Your cart is empty now.
ಇವು ಕಥೆಗಳಲ್ಲ, ಕಥನಗಳು. ಇಲ್ಲಿನ ಭಾಷೆಯಲ್ಲಿ ಹಾಗೂ ವಿವರಗಳಲ್ಲಿ ಭಾವಗೀತೆ ಮತ್ತು ರೂಕ್ಷತೆಗಳು ಒಡಬಾಳುತ್ತವೆ. ಇವುಗಳಲ್ಲಿ ನಿಟ್ಟುಸಿರುಬಿಡುತ್ತಿರುವ ಪ್ರಾಣಿಲೋಕ, ಸಸ್ಯಲೋಕ ಮತ್ತು ಮನುಷ್ಯಲೋಕಗಳು ಬೇರೆಬೇರೆಯೆನಿಸದ 'ಒಂದುತನದ' ಸ್ಥಿತಿಯಿಂದ 'ಕೊಂದುತನದ ಸ್ಥಿತಿಗೆ ತಲುಪಿವೆ.
- ಎಚ್. ಎಸ್. ರಾಘವೇಂದ್ರರಾವ್
ಗಂಗಾಧರಯ್ಯ ರಮ್ಯವಾಸ್ತವದ ತವರೂರಿನವನು. ಮುಗ್ಧಲೋಕದ ಕರುಣ ಕ್ಷಣಗಳ ಸೃಜನಶೀಲತೆಯ ತಾಯ್ತನದ ಹಾರೈಕೆಯನ್ನೇ ನೆಚ್ಚಿ ಬರೆಯುವವನು. -ಮೊಗಳ್ಳಿ ಗಣೇಶ್
ಇಲ್ಲಿನ ಯಾವ ನಿಲುವುಗಳೂ ಹೊರಗಿನಿಂದ ತಂದು ಆವಾಹಿಸಿಕೊಂಡವುಗಳಲ್ಲ. ಬದಲಿಗೆ ಅಲ್ಲಲ್ಲಿ ಸೆಲೆಯೊಡೆದ ತಲಪರಿಗೆಗಳು.
- ಎಸ್. ನಟರಾಜ ಬೂದಾಳು
ಈ ಕಥೆಗಳಿಗೆ ನೆಲದ ಅಂತಃಕರಣವಿದೆ. ಅವಜ್ಞೆಗೊಳಗಾದ ಜೀವಿಗಳನ್ನು ಹಾಗೂ ಸನ್ನಿವೇಶಗಳನ್ನು ಇದು ಧ್ಯಾನಿಸುತ್ತದೆ. ಇಲ್ಲಿನ ಪದ್ಯಗಂಧಿ ಭಾಷೆ ಸ್ಪುರಿಸುವ ಭಾವತೀವ್ರತೆ ಪ್ರಕೃತಿ ಸಹಜ ಅನುಭೂತಿಗೆ ಅನುವು ಮಾಡಿಕೊಡುವಲ್ಲಿ ಈ ಕಥನಗಳ ವಿಶಿಷ್ಟತೆ ಹಾಗೂ ಮಹತ್ವವಿದೆ.
- ಸುನಂದಾ ಕಡಮೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.