರುಹೊತ್ತಿಗೆಯ ವಿಶೇಷ.

ಈ ಕಿರು ಹೊತ್ತಿಗೆಯ ಮುಖೇನ ಘನ ಸಮಾಜವಾದಿ ಚಿಂತಕ ರಾಜಕಾರಣಿ ಅಂಟೋನಿಯೊ ಗ್ರಾಮ್ಮಿ 'ನಮ್ಮ ಗ್ರಾಮಿ' ಆಗಲಿ ಎಂದು ಹಾರೈಸುತ್ತೇನೆ.

ಫಣಿರಾಜ್ ಕೆ.

Click here to be notified by email when this product becomes available.

Guaranteed safe checkout

Gramsciya Chintanegalu

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.