Your cart is empty now.
ಪ್ರಸಿದ್ಧ ಮಲಯಾಳಿ ಕತೆಗಾರರಾದ ವೈಕಂ ಮಹಮ್ಮದ್ ಬಶೀರ್ ಅವರ 'ಒರು ಮನುಷ್ಯನ್' ಎಂಬ ಕಥೆಯೊಂದಿದೆ. ಅದರ ಇಂಗ್ಲಿಷ್ ಅನುವಾದದಲ್ಲಿರುವ ಒಂದು ಸಾಲು,
'The world is more evil than good.
We realize this only after we get hurt'.
ವೆಂಕಟ್ರಮಣ ಗೌಡರ 'ಕವರ' ಕಾದಂಬರಿ ಓದುತ್ತಾ ನನಗೆ ಬಶೀರರ ಈ ಸಾಲು ನೆನಪಾಯಿತು.
ಇಲ್ಲಿಯ ಪಾತ್ರಗಳು ವಿಲಕ್ಷಣ ಮನಸ್ಥಿತಿಯನ್ನು ಉಸಿರಾಡುತ್ತಾ, ಬೇಯುತ್ತಾ ಮತ್ತೆ ಬದುಕುತ್ತಾ ಸಾಗುತ್ತವೆ. ನೈಜ ವ್ಯಕ್ತಿತ್ವ ಎನ್ನುವುದು ಮತ್ತು ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಎಂಬುದು ಅಸಹಜ ಪರಿಕಲ್ಪನೆ ಎಂಬ ಸತ್ಯವನ್ನು ಇಲ್ಲಿ ಗೌಡರು ಹೇಳ ಹೊರಟಿರುವಂತಿದೆ.
ಮನುಷ್ಯನ ಹುಡುಕಾಟದ ಹಾದಿ ಕೊನೆಯಿಲ್ಲದ್ದು, ತನ್ನೊಳಗಿನ ಮತ್ತು ಹೊರಗಿನ ಸಂಗತಿಗಳಿಗೆ ನಿತ್ಯ ಮುಖಾಮುಖಿಯಾಗುತ್ತಲೇ ಇರುವ ಮನುಷ್ಯ ತನ್ನೊಳಗಿನ ದ್ವಂದ್ವಗಳನ್ನು ಅರಿಯುವ, ಮೀರುವ ಪ್ರಯತ್ನ ಮಾಡುತ್ತಾನೆ. ಆದರೆ ಅದು ಅಷ್ಟು ಸುಲಭವಲ್ಲ.
ಇದೊಂದು ಕಾದಂಬರಿ ಎನ್ನಿಸದೇ ಕತೆಯೊಳಗೊಂದು ಕತೆಯಂತೆ ತೆರೆದುಕೊಳ್ಳುತ್ತದೆ. ಪಾತ್ರದೊಳಗಿನ ಪಾತ್ರಗಳು ಮೈತಳೆದು ಮಾತನಾಡುತ್ತವೆ. ಬರವಣಿಗೆಯ ತಂತ್ರದಲ್ಲೂ ಹೊಸತನವಿದೆ. ರಂಗಸ್ಥಳದಲ್ಲಿ ಪ್ರಾರಂಭವಾಗುವ ಕಾದಂಬರಿ, ಆನಂತರ ಬದುಕಿನ ಬಯಲನ್ನೇ ರಂಗಸ್ಥಳವಾಗಿಸಿಕೊಳ್ಳುತ್ತದೆ.
ಕಾದಂಬರಿಯಲ್ಲಿ ಬರುವ 'ಒಂದು ಪಾತ್ರ ರೂಪಕವಾಗುವುದೆಂದರೆ ತನ್ನ ಮುಗಿಯದ ಸಂಕಟಗಳಲ್ಲಿ ಬೇಯುತ್ತಾ ಸಾಯುವುದೇ?' ಎಂಬ ಪ್ರಶ್ನೆಯೇ ಇಡೀ ಕಾದಂಬರಿಯ ಮೂಲ ವಸ್ತು ಎಂಬಂತಿದೆ.
ನಾಗರೇಖಾ ಗಾಂವಕರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.