Your cart is empty now.
ಕಳೆದ ಹತ್ತು ವರ್ಷಗಳಿಂದ ಮತ್ತೆ ಕಿರುಧಾನ್ಯಗಳಿಗೆ ಪ್ರಾಶಸ್ತ್ಯ ಸಿಗತೊಡಗಿದೆ. ಹೈದರಾಬಾದ್ನ ಡಿಡಿಎಸ್ ಸಂಸ್ಥೆಯ ಸತತ ಒತ್ತಡದಿಂದಾಗಿ ನವಣೆ, ಸಾಮೆ, ಕೊರ್ಲೆ, ಆರಕ ಮುಂತಾದ ಧಾನ್ಯಗಳನ್ನು ಬೆಳೆಯುವವರ ಹಾಗೂ ಬಳಸುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಕಿರುಧಾನ್ಯಗಳು ಪವಾಡಧಾನ್ಯಗಳಾಗಿ, ಸಿರಿಧಾನ್ಯಗಳಾಗಿ ಮತ್ತೆ ರಂಗಪ್ರವೇಶ ಮಾಡಿವೆ. ಪೋಷಕಾಂಶ ತಜ್ಞರ ಪ್ರಬಂಧಗಳಲ್ಲಿ ಅವಿತಿದ್ದ ಅವುಗಳ ಸದ್ಗುಣಗಳು ಹೊರಬಿದ್ದು ಸಾರ್ವಜನಿಕ ಮಾಧ್ಯಮಗಳಲ್ಲೂ ವಿಜೃಂಭಿಸತೊಡಗಿವೆ. ಸಿರಿಧಾನ್ಯಗಳಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ನಾರಿನಂಶ, ಬಿ3, ಬಿ6 ಜೀವಸತ್ವಗಳು ಇವೆಯೆಂಬ ಹೊಗಳಿಕೆ ಸಿಗುತ್ತಿದೆ. ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ತಂಪು ನೀಡಬಲ್ಲ 'ಸೆರೊಟೊನಿನ್' ಅಂಶಗಳು ಸಿರಿಧಾನ್ಯದ ಸೇವನೆಯ ಮೂಲಕ ಮಿದುಳಿಗೆ ಸಿಗುತ್ತವೆ ಎಂತಲೂ ಹೇಳುತ್ತಾರೆ.
ಈ ಪುಸ್ತಕದಲ್ಲಿ ಅಂಥ ಬಹಳಷ್ಟು ವಿವರಗಳನ್ನು ಡಾಕ್ಟರ್ ಲೀಲಾವತಿ ದೇವದಾಸ್ ಕೊಟ್ಟಿದ್ದಾರೆ. ಅವರು ಸಿರಿಧಾನ್ಯಗಳ ಸದ್ಗುಣಗಳನ್ನು ವಿವರಿಸಿದ್ದಷ್ಟೇ ಅಲ್ಲ, ರುಚಿರುಚಿಯಾಗಿ ಅವುಗಳಿಂದ ವಿಭಿನ್ನ ಖಾದ್ಯಗಳನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಕೂಡ ವಿವರಿಸಿದ್ದಾರೆ.
ತುಸು ದುಬಾರಿ ಎನಿಸಿದರೂ ಸಿರಿಧಾನ್ಯಗಳನ್ನು ಖರೀದಿಸಿ ಬಳಸಬೇಕು; ಈ ಪುಸ್ತಕವನ್ನೂ ಖರೀದಿಸಬೇಕು. ಇದನ್ನು ಓದಿ, ಸಿರಿಧಾನ್ಯಗಳ ಬಹುಮುಖೀ ಸದ್ಗುಣಗಳ ಬಗ್ಗೆ ಅನಕ್ಷರಸ್ಥ ರೈತರಿಗೆ ತಿಳುವಳಿಕೆ ನೀಡಬೇಕು.
-ನಾಗೇಶ ಹೆಗಡೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.