ಶ್ರೀ ಸಿದ್ದಯ್ಯ ಪುರಾಣಿಕರು ಅರ್ವಾಚೀನ ಶ್ರೀ ಸಾಮಾನ್ಯರಿಗೆ ಪ್ರಾಚೀನ ಸಾಮಾನ್ಯತಾಶ್ರೀಯನ್ನು ಸುಲಭ ಮಧುರ ರೂಪದಲ್ಲಿ ಉಣಬಡಿಸಿದ್ದಾರೆ, ಅವರ 'ಶರಣ ಚರಿತಾಮೃತ'ದಲ್ಲಿ.
ಉತ್ತಮ ವರ್ಗದವರಿಗೆ ಮಾತ್ರ ಮೀಸಲು ಎಂದು ಭ್ರಮಿಸಿದ್ದ ಭಕ್ತಿ, ಜ್ಞಾನ, ಭಗವದನುಭೂತಿ ಮತ್ತು ಆಧ್ಯಾತ್ಮಿಕ ಉನ್ನತಿ ಇವುಗಳಿಗೆ ಸಾಮಾನ್ಯ ಜನರೂ ಕೆಳವೃತ್ತಿಯವರೆಂದೂ ಕೀಳು ಜಾತಿಯವರೆಂದೂ ಮೂಲೆಗೆ ತಳ್ಳಿಸಿಕೊಂಡು ಅನಾಮಧೇಯರೂ ಅಜ್ಞಾತರೂ ಆಗಿ, ದೇವಸ್ಥಾನಗಳಿಗೂ ರಾಜಾಸ್ಥಾನಗಳಿಗೂ ಬಹುದೂರದಲ್ಲಿಯೆ ನಿಂತಿರುತ್ತಿದ್ದವರೂ ಸಾಧಕರಾಗಿ, ಶರಣರಾಗಿ, ಸಿದ್ಧರಾಗಿ ಪರಮ ಶ್ರೇಯಸ್ಸಿನ ಮಹೋನ್ನತ ಶಿಖರಗಳಿಗೆ ಏರಿದ ರೋಮಾಂಚಕ ನಿದರ್ಶನಗಳನ್ನೊಳಗೊಂಡ ಈ ಕಥನ ಕೃತಿ ನಮ್ಮ ಸಾಮಾನ್ಯ ಜನವರ್ಗಕ್ಕೆ ಆಶೆ ಧೈಶ್ಯ ಆತ್ಮಗೌರವಗಳನ್ನು ದಯಪಾಲಿಸಿ, ಅವರನ್ನು ರಾಜಕೀಯ ಪ್ರಜಾಸತ್ತೆಗೆ ಮಾತ್ರವಲ್ಲದೆ ಆಧ್ಯಾತ್ಮಿಕವಾದ ಆತ್ಮಶ್ರೀಯ ಪ್ರಜಾಸತ್ತೆಗೂ ಅಧಿಕಾರಿಗಳನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.
ಶರಣರ ಜೀವನ ಚರಿತ್ರೆಯ ತಾತ್ಪರವನ್ನೂ ಹೃದಯವನ್ನೂ ದರ್ಶನ ಧ್ವನಿಯನ್ನೂ ಗ್ರಹಿಸಿ, ಆಧುನಿಕವಾದ ವೈಜ್ಞಾನಿಕ ದೃಷ್ಟಿಯಿಂದಲೂ ವಿಚಾರಬುದ್ಧಿಯಿಂದಲೂ ಅವರು ಮುಂದುವರಿದರೆ ಸರ್ವಧರ್ಮ ಸಮಾನತೆಯ ಮೇಲೆ ನಿಂತಿರುವ ಭಾರತ ರಾಷ್ಟ್ರಕ್ಕೆ ಶಾಶ್ವತವೂ ಸ್ಥಿರವೂ ಆಗಿರುವ ಅಡಿಪಾಯ ಸಿದ್ಧವಾಗುತ್ತದೆ; ಲೋಕಕ್ಕೂ ಮಾರ್ಗದರ್ಶನವಾಗಬಹುದು.
- ಕುವೆಂಪು (ಮುನ್ನುಡಿಯಿಂದ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.