Your cart is empty now.
What i talk about when i talk about running : a memoir by Haruki Murakami
ಎಲ್ಲ ವಿರೋಧಗಳ ನಡುವೆ ನಾನು ಬಾರ್ ಮಾriದೆ, ಇದರಿಂದ ತೊಂದರೆ ಆಗಿದ್ದಂತೂ ನಿಜ ಆದರೆ ನಾನು ಕಾದಂಬರಿಕಾರನಾಗಲು ಈ ತ್ಯಾಗದ ಅವಶ್ಯಕತೆ ಇತ್ತು. 'ಕೇವಲ ಎರಡು ವರ್ಷ ಮಾತ್ರ, ನಾನು ಸಂಪೂರ್ಣ ತಲ್ಲೀನನಾಗಿ ಕಾದಂಬರಿ ಬರೆಯುತ್ತೇನೆ, ಅಕಸ್ಮಾತ್ ನಾನು ವಿಫಲನಾದರೆ ನಮ್ಮ ಹಳೆಯ ವ್ಯವಹಾರವನ್ನೇ ಮತ್ತೆಲ್ಲಿಯಾದರೂ ಪ್ರಾರಂಭಿಸಿದರೆ ಆದೀತು' ಎಂದು ಹೆಂಡತಿಯ ಮನವೊಲಿಸಿದೆ. 'ನಮ್ಮಿಬ್ಬರಿಗೂ ಅಂಥ ವಯಸ್ಸೇನೂ ಆಗಿಲ್ಲ, ಅಂಥ ಸಂಕಟವೇನಾದರೂ ಬಂದರೆ ಇಬ್ಬರೂ ಸೇರಿ ನಮ್ಮ ಹಳೆಯ ಬಿಜಿನೆಸ್ ಮತ್ತೆ ಮಾಡೋಣ' ಅಂದಾಗ ಹೆಂಡತಿ ಒಪ್ಪಿದಳು. 1981 ರಲ್ಲಿ ನಾನು, ಇರುವ ವ್ಯವಹಾರ ಬಿಟ್ಟಾಗ ಇನ್ನೂ ಸ್ವಲ್ಪ ಸಾಲ ಇತ್ತು ಆದರೂ ನಾನು ನನ್ನ ಅದೃಷ್ಟ ಪರೀಕ್ಷಿಸಬೇಕಿತ್ತು.
ನಾನು ಕಾದಂಬರಿ ಬರವಣಿಗೆಯಲ್ಲಿ ತೊಡಗಿಕೊಂಡೆ. ಇದಕ್ಕಾಗಿ ಒಂದು ವಾರ ಹೊಕಾಲ್ಲೋವಿನಲ್ಲಿ ಸಂಶೋಧನೆ ಮಾಡಬೇಕಾಯ್ತು. ಏಪ್ರಿಲ್ ತಿಂಗಳ ಹೊತ್ತಿಗೆ ನನ್ನ ಕಾದಂಬರಿ 'ಏ ವೈಲ್ಡ್ ಷೀಪ್ ಚೇಜ್' ಪೂರ್ಣಗೊಂಡಿತು. ನನಗಂತೂ ಈ ಪ್ರಯತ್ನ ಮಾಡು ಇಲ್ಲವೆ ಮಡಿ' ಎಂಬಂತಾಗಿತ್ತು ಆದ್ದರಿಂದ ನನ್ನೆಲ್ಲ ಶಕ್ತಿ ಮೀರಿ ಕಾದಂಬರಿಗೆ ಜೀವ ತುಂಬಲು ಯತ್ನಿಸಿದೆ. ಹಿಂದಿನ ಎರಡು ಕಾದಂಬರಿಗಳಿಗಿಂತಲೂ ಈ ಕಾದಂಬರಿ ದೀರ್ಘವಾಗಿದ್ದು ಆಶಯ ಶಕ್ತಿಯುತವಾಗಿತ್ತು. ಕಥಾ ಹಂದರ ಕೂಡ ವಿಸ್ತಾರವಾಗಿತ್ತು. ಕಾದಂಬರಿ ಪೂರ್ಣಗೊಂಡಾಗ ನನ್ನದೇ ಬರಹ ಶೈಲಿ ಗಳಿಸಿದ್ದು ನನಗೆ ಖುಷಿ ತಂದಿತು. ಸಮಯದ ಬಗ್ಗೆ ಚಿಂತಿಸದೆ ಒಂದೆಡೆ ಕುಳಿತು ಕಾದಂಬರಿ ಬರೆದು ಮುಗಿಸಿದ್ದು ನನ್ನ ಬಗ್ಗೆ ನನಗೆ ಅಚ್ಚರಿ ಮೂಡಿಸಿತು. ಆದರೂ ಸಹ ನನ್ನೊಳಗಿನ್ನೂ ನಾನು ತಾಕದ ವಿಚಾರಗಳ ಹಲವು ತೊರೆಗಳಿವೆ ಅನ್ನಿಸಿತು. ಈಗಂತೂ ನಾನು ಸಂಪೂರ್ಣ ಕಾದಂಬರಿಕಾರನಾಗಿ ಬದುಕಲು ಸಾಧ್ಯ ಅನ್ನುವ ಆತ್ಮವಿಶ್ವಾಸ ಮೂಡಿತ್ತು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.