Your cart is empty now.
57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸಿನಿಮಾ ಕುರಿತ ಅತ್ಯುತ್ತಮ ಕೃತಿ- ಸ್ವರ್ಣಕಮಲ ಪ್ರಶಸ್ತಿ (2009)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2009)
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು-ಪ್ರಥಮ ಬಹುಮಾನ (2009)
------------
...ತಮ್ಮ ವಿಹಂಗಮ ಗ್ರಹಿಕೆಯಿಂದ ಕನ್ನಡ ಸಿನಿಮಾ ಪಯಣದ ಮುಖ್ಯ ಸ್ಥಿತ್ಯಂತರಗಳೆಲ್ಲವನ್ನೂ ಈ ಕೃತಿಯಲ್ಲಿ ಹಿಡಿದಿಡುವ ಪುಟ್ಟಸ್ವಾಮಿ, ಜೊತೆಗೆ ಎಲ್ಲ ಒಳಸುಳಿಗಳನ್ನೂ ಒಳಗೊಂಡು ಹೆಜ್ಜೆಯಿಡುತ್ತಾರೆ. ಸಂಗೀತದ ಪರಿಭಾಷೆಯಲ್ಲಿ ಹೇಳುವುದಾದರೆ, ಇವರ ಸಿನಿಮಾ ರಾಗಾಲಾಪ, ಯಾವ ಸೂಕ್ಷ್ಮ ಸ್ವರಸ್ಥಾನವನ್ನೂ ಬಿಡದೆ ಮುಟ್ಟಿ ಮುನ್ನಡೆಯುವ ನಾದಝರಿಯಂತಿದೆ. ಮತ್ತು ಚಿತ್ರರಂಗದ ಆರಂಭದ ದಿನಗಳಿಂದ ಇಂದಿನವರೆಗೆ (ರಾಜ್ ಚಿತ್ರದ ಉಡುಗೆ ತೊಡುಗೆವರೆಗೆ) ಹಬ್ಬಿದ-ಎಲ್ಲವನ್ನೂ ತೆಕ್ಕೆಗೆಳೆದುಕೊಳ್ಳಬಲ್ಲ ಅವರ ಕುತೂಹಲ, ಸಿನಿಮಾದ ಕಡು ವ್ಯಾಮೋಹಿಯೊಬ್ಬ ತಲುಪಬಹುದಾದ ಪ್ರೌಢಿಮೆಯ ಸಾಕ್ಷಿಯೂ ಹೌದು....
ಸಿನಿಮಾ ಪಯಣದ ರೂಪುರೇಷೆ ಹಿಡಿಯುವಾಗ, ನಿರ್ಜೀವ ಕಾಲಾನುಕ್ರಮಣಿಕೆಯ ಗಡಿ ದಾಟುವ ಅವರ ಸ್ವಚ್ಛಂದ ಲಹರಿಯೇ ಆಸಕ್ತಿಪೂರ್ಣವಾಗಿದೆ. ಜೊತೆಗೆ ಒಂದು ಪ್ರಾತಿನಿಧಿಕ ಚಿತ್ರವನ್ನು ಬಿಡಿಸಿ ನೋಡುವ ಮೂಲಕವೇ ಒಬ್ಬ ನಿರ್ದೇಶಕನ, ಹಾಗೂ ಒಂದು ಪ್ರವೃತ್ತಿಯ ಬೆನ್ನು ಹತ್ತಿ ಪ್ರತಿಯೊಂದನ್ನೂ ತೂಗಿ ನೋಡಿ ಬೆಲೆ ಕಟ್ಟುವ ಸಮತೋಲ..…
ಪುಟ್ಟಸ್ವಾಮಿಯವರ ಗಾಢ ಅನುರಕ್ತಿ- ಪ್ರೌಢಿಮೆಗಳ ಹದ; ಹಾಗೂ ಉದ್ದಕ್ಕೂ ಅಂತರ್ಜಲದಂತೆ ಹರಿಯುವ ಅಪ್ಪಟ ಕನ್ನಡ ಪ್ರೇಮಗಳನ್ನು ಮರೆತು ಈ ಪುಸ್ತಕದ ಬಗ್ಗೆ ಮಾತಾಡುವುದು ಸಾಧ್ಯವಿಲ್ಲ. ಅವರ ಬರವಣಿಗೆ, ತಿಳಿಯದವರಿಗೆ ಹೊಸ ತಿಳಿವನ್ನು, ಆಸಕ್ತರ ತಿಳಿವಳಿಕೆಗೆ ಹರಿತವನ್ನು ಕೊಡಬಲ್ಲುದು. ತಮ್ಮ ಈ ಉಜ್ವಲ ಸಿನಿಮಾಧ್ಯಾನದ ಮೂಲಕ ಪುಟ್ಟಸ್ವಾಮಿ ಕನ್ನಡದ ಸಂಸ್ಕೃತಿ ಚಿಂತನೆಯ ಪರಂಪರೆಗೆ ತಮ್ಮದೇ ಕಿರುಧಾರೆಯನ್ನು ಜೋಡಿಸಿದ್ದಾರೆಂದು ಅನಾಯಾಸವಾಗಿ ಹೇಳಬಹುದು.
-ಎನ್.ಎಸ್. ಶಂಕರ್
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.