Your cart is empty now.
ಪೋಲೆಂಡಿನ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ ಮೇರಿ ಕ್ಯೂರಿ ವಿಕಿರಣ ಪಟುತ್ವ ಮತ್ತು ರೇಡಿಯಂಗಳನ್ನು ಕುರಿತು ಉತ್ಕೃಷ್ಟ ಸಂಶೋಧನೆಗಳನ್ನು ನಡೆಸಿ ವಿಜ್ಞಾನದ ಎರಡು ವಿಭಾಗಗಳಲ್ಲಿ ನೊಬೆಲ್ ಬಹುಮಾನ ಪಡೆದ ಏಕೈಕ ವಿಜ್ಞಾನಿಯಾದುದಲ್ಲದೆ ಫ್ರಾನ್ಸ್ ದೇಶದ ಅತ್ಯುನ್ನತ ಗೌರವವನ್ನೂ ಪಡೆದಳು.
ಈ ಪುಸ್ತಕದಲ್ಲಿ ಸಿಡ್ನಿ ಶ್ರೀನಿವಾಸ್ ಅವರು ಅವಳ ವಿಜ್ಞಾನ, ವೃತ್ತಿ ಜೀವನ ಮತ್ತು ಅವಳ ದೈನಂದಿನ ಬದುಕು ಹೇಗಿತ್ತು ಎಂಬುದರ ಚಿತ್ರಣವನ್ನು ಮೆಲುಮಾತಿನ ಸರಳ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಪ್ರೇಮ, ನೋವು, ದುಃಖ ಇವುಗಳಿಗೆ ಓಗೊಟ್ಟ ಮೇರಿ ಮತ್ತು ತನ್ನ ಪತಿ ಪಿಯರಿ ಕ್ಯೂರಿಯ ಮರಣದ ನಂತರ ಶೋಕ ಸಾಗರದಲ್ಲಿ ಮುಳುಗೇಳುವ ಏಕಾಂಗಿ ಮೇರಿ ಈ ಕೃತಿಯಲ್ಲಿ ಕಂಡುಬರುತ್ತಾರೆ. ಹೊರದೇಶದ ಮಹಿಳೆ ಎಂಬ ಕಾರಣಕ್ಕೆ ಫ್ರೆಂಚ್ ಸಮಾಜ ಅವಳತ್ತ ತಾರತಮ್ಯ ತೋರಿದರೆ, ಅವಳ ಒಂದೊಂದು ನೊಬೆಲ್ ಬಹುಮಾನದ ಹಿಂದೆಯೂ ನಾಟಕವೇ ನಡೆದು ಹೋಯಿತು.
ಸಿಡ್ನಿ ಶ್ರೀನಿವಾಸ್ ಅವರು ವಿಜ್ಞಾನ ತೀರ್ಥಯಾತ್ರೆ" ಕೈಗೊಂಡು ವಾರ್ಸಾ ಮತ್ತು ಪ್ಯಾರಿಸಿನಲ್ಲಿರುವ ಕ್ಯೂರಿ ಮ್ಯೂಸಿಯಂಗಳಿಗೆ ಭೇಟಿ ನೀಡಿ, ಕುತೂಹಲಕಾರಿ ಅಂಶಗಳನ್ನು ಮತ್ತು ಅಪರೂಪದ ಛಾಯಾಚಿತ್ರಗಳನ್ನು ಸೇರಿಸಿರುವುದರಿಂದ ಈ ಅಧಿಕೃತ ಕೃತಿಯ ಸೊಗಸು ಮತ್ತಷ್ಟು ಹೆಚ್ಚಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.