Free Shipping Charge on Orders above ₹300

Shop Now

Bhavya Bhoomi Sale -10%
Rs. 382.00Rs. 425.00
Vendor: BEETLE BOOK SHOP
Type: PRINTED BOOKS
Availability: 8 left in stock

ಕನ್ನಡದ ಅವತರಣಿಕೆ ಭವ್ಯ ಭೂಮಿಯೆಂಬ ಹೆಸರಿನಲ್ಲಿ ಹೊರಬಂದಿರುವ ಹೊತ್ತಿಗೆ 1931 ರಲ್ಲಿ ಪ್ರಕಟಿತವಾದ ಪರ್ಲ್.ಎಸ್.ಬಕ್ ಅವರ ಗುಡ್ ಅರ್ತ್‌ನ ಭಾಷಾಂತರ. ಇದೊಂದು ರೈತ ಸಮುದಾಯದ ಗೋಳ್ತತೆಗಳ ಹಿಮ್ಮೇಳದಿಂದ ಕೂಡಿದ ಕಥಾನಕ. ರೈತನ ಬದುಕು ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಒಂದೇ ರೀತಿಯ ಸ್ಪಂದನೆಗಳನ್ನ ಒಳಗೊಂಡಿರುತ್ತದೆ, ಅದರಲ್ಲೂ ಒಂದೇ ನೆಲವನ್ನ ಹಂಚಿಕೊಂಡಿರುವ ಭಾರತ ಮತ್ತು ಚೈನದಲ್ಲಿನ ರೈತರ ಬವಣೆ ಮತ್ತು ಬಾಳುವೆಗಳಲ್ಲಿ ಸಾಮ್ಯತೆ ಅನೇಕ ರೀತಿಯಲ್ಲಿ ಇರುತ್ತದೆ. ಇದರ ನಮೂನೆ ಒಂದು ಕಾಲಕ್ಕೆ ಮಾತ್ರ ಸೀಮಿತವಾದದ್ದಲ್ಲ, ದಶ ಶತಮಾನಗಳ ಹಿಂದೆ ಇದ್ದ ಸಂಕಷ್ಟ ಸಂತೋಷಗಳು ರೈತನ ಬಾಳ್ವೆಯಲ್ಲಿ ಇಂದಿಗೂ ಒಂದೇ ರೀತಿ ಮುಂದುವರಿಯುತ್ತಿದೆ. ಈ ವಿಶೇಷತೆಯನ್ನ ಗುರುತಿಸಿದ್ದರಿಂದಲೇ ಲೇಖಕರು ಕನ್ನಡದ ಭಾಷಾಂತರಕ್ಕೆ ಕೈ ಹಾಕಿದರೆಂದು ಕಾಣುತ್ತದೆ. ಈ ಕೃತಿ ಪ್ರಾರಂಭವಾಗುವುದು ಒಬ್ಬ ವಾಂಗ್ ಲಂಗ್ ಎಂಬ ಬಡತನದಲ್ಲಿ ತೊಳಲಾಡುತ್ತಿದ್ದ ರೈತನೊಬ್ಬನ ಜೀವನದ ಪ್ರಾರಂಭದಿಂದ. ನಾವೂ ನಮ್ಮಲ್ಲಿ ಕಂಡಿರುವ ಸಂಗತಿ ಎಂದರೆ ರೈತರು ಬರಗಾಲದ ಸಮಯದಲ್ಲಿ ಗುಳೇದು ಹೋಗುವುದನ್ನ, ಅಂದರೆ ಜೀವನೋಪಾಯಕ್ಕಾಗಿ ತಮ್ಮ ವ್ಯವಸಾಯವನ್ನು ತೊರೆದು ನಗರಗಳಿಗೆ ಉದ್ಯೋಗವನ್ನರಸಿ ಹೋಗುವುದನ್ನ, ಅದೇ ರೀತಿಯ ಪರಿಸ್ಥಿತಿ ಬರಗಾಲದ ಭೀಕರತೆಗೆ ತುತ್ತಾದ ಇಡೀ ಬ್ಯಾಂಗ್ ಲಂಗ್ ನ ಸಂಸಾರ ನಗರವೊಂದಕ್ಕೆ ಆಹಾರ ಉದ್ಯೋಗವನ್ನು ಅರಸಿ ಹೋಗುತ್ತದೆ. ಏನೇ ಆದರೂ ರೈತ ಬೆಳೆಯುವುದು ಎಲ್ಲಾದರೂ ಸರಿ ನಾಡಿನ ಜನರ ಹೊಟ್ಟೆ ತುಂಬಿಸುವುದಕ್ಕೆ, ಮಳೆಯ ವೈಫಲ್ಯ ಅಥವ ಪ್ರಕೃತಿ ವಿಪೋಕದಿಂದ ಬವಣೆ ಪಡುವುದೂ ಒಂದೇ ಮಾದರಿಯಲ್ಲಿ, ಈ ದುರ್ದೈವವನ್ನ ಮೂಲಕೃತಿಯಲ್ಲಿರುವಂತೆಯೇ ಅದರ ಭಾಷಂತರದಲ್ಲಿಯೂ ಕೂಡ ಮನ ಮುಟ್ಟುವಂತೆ ಬಿಂಬಿಸಲಾಗಿದೆ.

ವೆಂಕಟರಾಜು ಕೃಷ್ಣಮೂರ್ತಿ

Guaranteed safe checkout

Bhavya Bhoomi
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading