Free Shipping Charge on Orders above ₹400

Shop Now

Takkanobbana Aatmacharitre Sale -10%
Rs. 225.00Rs. 250.00
Vendor: Beetle Book Shop
Type: PRINTED BOOKS
Availability: 6 left in stock

ಮೊಗಲ್ ಸಂತತಿಯ ಸಮರ್ಥ ಸಮ್ರಾಟರಲ್ಲಿ ಕೊನೆಯವನಾದ ಔರಂಗಜೇಬನ ನಂತರ ಅಧಿಕಾರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ನಿರಂತರ ಸೆಣಸಾಟಗಳಾದವು, ಮರಾಠರು, ಬ್ರಿಟಿಷರು ಇವರಲ್ಲಿ ಪ್ರಮುಖರಾದರೂ, ಮೊಗಲರ ಸುಭೇದಾರರು, ರಾಜರು ಅಂತಹ ಹಿನ್ನೆಲೆಯಿಲ್ಲದ ಸಮರ್ಥ ಸಾಹಸಿಗಳು ಇವರೆಲ್ಲ ಇದ್ದರು. ರಾಜಕೀಯ ಪ್ರಾಬಲ್ಯಕ್ಕಾಗಿ ಇಂಥ ಬಹುಮುಖ ಹೋರಾಟಗಳು ಸಾಗುತ್ತಿರುವಾಗ, ದೇಶವು ಅರಾಜಕತೆಗೆ ಗುರಿಯಾಯಿತು. ಸಜ್ಜಾದ ಒಂದು ಕುದುರೆ, ಸಾಹಸಕ್ಕೆ ಉತ್ಸುಕವಾದ ಹೃದಯ ಮತ್ತು ಹೇಗಾದರೂ ಒದಗಿಸಿಕೊಂಡ ಹಣ, ಬಲ ಇದ್ದವರೆಲ್ಲ ಗುಂಪುಗೂಡಿಕೊಂಡು ಹಣ ಕೊಳ್ಳೆ ಹೊಡೆದರು. ಹತ್ಯೆ ಮಾಡಿದರು. ಊರು, ಹಳ್ಳಿಗಳನ್ನು ಸುಟ್ಟರು. ಹಾಹಾಕಾರ ಹುಟ್ಟಿಸಿದರು. ಅಂಥವರಲ್ಲಿ ಠಕ್ಕರು, ಪಿಂಡಾರಿಗಳು, ಕುಂಜುಗಳ್ಳರು, ಒಬ್ಬರನ್ನು ಒಬ್ಬರು ಮೀರಿಸುವ ಭಯಂಕರರು. ಬ್ರಿಟಿಷರ ಮೇಲುಗೈಯಾದ ಮೇಲೆ 1820ರಿಂದ ಸುಮಾರು ಎರಡು ದಶಕ ಕಾಲ ದೇಶವನ್ನು ತಹಬಂದಿಗೆ ತರುವ ಕಾರ್ಯ ಜರುಗಿತು. ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಸತಿ ಪದ್ಧತಿಗೆ ವಿರೋಧವಾದ ಕಾಯಿದೆ ಮಾಡಿದ್ದರಿಂದ ಮಾತ್ರ ಖ್ಯಾತನಲ್ಲ; ಠಕ್ಕರನ್ನು ಅಡಗಿಸಿದುದರಲ್ಲೂ ಅವನ ಪಾತ್ರ ಮಹತ್ವದ್ದು. ಆ ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ ಮೆಡೋಸ್ ಟೇಲರ್ ಭಾರತವನ್ನು ಕುರಿತು ಬರೆದವರಲ್ಲಿ ಪ್ರಮುಖ. ಠಕ್ಕರ ಗುಂಪಿನ ನಾಯಕನೊಬ್ಬ ಕೈದಿಯಾಗಿದ್ದಾಗ ಅವನಿಂದಲೇ ಆತ್ಮಕಥನ ರೂಪದಲ್ಲಿ ಠಕ್ಕ ವೃತ್ತಿಯ ಭೀಕರತೆಯನ್ನು ಹೇಳಿಸಿ ಬರೆದಿರಿಸಿದ್ದಾನೆ. ಇದು ಸಾಹಿತ್ಯವೂ ಹೌದು; ಇತಿಹಾಸವೂ ಹೌದು; ಒಂದು ರೀತಿಯಲ್ಲಿ ಸಮಯೋಚಿತವಾದ ಎಚ್ಚರಿಕೆಯೂ ಹೌದು. -(ಬೆನ್ನುಡಿಯಿಂದ)

Guaranteed safe checkout

Takkanobbana Aatmacharitre
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading