Free Shipping Charge on Orders above ₹300

Shop Now

Mirza ghalib ( Kathana Mattu Kaavya ) Sale -10%
Rs. 135.00Rs. 150.00
Vendor: BEETLE BOOK SHOP
Type: PRINTED BOOKS
Availability: 7 left in stock

ಉರ್ದು ಮತ್ತು ಪರ್ಶಿಯನ್ ಕಾವ್ಯದ ರಸಾನುಭವದ ಸೊಗಡನ್ನು ತನ್ನ ಕವಿತೆಯ ಮೂಲಕ ಕಟ್ಟಿಕೊಟ್ಟ ಅಪ್ರತಿಮ ಕವಿ ಮಿರ್ಜಾ ಗಾಲಿಬ್, ಬಣ್ಣನೆಗೆ ನಿಲುಕದ ವ್ಯಕ್ತಿತ್ವದ ಗಾಲಿಬ್ ಒಬ್ಬ ತುಂಬು ರಸಜ್ಞ ಬದುಕಿನ ರಂಜಕತೆಯೊಟ್ಟಿಗೆ ಅದರ ಅಸಹಾಯತನ, ದೌರ್ಜನ್ಯಗಳ ತಲ್ಲಣಗಳನ್ನು ಅನುಭವಿಸಿದವನು. ತನ್ನನ್ನೇ ಲೇವಡಿಗೊಳಪಡಿಸಿ ಕಾವ್ಯದ ಮೂಲಕ ಸ್ವವಿಮರ್ಶೆಗೊಳಗಾದ ಕವಿ. ಬದುಕು ಕಾವ್ಯದಲ್ಲಿಯ ಆ ವ್ಯಂಗ್ಯದ ಮಿಣುಕು ಬೆಳಕುಗಳು ಆತ್ಮವನ್ನು ತಟ್ಟುತ್ತದೆಂಬುದನ್ನು ಈ ಕೃತಿ ಸಾಬೀತುಪಡಿಸುತ್ತದೆ.
ಜಗದೀಶ್ ಕೊಪ್ಪ ನೀಡಿದ ಗಾಲಿಬ್‌ನ ಕಥನ ನಿರೂಪಣೆ ನಮ್ಮನ್ನು ಇತಿಹಾಸಕ್ಕೆ ಕೊಂಡೊಯ್ಯುತ್ತದೆ. ದಿಲ್ಲಿಯ ವೈಭವ ಮತ್ತು ಪತನಗಳಿಗೆ ಸಾಕ್ಷಿಯಾದ ಗಾಲಿಬ್ ತುಡಿತಗಳು ಮನದಲ್ಲಿ ಇಂಗುತ್ತವೆ. ಸಿಪಾಯಿದಂಗೆಯ ಮಾರಣಹೋಮದ ಸತ್ಯದ ತುಣುಕುಗಳನ್ನು, ಮೊಗಲ್ ಅರಸರು ಬೀದಿಪಾಲಾದ, ನೇಣಿಗೇರಿದ ವಿವರಗಳನ್ನು ತೀವ್ರ ಪರಿಣಾಮಕಾರಿ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಜಗದೀಶ್ ಕೊಪ್ಪ ಗದ್ಯಕ್ಕೆ ಕಾವ್ಯದ ಸ್ಪರ್ಶ ದಕ್ಕಿರುವುದರಿಂದಲೇ ಇಡೀ ಘಟನಾವಳಿಗಳು ದಟ್ಟ ಅನುಭವಗಳ ಗುಂಗಿನಲ್ಲಿ ಅದ್ದಿದಂತಿದೆ. ಒಂದೆಡೆ ಗಾಲಿಬ್‌ನ ಖುಷಿ, ಹತಾಶೆ, ಕಳವಳಗಳು, ಇನ್ನೊಂದೆಡೆ ಬ್ರಿಟೀಷರ ಅಟ್ಟಹಾಸದ ಠೇಂಕಾರಗಳು ಹೃದಯ ತಲ್ಲಣಿಸುವಂತಿವೆ. ಗಾಲಿಬ್‌ನ ಮಧುಶಾಲೆ ಹಾಗೂ ದಿಲ್ಲಿಯ ಮಾಯೆಯು ವಿಶಿಷ್ಟ ಅನುಭವದ ಅಂಗಳಕ್ಕೆ ತಂದು ನಿಲ್ಲಿಸುತ್ತದೆ.
ಗಾಲಿಬ್ ಉರ್ದು, ಪರ್ಶಿಯನ್ ಭಾಷೆಯ ಪಂಡಿತ. ತನ್ನ ಕಾವ್ಯದಲ್ಲಿ ಇವೆರಡನ್ನೂ ಹದವಾಗಿ ಬೆರೆಸಿ ಕಟ್ಟಿದ ಕಾವ್ಯದ ಗಂಭೀರತೆ ಮತ್ತು ಲಾಲಿತ್ಯಕ್ಕೆ ಗುಲಗಂಜಿಯಷ್ಟು ಧಕ್ಕೆ ಬರದಂತೆ ಸಹಜವಾಗಿ ಕನ್ನಡಕ್ಕೆ ಜಗದೀಶ್ ಕೊಪ್ಪ ತಂದಿದ್ದಾರೆ. ಗಾಲಿಬ್‌ನ ಅನುಭವ ಆಳವ ಬಗೆದು ಕವಿತೆಯಲ್ಲಿ ಸುರಿದಿದ್ದಾರೆ. ಕಾವ್ಯದ ಮೂಲ ಆತ್ಮದ ಸಾಕ್ಷಾತ್ಕಾರವು ಅವರ ಬರಹದಲ್ಲಿ ಸಾಧ್ಯವಾಗಿದೆ.

_ ಡಿ.ಎಸ್. ಚೌಗಲೆ

Guaranteed safe checkout

Mirza ghalib ( Kathana Mattu Kaavya )
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading