Your cart is empty now.
ಲೇಖಕರು: ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
ಜಾಗತಿಕ ಮಟ್ಟದಲ್ಲಿ ಪ್ರಸಿದ್ದವಾದ ಕೃತಿಯನ್ನು ಕನ್ನಡಿಗರಿಗೆ ನೀಡಬೇಕೆಂಬ ಆಶಯದಿಂದ ಕನ್ನಡಕ್ಕೆ ತಂದಿದ್ದಾರೆ. ಯಾವ ತಪ್ಪನ್ನೂ ಮಾಡದ ವ್ಯಕ್ತಿಯೊಬ್ಬ ಕೊಲೆಯ ಪ್ರಸಂಗದಲ್ಲಿ ಸಿಕ್ಕಿಹಾಕಿಕೊಂಡು ಜೀವಾವಧಿ ಶಿಕ್ಷೆಗೆ ಒಳಪಟ್ಟು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೋಚಕ ಕಥೆ ಇದು. ಈ ಕೃತಿಯ ಸಂಗ್ರಹಾನುವಾದೊಂದಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಾಗತಿಕ ಭೂಗತ ಲೋಕದ ಅನೇಕ ವೃತ್ತಾಂತಗಳು, ಸರಕಾರದ ಭದ್ರತಾವ್ಯವಸ್ಥೆಗಳ ಕ್ರೌರ್ಯದ ಅನಾವರಣ ಮಾಡುತ್ತಲೇ, ಶ್ರೀಸಾಮಾನ್ಯನೊಬ್ಬ ವ್ಯವಸ್ಥೆಯ ಅಡಿಯಲ್ಲಿ ಸಿಕ್ಕಿಕೊಂಡಾಗ ಅನುಭವಿಸುವ ಯಾತನೆಯ ಕರಾಳ ಚಿತ್ರಗಳು, ಆಧುನಿಕ ಸಂಸ್ಕೃತಿ-ನಾಗರಿಕತೆಯ ದರ್ಶನ, ಅದರ ಅಮಾನುಷತೆಯ ಹಲವು ಮುಖಗಳನ್ನು ಓದುಗರ ಮುಂದಿಡುತ್ತದೆ ಪ್ಯಾಪಿಲಾನ್. ಈ ಕೃತಿಯು ಮೂರು ಭಾಗಗಳಲ್ಲಿ ಪ್ರಕಟವಾಗಿದ್ದು; ಒಂದು ಮತ್ತು ಎರಡನೇ ಸಂಪುಟವನ್ನು ತೇಜಸ್ವಿ-ಪ್ರದೀಪ್ ಕೆಂಜಿಗೆ ಒಟ್ಟಿಗೆ ಸೇರಿ ಅನುವಾದಿಸಿದ್ದಾರೆ. ಮೂರನೇ ಸಂಪುಟವನ್ನು ತೇಜಸ್ವಿ ನಿಧನ ನಂತರ ಪ್ರದೀಪ್ ಕೆಂಜಿಗೆ ಅವರು ಈ ಹಿಂದಿನ ಸಂಪುಟಗಳ ಹಾಗೆಯೇ ಆಕರ್ಷಕವಾಗಿ ಕನ್ನಡೀಕರಿಸಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.