Free Shipping Charge on Orders above ₹500. COD available

Shop Now

Appana Autograph Sale -10%
Rs. 135.00 Rs. 150.00
Vendor: BEETLE BOOK SHOP
Type: PRINTED BOOKS
Availability: 9 left in stock

ಅಪ್ಪನ ಆಟೋಗ್ರಾಫ್

ಈ ವಿಷಯಗಳು ನನ್ನಲ್ಲೂ ಇದ್ದವಲ್ಲಾ? ನಾನೂ ಬರೆಯಬಹುದಿತ್ತಲ್ವಾ? ಅಂತ ಯಾರಿಗಾದರೂ ಅನಿಸುವಂತಹ ಬರಹಗಳನ್ನೊಳಗೊಂಡ ಪುಸ್ತಕ ಈ ಅಪ್ಪನ ಆಟೋಗ್ರಾಫ್. ಆದರೆ ಎಲ್ಲರೂ ಬರೆಯಲಾಗುವುದಿಲ್ಲವಲ್ಲ! ಆದ್ದರಿಂದ ಈ ಬರಹಗಳು ಬರೆಯಲಾಗದವರ ಧ್ವನಿಯಾಗುತ್ತವೆ ಮತ್ತು ಓದುವವರ ಬದುಕಾಗುತ್ತವೆ. ಈ ಕೃತಿಯ ಹೆಚ್ಚುಗಾರಿಕೆಯೇ ಅದು. ಅಲ್ಲಲ್ಲಿ ಮೊಟಿವೇಶನಲ್ ಪುಸ್ತಕಗಳನ್ನು ನೆನಪಿಸುತ್ತವೆಯಾದರೂ ಅವುಗಳಂತೆ ಅಸಾಮಾನ್ಯ ಸಂಗತಿಗಳನ್ನು ಹೇಳುವುದಿಲ್ಲ. ಹೆಬ್ಬೆಟ್ಟಿನ ಅಮ್ಮ ಸಹಿ ಮಾಡಲು ಕಲಿತದ್ದು, ಮೊಬೈಲ್ ಹಿಡಿದು ಫೋನ್ ಮಾಡಲು ಕಲಿತದ್ದು ತರಹದ ಪುಟ್ಟಪುಟ್ಟ ಪ್ರಸಂಗಗಳ ಮೂಲಕ ಈ ಕೃತಿ ಉಂಟುಮಾಡುವ ಸ್ಫೂರ್ತಿ ತುಂಬಾ ದೊಡ್ಡದು. ಭಾವುಕ ಬರಹಗಳ ಜೊತೆಗೊಂದಷ್ಟು ಪ್ರಚೋದನಾಕಾರಿ ಮತ್ತು ಮಾಹಿತಿಯುಕ್ತ ಲೇಖನಗಳೂ ಇಲ್ಲಿವೆ. ಈ ಪುಸ್ತಕದ ಬಿಡಿಬಿಡಿ ಬರಹಗಳು, ಬೇರೆ ಬೇರೆ ವಿಷಯಗಳನ್ನು ಓದುವಾಗಲೇ ಲೇಖಕನ ವಯಸ್ಸು ಅಂದಾಜಿಗೆ ಸಿಕ್ಕಿಬಿಡುತ್ತದೆ. ನನ್ನಂತಹ ಅರ್ಧ ಆಯಸ್ಸು ಕಂಡವರಿಗೆ ಈ ಬರಹಗಳು ಅಚ್ಚರಿಯಾಗಿಯೂ, ಪ್ರಶ್ನೆಯಾಗಿಯೂ, ಸುಲಭವಾಗಿಯೂ ಒಳಗಿಳಿದರೆ ಈಗಷ್ಟೇ ಪ್ರಪಂಚ ನೋಡಲಾರಂಭಿಸಿದವರಿಗೆ ಮಾರ್ಗಸೂಚಿಯಂತೆ ಕೈ ಹಿಡಿಯಬಹುದು.

ಈ ಕೃತಿ ಓದುವ ಸುಖ ನಿಮ್ಮದಾಗಲಿ..
-ವೀರಕಪುತ್ರ ಶ್ರೀನಿವಾಸ

-
+

Guaranteed safe checkout

Appana Autograph
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading