Your cart is empty now.
ಬೆಂಗಳೂರಿನ ಬಗ್ಗೆ ಸಂಕ್ಷಿಪ್ತ ವಿಶ್ವಕೋಶ
ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಿಗೇನು ಕೊರತೆಯಿಲ್ಲ. ಬೆಂಗಳೂರಿನ ಬಗ್ಗೆ ಹಲವು ಬೃಹತ್ ಪುಸ್ತಕಗಳು ಬಂದಿವೆ. ಆದರೆ, ಹಲವು ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ಬೆಂಗಳೂರಿನ ಬಗ್ಗೆ ಸಂಕ್ಷಿಪ್ತವಾಗಿ ಪುಸ್ತಕಗಳು ವಿರಳ. ಉಪಯುಕ್ತ ಮಾಹಿತಿಯನ್ನು ನೀಡುವ ಆ ಕೊರತೆಯನ್ನು ಹೋಗಲಾಡಿಸುವ ಪ್ರಯತ್ನವೇ ಈ ಪುಸ್ತಕ.
'ಬೆಂಗಳೂರು: ಅಂದು-ಇಂದು' ಹೆಸರಿಗೆ ಅನ್ವರ್ಥವಾಗಿ ಇತಿಹಾಸಪೂರ್ವ ಕಾಲದಿಂದ ಬೆಂಗಳೂರಿನ ಬೆಳವಣಿಗೆಯ ಇತಿಹಾಸ,
ಪರಂಪರೆ, ಸಾಂಸ್ಕೃತಿಕ ಅನನ್ಯತೆಗಳ ಪರಿಚಯ, ಶಾಸಕರು, ನಗರಪಾಲಿಕೆ ವಾರ್ಡ್ಗಳ ಪಟ್ಟಿ, ಆರಾಧನ ಕೇಂದ್ರ, ಶಿಕ್ಷಣ, ಸಾಂಸ್ಕೃತಿಕ ಸಂಸ್ಥೆಗಳು, ಆಸ್ಪತ್ರೆ ಇತ್ಯಾದಿಗಳಿಂದ ಹಿಡಿದು ಜನರಿಗೆ ಅಗತ್ಯವಾದ ಕಚೇರಿಗಳ ವಿಳಾಸ, 'ಬೆಂಗಳೂರು-೧' ಕೇಂದ್ರಗಳ ಪಟ್ಟಿ, ಪ್ರೇಕ್ಷಣೀಯ ಸ್ಥಳ, ಸಭಾಂಗಣಗಳು, ಪುಸ್ತಕಮಳಿಗೆಗಳು, ಕಲಾ ತಂಡಗಳಿಂದ ಹಿಡಿದು ಸ್ಮಶಾಣಗಳವರೆಗೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಕೊಟ್ಟಿರುವ ಮಾಹಿತಿಗಳನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ, ನೇರವಾಗಿ ನಿರೂಪಿಸಲಾಗಿದೆ. ಇಲ್ಲಿ ಏನಿಲ್ಲ ಎಂದು ಹೇಳುವುದು ಕಷ್ಟ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಸಂಕ್ಷಿಪ್ತ ವಿಶ್ವಕೋಶ. ಬೆಂಗಳೂರಿನ ಸಂಪೂರ್ಣ ಪರಿಚಯ ನೀಡುವ ಕೈಪಿಡಿ. ಇದನ್ನು ಬೆಂಗಳೂರಿನ ನಿವಾಸಿಗಳು ವಿಶೇಷವಾಗಿ ಯುವಜನತೆ ಓದಿ ಪ್ರಯೋಜನವನ್ನು ಪಡೆದರೆ ಲೇಖಕರು, ಪ್ರಕಾಶಕರ ಕಾರ್ಯಕ್ಕೆ ಸಾರ್ಥಕತೆ ಬರುತ್ತದೆ.
ಡಾ. ಸ್ಮಿತಾ ರೆಡ್ಡಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.