Free Shipping Charge on Orders above ₹400

Shop Now

Masthi Kathaloka Sale -10%
Rs. 252.00Rs. 280.00
Vendor: BEETLE BOOK SHOP
Type: PRINTED BOOKS
Availability: 5 left in stock

ಕನ್ನಡಿಗರ ಪಾಲಿಗೆ ಮಾಸ್ತಿಯವರ ಸಣ್ಣಕತೆಗಳು ಅಪರಿಚಿತವಲ್ಲ. ಹಾಗೆಂದ ಮಾತ್ರಕ್ಕೆ ಅವು ಹಳತಾದುವೆಂದು ಅರ್ಥವಲ್ಲ. ಹೇಗೆ ಮಾಸ್ತಿಯವರ ತಿಳಿನಗೆಯಲ್ಲಿ ಒಂದು ಸಂಸ್ಕೃತಿಯ ಆಳ ತುಂಬುತನಗಳು ಇವೆಯೋ ಹಾಗೆಯೇ ಅವರ ಸಣ್ಣಕತೆಗಳಲ್ಲಿಯೂ ಎಲ್ಲ ಕಾಲದ, ಎಲ್ಲ ದೇಶದ ಮಾನವರ ಭಾವಗಳ ಮಿಡಿತ- ತುಡಿತಗಳಿವೆ. ಇವನ್ನು ಕುರಿತು ಅದೆಷ್ಟು ಅನುಸಂಧಾನ ಮಾಡಿದರೂ ಅವು ನಮ್ಮನ್ನು ಇನ್ನಷ್ಟು ತನ್ಮಯಗೊಳಿಸುತ್ತವೆ; ತಾವೇ ಹೊಸಹೊಸತಾಗಿ ಕಾಣುತ್ತವೆ. ಆದುದರಿಂದಲೇ ಕನ್ನಡದಲ್ಲಿ ಮಾಸ್ತಿಯವರ ಕಥೆಗಳ ಅಧ್ಯಯನಕ್ಕೊಂದು ನಿಡಿದಾದ ಪರಂಪರೆಯಿದೆ. ಈ ಮಾಲೆಗೆ ಸೇರಿದ ಹೊಸತೊಂದು ಮಲರು 'ಮಾಸ್ತಿ ಕಥಾಲೋಕ'. ಇದನ್ನು ಅಕ್ಕರೆಯ ನೀರೆರೆದು, ಆಲೋಚನೆಯ ಹಂಬು ಕಟ್ಟಿ, ಪಕ್ವತೆಯ ಸಂಜೆಯ ಹೊತ್ತು ಬಿಡಿಸಿ ಕಟ್ಟಿದವರು ಪ್ರೊ|| ಎಲ್. ವಿ. ಶಾಂತಕುಮಾರಿ ಅವರು.

ಪ್ರಕೃತ ಕೃತಿಯಲ್ಲಿ ಮಾಸ್ತಿಯವರ ನೂರು ಸಣ್ಣಕತೆಗಳಿಂದ ಆಯ್ದ ಅರವತ್ತಕ್ಕೂ ಮಿಕ್ಕ ಕಥೆಗಳ ಅನೌಪಚಾರಿಕ ಪರಿಚಯ-ವಿಶ್ಲೇಷಣೆಗಳಿವೆ ಮೂರು ಭಾಗಗಳಾಗಿ ವಿಂಗಡಗೊಂಡ ಈ ಗ್ರಂಥದಲ್ಲಿ ಮೊದಲ ಭಾಗವು ನಮ್ಮ ದೇಶದ ಪುರಾಣ ಇತಿಹಾಸಗಳನ್ನು ಆಧರಿಸಿದ ಕಥೆಗಳನ್ನೂ ಎರಡನೆಯ ಭಾಗವು ವಿದೇಶೇತಿಹಾಸದ ವ್ಯಕ್ತಿ-ಘಟನೆಗಳನ್ನು ನೆಮ್ಮದ ಕಥೆಗಳನ್ನೂ ಮೂರನೆಯ ಭಾಗವು ನಮ್ಮ ದೇಶದ ವರ್ತಮಾನಕಾಲದ ಸಾಮಾಜಿಕ ಕಥೆಗಳನ್ನೂ ವಿವೇಚಿಸಿದೆ. ಹೀಗೆ ಈ ಕೃತಿ ತುಂಬ ಪ್ರಾತಿನಿಧಿಕವಾಗಿದೆ. ಅಲ್ಲದೆ ಮಾಸ್ತಿಯವರಿಗೆ ನ್ಯಾಯ ಕಲ್ಪಿಸುವಂತೆ ಅವರು ಒಪ್ಪಿದ ಜೀವನಮೌಲ್ಯಗಳ ಹಿನ್ನೆಲೆಯಲ್ಲಿ, ಸಾಹಿತ್ಯಸಂವೇದನೆಯ ಮುನ್ನೆಲೆಯಲ್ಲಿ ಬರೆಹ ಸಾಗಿದೆ. ಹೀಗಾಗಿಯೇ ಮಾಸ್ತಿ ಜಿಜ್ಞಾಸುಗಳಿಗೆ ಪ್ರಸ್ತುತ ಗ್ರಂಥ ಬೆಲೆಯುಳ್ಳದ್ದೆನಿಸಿದೆ. ಪ್ರತಿಯೊಂದು ಕಥೆಯ ಇತಿವೃತ್ತಸಾರವನ್ನು ಮಾಸ್ತಿಯವರ ಮಾತುಗಳನ್ನೇ ಹೆಚ್ಚಾಗಿ ಬಳಸಿಕೊಂಡು ನಿರೂಪಿಸುವ ಮೂಲಕ ಶಾಂತಕುಮಾರಿ ಅವರು ತಮ್ಮ ಹಿತ-ಮಿತವಾದ ವಿಶ್ಲೇಷಣೆಗೆ ಸಮರ್ಥವಾದ ಹಿನ್ನೆಲೆಯನ್ನು ನೀಡಿದ್ದಾರೆ. ಇದು ಓದುಗರಿಗೂ ತುಂಬ ಉಪಕಾರಿ. ಮೂಲಕಥೆಗಳನ್ನು ಓದದ ಅಥವಾ ಓದಿಯೂ ಮರೆತ ವಾಚಕರೂ ಅವನ್ನರಿಯಲು ಯಾವುದೇ ತೊಡಕಾಗದಂತೆ ಪ್ರಸ್ತುತ ಕ್ರಮ ಸಹಕರಿಸಿದೆ. ಇದು ಈ ಪುಸ್ತಕದ ವೈಶಿಷ್ಟ್ಯಗಳಲ್ಲಿ ಒಂದೆಂದು ಹೇಳಬಹುದು ಚಿಕ್ಕ ಚಿಕ್ಕ ವಾಕ್ಯಗಳಲ್ಲ, ಅಕ್ಲಿಷ್ಟವಾದ ಪದಗಳಲ್ಲಿ ಮಲ್ಲಿಗೆಯ ಮಾಲೆಯ ನಡುವೆ ಮರುಗ ಕನಕಾಂಬರಗಳ ಹಾಗೆ ಮಿಂಚಿ ಮೆರೆಯುವ ಶಾಂತಕುಮಾರಿ ಅವರ ವಿಶ್ಲೇಷಣೆಗಳು ಮಾಸ್ತಿಯವರ ಹಾಗೂ ಓದುಗರ ನಡುವೆ ಯಾವುದೇ ತೆರೆಯನ್ನೆಆಯದೆ, ಮುಕ್ತ ಸಂವಹನವನ್ನು ಕಲ್ಪಿಸಿರುವ ಹದ ಓದಿಯೇ ಅರಿಯಬೇಕಾದ ಸೊಗಸು.

ಶತಾವಧಾನಿ ಡಾ|| ಆರ್. ಗಣೇಶ್

Guaranteed safe checkout

Masthi Kathaloka
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading