Your cart is empty now.
ಹರಿದಾಸರ ಪದ-ಕೀರ್ತನೆ -ಸುಳಾದಿ-ಉಗಾಭೋಗ ಇತ್ಯಾದಿಗಳಲ್ಲಿ ಕಂಡುಬರುವ 'ಉಪಚಾರ' ಎಂಬ ಮಾತನ್ನು, ಸನ್ನಿವೇಶವನ್ನು, ಪದಗಳನ್ನು ಪರಿಭಾಷೆಯಾಗಿ ಪರಿಗಣಿಸಬಹುದಾದ ಎಲ್ಲವನ್ನೂ ಸಂಗ್ರಹಿಸಿ ಡಾ.ಬಿ.ಎ. ಶಾರದ ಮತ್ತು ಎನ್.ಕುಸುಮ ಅವರು ಈ ಪುಸ್ತಕವನ್ನು ಬರೆದುಕೊಟ್ಟಿದ್ದಾರೆ. ಇದು ಕನ್ನಡಿಗರಿಗೂ ಕನ್ನಡ ಭಾಷೆಗೂ ಕರ್ನಾಟಕ ಸಂಗೀತಕ್ಕೂ ಅಮೂಲ್ಯವಾದ ಕೊಡುಗೆ ಎಂದು ನನಗನ್ನಿಸಿದೆ.
ಸುಮಾರು ೨೮೦ ಪುಟಗಳನ್ನು ಮೀರಿಕೊಂಡು ಉಪಚಾರ ಸಾಹಿತ್ಯವೆಂದು ತಾವು ಕರೆದುಕೊಂಡಿರುವ ಶೀರ್ಷಿಕೆಯಲ್ಲಿ ಭಕ್ಷ್ಯಭೋಜ್ಯಪೇಯಪಾನೀಯಗಳು, ಹಣ್ಣು ತರಕಾರಿಗಳು, ಔಷಧೋಪಚಾರ, ಪದ್ಮವಿಚಾರ, ನೀತಿ ಬೋಧೆ ಇವುಗಳ ಪ್ರಸಕ್ತಿಯಲ್ಲಿ ಇರುವ ವಿಡಂಬನೆ-ಮೌಲ್ಯ-ನಿಷ್ಠೆ ಶ್ರದ್ದೆಗಳು ಇತ್ಯಾದಿ ವಿಷಯಗಳನ್ನು ಸವಿವರವಾಗಿ ತಿಳಿಸಿ ಅಲ್ಲಲ್ಲಿ ಆಯಾಯಾ ವಸ್ತುವಿಷಯಗಳಿಗೆ ಉತ್ತಮ ಉದಾಹರಣೆಗಳನ್ನೂ ನೀಡಿಬಿಟ್ಟಿದ್ದಾರೆ.
ಕನ್ನಡ ವಾಚಕಮಿತ್ರರು ಇಂತಹ ಪುಸ್ತಕಗಳನ್ನು ಅತ್ಯಂತ ಆದರದಿಂದ ಬರಮಾಡಿಕೊಳ್ಳಬೇಕು. ಇಲ್ಲಿರುವ ಕೆಲವು ಸಾಹಿತ್ಯಕೃತಿಗಳನ್ನು ಬಳಸಿ ಮಕ್ಕಳಿಗೆ ಯುವಕ ಯುವತಿಯರಿಗೆ ಸಂಗೀತದ ಸರಳ ಹಾಡುಗಳಾಗಿ ಹೇಳಿಕೊಟ್ಟರೆ ಆಗ ಅವೆರಲ್ಲಿ ಸುಸಂಸ್ಕೃತಿ ಹೆಚ್ಚಾಗುತ್ತದೆ ಮತ್ತು ನಮ್ಮ ಕುಟುಂಬದ ಮೌಲ್ಯಗಳ ಪರಿಚಯವೂ ಅವರಿಗಾಗುತ್ತದೆ.
-ಡಾ.ರಾ.ಸ.ನಂದಕುಮಾರ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.