Your cart is empty now.
ಹಿಂಡೆಕುಳ್ಳು' ಸಂಕಲನದ ಮೂಲಕವೇ ಹೈದರಾಬಾದ್ ಕರ್ನಾಟಕ ಭಾಗದ ಕಥಾಪರಂಪರೆಯ ಸಣ್ಣ ಕೊಂಡಿಯಾಗಿ ಕಾಣಿಸುವ ಅಮರೇಶ, ಆ ಪರಂಪರೆಯ ಭಾಗವಾಗಿದ್ದುಕೊಂಡು ತಮ್ಮದೇ ಆದ ಭಿನ್ನ ಹಾದಿಯೊಂದನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವಂತಿದೆ. ಗಿಣಿವಾರರು ಚಿತ್ರಿಸುವ ರಾಯಚೂರು ಸೀಮೆಯ ಜನಸಾಮಾನ್ಯರ ಬವಣೆಗಳು, ಗ್ರಾಮಭಾರತದ ದೀನದಲಿತರ ಬದುಕಿನ ನರಳಿಕೆಗಳೂ ಆಗಿವೆ. ತಾನು ಹೇಳುವ ಕಥೆಗಳ ಭಾಗವಾಗದಂತೆ ಸಾಧಿಸಿರುವ ಅಂತರ ಹಾಗೂ ಭಾಷೆಯನ್ನು ಎಚ್ಚರದಿಂದ ಬಳಸುವ ಪ್ರಜ್ಞೆಯ ಕಾರಣದಿಂದಾಗಿ ಗಿಣಿವಾರರನ್ನು ಹೊಸ ತಲೆಮಾರಿನ ಕಥೆಗಾರರ ಸಾಲಿನಲ್ಲಿ ಭಿನ್ನವಾಗಿ ನೋಡಬಹುದಾಗಿದೆ.
- ರಘುನಾಥ ಚ ಹ
'ಬೀಜದ ಮನುಷ್ಯ' ಕತೆ ಕನ್ನಡದ ಕಥಾಲೋಕಕ್ಕೆ ತನ್ನ ವಸ್ತು ಕತಾಭಿತ್ತಿಯ ಕಾರಣಕ್ಕೆ ಅಪರೂಪದ್ದು. ಗಂಡಾಳ್ವಕೆಗೆ ತೋರಿದ ಪ್ರತಿರೋಧ ಹೊಸ ಬಗೆಯದ್ದು. ಬಹುಶಃ ಹೆಣ್ಣಿನ ಅನೂಹ್ಯ ಸಂಘರ್ಷಗಳನ್ನು ಈ ಕತೆ ತೋರಿದ ವಿಧಾನವು ಹೊಸತು. ಈ ಕತೆಯ ಮಲ್ಲಿಯ ಹೆಂಡತಿಯ ಮೂಲಕ ಕತೆಗಾರ ಆಡಿಸಿರುವ ಮಾತುಗಳಿಂದ ಕತೆಯ ತ್ರಾಣ ಮತ್ತು ತೂಕ ಹೆಚ್ಚಿದೆ. ಕತೆಗಾರ ಸಂವೇದನಾಶೀಲತೆ ಮತ್ತು ಹೆಣ್ಣನ ಹೊಂದಿದ್ದರೆ ಮಾತ್ರ ಇಂತಹ ಕತೆ ಅರಳಲು ಸಾಧ್ಯ.
ನಾವು ಬಾಲ್ಯದಲಿ 'ಹಾಸಿಗೆ ಪತ್ತೇವು' ಎನ್ನುವ ಪದ ಕಿವಿಗೆ ಬೀಳುತ್ತಿದ್ದರೂ ಅದರರ್ಥ ತಿಳಿದಿದ್ದು ಬಹಳ ದಿನಗಳ ನಂತರ, ಈ ಕತೆಗೆ ಒದಗಿಬಂದ ವಿವರಗಳೆಲ್ಲವೂ ಸಹಜವಾಗಿವೆ. ಗ್ರಾಮ್ಯಬದುಕಿನ ನುಡಿಗಟ್ಟು. ಸಂಕಟಗಳೆಲ್ಲವೂ ಯಥಾವತ್ತಾಗಿ ಮೈದಾಳಿವೆ.
- ಪಲ್ಲವ ವೆಂಕಟೇಶ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.