Your cart is empty now.
ಕೆ ಸಿ ರಘು ಆಹಾರ ಮತ್ತು ಅದರ ಸುತ್ತಲ ರಾಜಕೀಯದ ಬಗ್ಗೆ ನಿಖರವಾಗಿ, ಅದರ ಎಲ್ಲಾ ಆಯಾಮಗಳಿಂದ ಮಾತನಾಡಬಲ್ಲ ತಜ್ಞರು. ಆಹಾರ ರಾಜಕೀಯವನ್ನು ಕುರಿತಂತೆ ಕನ್ನಡಪ್ರಭ ಪತ್ರಿಕೆಗೆ ಬರೆದ ಅಂಕಣಗಳು ಈಗ ಸಮಕಾಲೀನ ಮಾಲಿಕೆಯ ನಾಲ್ಕನೇ ಪುಸ್ತಕವಾಗಿ ನಿಮ್ಮ ಮುಂದಿದೆ. ಅಂಕಣಕ್ಕೆ ಬರೆದ ಲೇಖನಗಳಾದ್ದರಿಂದ ಅಂದಂದಿನ ವಿದ್ಯಮಾನಗಳಿಗೆ ಬರೆದ ಪ್ರತಿಕ್ರಿಯೆಯ ರೂಪದಲ್ಲಿ ಕೆಲವು ಲೇಖನಗಳಿದ್ದರೂ ಹೆಚ್ಚಿನವು ಬಹುಕಾಲ ಸಮಕಾಲೀನವಾಗಿಯೇ ಉಳಿಯಬಲ್ಲ ಲೇಖನಗಳಾಗಿವೆ. ರಘು ಅವರ ಬರವಣೆಗೆಯ ಕ್ಯಾನವಾಸ್ ತುಂಬಾ ವಿಶಾಲವಾದದ್ದು. ಪೋಸ್ಟ್ ಟೂತ್, ನಗದು ಅಮಾನೀಕರಣ, ರೈತರ ಆತ್ಮಹತ್ಯೆ, ಜಾಗತೀಕರಣ, ಯೋಗ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸ್ವಾತಂತ್ರ್ಯ, ಹೀಗೆ ಹಲವು ವಿಷಯಗಳು ಬಂದುಹೋಗುತ್ತವೆ. ಅಥವಾ ಆ ಎಲ್ಲಾ ನೆಲೆಗಳಿಂದ ನೋಡುವುದಕ್ಕೆ ಸಾಧ್ಯವಾಗಿರುವುದರಿಂದಲೇ ಆಹಾರ ರಾಜಕೀಯದ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುವುದಕ್ಕೆ ಈ ಲೇಖನಗಳಿಗೆ ಸಾಧ್ಯವಾಗಿದೆ.
ಇವರ ಅಂಕಣದ ಹಿಂದೆ ಇರುವ ಅಪಾರ ಓದು, ವಿಷಯದ ಬಗ್ಗೆ ಕಾಳಜಿ, ಒಂದು ವಿಷಯವನ್ನು ಹಲವು ಆಯಾಮಗಳಿಂದ ನೋಡುವ ಹಾಗೂ ವಿವರಿಸುವ ಶೈಲಿ, ಇವುಗಳಿಂದಾಗಿ ಇವರಿಗೆ ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. ತಮ್ಮ ಅನುಭವಗಳು, ಆತಂಕಗಳು, ಭಾವನೆಗಳು ಹಾಗೂ ತಮ್ಮ ತೀವ್ರವಾದ ಆಸಕ್ತಿಯನ್ನು ಓದುಗರಿಗೂ ವರ್ಗಾಯಿಸುವುದರಲ್ಲಿ ಇವರ ಲೇಖನಗಳು ಯಶಸ್ವಿಯಾಗುತ್ತವೆ. ಈ ಬರವಣಿಗೆಗಳು ನಮಗೆ ಮಾಹಿತಿ ಕೊಡುತ್ತಾ, ಎಚ್ಚರಿಸುತ್ತಾ, ಚಿಂತನೆಗೆ ಹಚ್ಚುತ್ತಾ, ಕ್ರಿಯಾಶೀಲರಾಗುವಂತೆ ಒತ್ತಾಯಿಸುತ್ತಾ ಸಾಗುತ್ತವೆ.
ಟಿ ಎಸ್ ವೇಣುಗೋಪಾಲ್
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.