Your cart is empty now.
ಬಹುಪಾಲು ಭಾರತೀಯರು ಇರ್ನುಡಿಗರು; ಹಲವರು ಹಲನುಡಿಗರು ಕೂಡ ಆಗಿದ್ದಾರೆ. ಇದಕ್ಕೆ ಕಾರಣವೇನ? ಪೆಗ್ಗಿ ಮೋಹನ್ ಈ ಕುತೂಹಲ ಕೆ ರಳಿಸುವ ಪ್ರಶ್ನೆಯ ಆಳಕ್ಕಿಳಿದು ಅರಸುತ್ತ ಹೋದಾ ಗ ಭಾರತಕ್ಕೆ ಹೊ ರಗಿನಿಂದ ಆದ ಮತ್ತು ಒಳಗೆಯೇ ನಡೆದ ವಲಸೆಗಳು ನಮ್ಮನ್ನು ರೂಪಿಸಿದ ಬಗೆಗಳನ್ನು ಕಂಡುಕೊಳ್ಳುತ್ತಾರೆ; ನಾವೆ ಲ್ಲರೂ ಮಿಶ್ರಮೂಲದವರು ಎಂಬುದನ್ನೂ ಅರಿತುಕೊಳ್ಳುತ್ತಾರೆ.
ಆದಿಮ ಸಂಸ್ಕೃತವು ನಾವು ಇಂದು ಸಂಸ್ಕೃತವೆಂ ದು ಗುರುತಿ ಸುವ ಭಾಷೆಯಾಗಿ ರೂಪಾಂತರಗೊಂಡ ಕಥೆಯ ಮುಖಾಂ ತರ ವೈದಿಕ ಜನರು ಸ್ಥಳೀಯ ಸಮುದಾ ಯದೊಂ ದಿಗೆ ಬೆರೆತದ್ದನ್ನು ತಿ ಳಿಯಪಡಿಸುತ್ತಾರೆ. ನಂ ಬೂದಿರಿ ಬ್ರಾಹ್ಮಣರು ದಕ್ಷಿಣದತ್ತ ವಲಸೆ ಹೋದ ನಂ ತರ ಮಲಯಾಳಕ್ಕೆ ಸಂಬಂಧಿಸಿದಂತೆಯೂ ಇದೇ ವೃತ್ತಾಂ ತ ಮರುಕಳಿಸುತ್ತದೆ . ಮರಾಠಿ, ಉರ್ದು ಮತ್ತು ಕೆಲವು ಈಶಾನ್ಯ ಭಾಗದ ಭಾಷೆಗಳು ಕ್ರಮಿಸಿದ ಆಶ್ಚರ್ಯಯನುಕರ ಪಥಗಳು ಅವರಿಗೆ ಎದುರಾಗುತ್ತವೆ . ಅವುಗಳ ಮೂಲಕ ಭಾರತದ ಸಾಮಾಜಿಕ ಇತಿಹಾಸದ ಇದುವರೆಗೂ ಗೊತ್ತಿ ರದ ನೋಟಗಳು ಅನಾವರಣಗೊಳ್ಳುತ್ತವೆ .
ವರ್ತಮಾನದತ್ತ ಗಮನ ಹರಿಸುತ್ತ ಅವರು ಬ್ರಿಟಿಷರ ನಿರ್ಗನಗನುಮನದ ನಂ ತರ ಇಂಗ್ಲಿಷ್ ಭಾಷೆಯು ಪ್ರಾ ಬಲ್ಯ ಪಡೆದ ವಿರೋಧಾಭಾಸದ ಬಗ್ಗೆ ವಿಸ್ತಾ ರವಾಗಿ ಹೇಳುತ್ತಾರೆ. ಹಿಂದೆ ಆಡಳಿತ ಭಾಷೆಯಾಗಿ ಅದನ್ನು ಅಳವಡಿಸಿಕೊಂಕೊಿಂಡದ್ದು ಈಗ ಭಾರತದ ಭಾಷೆಗಳ ಅಸ್ತಿ ತ್ವಕ್ಕೇ ಅಪಾಯ ತಂದೊಡ್ಡಿರುವುದನ್ನು ವಿವರವಾದ ಮತ್ತು ತೀಕ್ಷ್ಣವಾದ ಅವಲೋಕನದ ಮೂಲಕ ತೋರಿಸಿಕೊಡುತ್ತಾರೆ.
‘ಅಲೆಮಾರಿಗಳು ಅರಸರು ವರ್ತತನುಕರು’ ಭಾಷೆಗಳ ಸಾಮಾಜಿಕ-ಚಾರಿತ್ರಿ ಕ ಮೂಲಗಳ ಕುರಿತು ದಶಕಗಳ ಸಂಶೋಧನೆ ಮತ್ತು ಗಾಢವಾದ ಅನುಸಂಧಾನದ ಫಲ. ಹಲವು ಸಹಸ್ರಮಾನಗಳಿಂದ ಭಾರತದಲ್ಲಿ ನಡೆಯುತ್ತಿ ರುವ ಸಮುದಾ ಯಗಳ ಪರಸ್ಪರ ಬೆರೆಯುವಿಕೆ ಯ ಮೇಲೆ ಈ ಕೃತಿ ಬೆಳಕು ಚೆಲ್ಲು ತ್ತದೆ . ಜನಾಂಗನಾಿಂಗಿೀಯ ‘ಪರಿಶುದ್ಧತೆ’ಯ ಕಲ್ಪನೆಯು ಪ್ರಬಲರಾದವರು ತಮ್ಮ ಅನುಕೂಲಕ್ಕಾ ಗಿ ಹರಡಿದ ಕಟ್ಟುಕತೆಯೆಂ ದು ಒತ್ತಿ ಹೇಳುತ್ತದೆ .
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.