Free Shipping Above ₹500 | COD available

Katheya Kai Hididu ( Critical Articles ) - Beetle Book Shop Sale -10%
Rs. 202.00Rs. 225.00
Vendor: BEETLE BOOK SHOP
Type: PRINTED BOOKS
Availability: 10 left in stock

ಕಳೆದ ಒಂದು ಶತಮಾನದಲ್ಲಿ ಜೀವ ತಳೆದ ಕತೆಗಳನ್ನು ಆಯ್ದು, ಚಿಂತಿಸಿ ಬರೆದ ರಸವಿಮರ್ಶಾ ಪುಸ್ತಕವಿದು. ಅಮರೇಂದ್ರ ಕನ್ನಡ ಸಾಹಿತ್ಯದ ಕಡು ವ್ಯಾಮೋಹಿ ಓದುಗ ಹಾಗೂ ಅನುರಕ್ತಿಯಿಂದ ಪಾಠ ಹೇಳುವ ಅಧ್ಯಾಪಕರು. ಲೇಖಕರ ವ್ಯಕ್ತಿತ್ವವನ್ನು ಧ್ವಂಸಗೊಳಿಸುವ ತಂತ್ರಜ್ಞಾನ, ಆಧಾರಿತ ಮಾಧ್ಯಮಗಳ ದಾಳಿಯಲ್ಲಿ ಲೇಖಕನ ಅಂತರಂಗವನ್ನು ಕಾಪಾಡಿಕೊಂಡವರು. ತಾವೇ ಸಮರ್ಥ ಕತೆಗಾರರಾಗಿದ್ದರೂ ಕಥೆಯ ರಾಚನಿಕ ವಿನ್ಯಾಸ, ವಸ್ತು ನಿರ್ವಹಣೆ, ಭಾಷಾ ಪ್ರಯೋಗ ಮತ್ತು ಕತೆಗಳು ಮಂಡಿಸುವ ಲೋಕದೃಷ್ಟಿ ಮುಂತಾದ ಸೃಜನ ಪರಿಕರಗಳನ್ನು ಅರಿಯುವ ವಿನಮ್ರತೆಯನ್ನು ಕೃತಿಯುದ್ದಕ್ಕೂ ತೋರಿದ್ದಾರೆ. ಕನ್ನಡ ಸಣ್ಣಕಥಾ ಪ್ರಕಾರದ ಮೊದಲಿಗರಾದ ಪಂಜೆಮಂಗೇಶರಾಯರ ಕತೆಯಿಂದ ಮೊದಲುಗೊಂಡು ಈಚಿನ ವಸುಧೇಂದ್ರರ - ಕತೆಯವರೆಗೂ ಇಪ್ಪತ್ತೈದು ಕತೆಗಳನ್ನು ಈ ಕೃತಿಯಲ್ಲಿ ನಿಕಟ ಓದಿಗೆ ಒಳಪಡಿಸಲಾಗಿದೆ. ಇಷ್ಟು ವೈವಿಧ್ಯಮಯವಾದ ಕತೆಗಳನ್ನು ಹಾಗೂ ವಿವಿಧ ಸಾಮಾಜಿಕ ಲೋಕಗಳ ಹಿನ್ನೆಲೆಯಂ, ಲೇಖಕರನ್ನು ಒಂದೆಡೆ ಒಟ್ಟುಗೂಡಿಸುವ ಧೈರ್ಯವನ್ನು ಅಮರೇಂದ್ರ ತೋರಿಸಿದ್ದಾರೆ. ಕನ್ನಡ ಕಥಾ ಪ್ರಕಾರವನ್ನು ಹಿಗ್ಗಿಸಿರುವ ಕತೆಗಾರರ ಕಥಾನುಭವದ ದರ್ಶನದ ಜೊತೆಗೆ ಕನ್ನಡದಲ್ಲಿ ಸಣ್ಣಕತೆಯ ಪ್ರಕಾರವು ನಡೆದು ಬಂದ ದಾರಿ ಮತ್ತು ಎದುರಿಸಿದ ಸೃಜನಶೀಲ ಸವಾಲುಗಳ : ಚರಿತ್ರೆಯನ್ನು ಪರೋಕ್ಷವಾಗಿ ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ. ಅಮರೇಂದ್ರ ತಮ್ಮ ಓದಿನ ಸುಖದ ಅನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳುವ ಹಂಬಲದಿಂದ ಈ ಕೃತಿಯನ್ನು ಹೊರತಂದಿದ್ದಾರೆ. ಇಲ್ಲಿನ ಲೇಖನಗಳು ಕೃತಿನಿಷ್ಟ ವಿಮರ್ಶೆಯ ವಿಧಾನವನ್ನು ಅನುಸರಿಸಿರುವುದರಿಂದ ಅವುಗಳಿಗೆ ಭಾವ ತೀವ್ರತೆಯ ಮೆರುಗು ಪ್ರಾಪ್ತಿಯಾಗಿದೆ. ಈ ಬರಹಗಳನ್ನು ಕತೆ ಮಂಡಿಸುವ ಲೋಕದೃಷ್ಟಿಯಿಂದ ಬಿಡಿಯಾಗಿಯೂ ಮತ್ತು ಕನ್ನಡ ಕಥಾಪರಂಪರೆಯ ಜೊತೆಗಿರಿಸಿ ಇಡಿಯಾಗಿಯೂ ಓದಿಕೊಳ್ಳಬಹುದಾಗಿದೆ. ಅಮರೇಂದ್ರ ಕೋಲಾರ ಸೀಮೆಯ ತ್ರಿಭಾಷಿಕ ಪರಿಸರದಿಂದ ಪಡೆದ ಸಾಂಸ್ಕೃತಿಕ ಸಂಕರದ ಅನುಭೂತಿಯನ್ನು ತಮ್ಮ ಕಥನ ಪ್ರತಿಭೆಯಲ್ಲಿ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.

ಲೋಕಾನುಸಂಧಾನವನ್ನು ಅಮರೇಂದ್ರ ಕತೆಯಿಂದ ಆರಂಭಿಸಿದರೂ ನಂತರ ಕಾದಂಬರಿ. ನಾಟಕ, ವಿಮರ್ಶೆ ಅನುವಾದ ಪ್ರಕಾರಗಳಲ್ಲಿ ಕೃಷಿ ನಡೆಸಿ ಓದುಗರ ಮನ್ನಣೆಗೆ ನೀವು ಪಾತ್ರರಾಗಿದ್ದಾರೆ. ಬಹುರೂಪಿಯೂ ವಿಸ್ತಾರವೂ ಆದ ಕನ್ನಡ ಕಥಾಜಗತ್ತನ್ನು ಪ್ರವೇಶಿಸಲು, ಅಮರೇಂದ್ರರ ಈ ಕೃತಿ ಕೈದೀವಿಗೆಯಾಗಿದೆ.

-ಡಾ. ಕೆ.ವೈ.ನಾರಾಯಣಸ್ವಾಮಿ

Guaranteed safe checkout

Katheya Kai Hididu ( Critical Articles )
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.