Free Shipping Above ₹500 | COD available

Vanasiri- Kagasiri Aranyashastra (Combo) Sale -15%
Rs. 1,079.00Rs. 1,270.00
Vendor: BEETLE BOOK SHOP
Type: PRINTED BOOKS
Availability: 10 left in stock

ಖಗಸಿರಿ ಪುಸ್ತಕದ ಮಾಹಿತಿ: ಅಪಾರ ಜೀವರಾಶಿಯಲ್ಲಿ ಪಕ್ಷಿಗಳದ್ದೇ ಒಂದು ವೈಶಿಷ್ಟ್ಯ. ಅವುಗಳ ವಾಯುಗಮನದ ಪರಿಪೂರ್ಣತೆ, ಮನತಣಿಸುವ ವರ್ಣವಿನ್ಯಾಸ, ಗರಿಗೆದರುವ ವೈಖರಿ, ಗಾನಸುಧೆ, ಉಲ್ಲಾಸಭರಿತ ದಿನಚರಿ, ಆಹಾರ ದೊರಕಿಸಿಕೊಳ್ಳುವ ಸಾಧನೆ, ಗೂಡುಕಟ್ಟುವ ನಿಪುಣತೆ, ಮರಿಪಾಲನೆಯ ಹೊಣೆ, ಆಗಮನ-ನಿರ್ಗಮನ ಇವೆಲ್ಲ ವಿಸ್ಮಯಭರಿತವಾಗಿದ್ದು, `ಪಕ್ಷಿ ವೀಕ್ಷಣೆ`ಇಂದು ಆಸಕ್ತಿದಾಯಕ ಹವ್ಯಾಸವಾಗಿದೆ. ಈ ದಿಸೆಯಲ್ಲಿ ಕನ್ನಡ ಬಂಧುಗಳಿಗೆ ಕರ್ನಾಟಕದಲ್ಲಿ ಕಂಡು ಬರುವ ಜಲಪಕ್ಷಿಗಳು, ನೀರ್ನಡಿಗೆಯ ಪಕ್ಷಿಗಳು, ಗಗನ ವಿಹಾರಿಗಳು ಇತ್ಯಾದಿಗಳಲ್ಲಿ ಕೆಲವಾರು ಪಕ್ಷಿಗಳ ಪರಿಚಯವನ್ನು ಸೂಕ್ತ ವರ್ಣಚಿತ್ರಗಳ ಮುಖೇನ ಮಾಡಿಕೊಡಲಾಗಿದೆ. ಪಕ್ಷಿ ಜೀವನದ ಕುತೂಹಲಕಾರಿ ವಿಶೇಷತೆಗಳನ್ನು ಹಾಗೂ ಅವುಗಳು ಬದುಕಿ ಬಾಳಲ್ಲಿ ರೂಢಿಸಿಕೊಂಡ ಅನೇಕ ಸಾಧನೆಗಳನ್ನು ಪ್ರಬಂಧ, ಅನುಬಂಧಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ಕನ್ನಡದಲ್ಲಿ ಹೆಸರು ಕಾಣದ ಕೆಲವು ಪಕ್ಷಿಗಳು ಹೊಸ ಹೆಸರು ತಳೆದು ಕನ್ನಡಿಗರ ಮನದಲ್ಲಿ ಮೂಡುವಂತೆ ಮಾಡಲಾಗಿದೆ. ಈ ಸರಣಿಯಲ್ಲಿ ಚಿತ್ರ, ಗಂಧರ್ವ, ಖಗರತ್ನ, ಜಲಚತುರೆ, ಫಲಕಫಣಿ ಇವು ಕೆಲವು. ವನಪಾಲಕರಿಗೆ, ವನ್ಯಜೀವಿ ಪ್ರೇಮಿಗಳಿಗೆ, ಪಕ್ಷಿವೀಕ್ಷಕ ಹವ್ಯಾಸಿಗಳಿಗೆ, ಎಲ್ಲ ಕನ್ನಡ ಬಂಧುಗಳಿಗೂ ಇದೊಂದು ಸಚಿತ್ರ ಪಕ್ಷಿ ಕೈಪಿಡಿ. ವನಸಿರಿ ಪುಸ್ತಕದ ಮಾಹಿತಿ: ಕರ್ನಾಟಕದ ವೃಕ್ಷಸಂಪತ್ತು ಭಾರತ ದೇಶದಲ್ಲಿಯೇ ತನ್ನ ಶ್ರೀಮಂತಿಕೆಗೆ ಹೆಸರಾಗಿದೆ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಅರಣ್ಯಗಳ ಬೃಹದಾಕಾರದ ವೃಕ್ಷಗಳು, ಪರ್ಣಪಾತಿ ಕಾಡುಗಳ ಉತ್ತಮ ಚೌಬೀನೆ ಮರಜಾತಿಗಳು, ಅಮೂಲ್ಯ ಫಸಲುಗಳ ಗಿಡಮರಗಳು, ಬಿದಿರು, ಕಾನಿನ ಬೆತ್ತ, ಗಿಡಮೂಲಿಕೆಗಳು ನಮ್ಮ ನಾಡಿನ ವೃಕ್ಷ ಸಂಪನ್ಮೂಲಕ್ಕೆ ಮೆರುಗು ಕೊಟ್ಟಿವೆ. ಕರ್ನಾಟಕದ ವೃಕ್ಷಜಾತಿಗಳ ನೆಲೆ, ಆಕಾರ, ಋತುಘಟನೆ, ಉಪಯುಕ್ತತೆ, ಸ್ವಾಭಾವಿಕ ಪುನರುತ್ಪನ್ನದ ಸ್ಥಿತಿಗತಿ, ಕೃತಕ ಪುನರುತ್ಪನ್ನದ ಸಾಧ್ಯತೆ ಇವುಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ವೃಕ್ಷಸಂಪತ್ತು `ವನಸಿರಿ`ಯ ಮುಖ್ಯ ಅಂಶವಾಗಿದ್ದರೆ, `ಮೃಗಸಂಪತ್ತು` ವೃಕ್ಷಗಳೇ ಕಲ್ಪಿಸಿಕೊಟ್ಟ ಪರಿಸರದಲ್ಲಿ ಕಾಣಬರುವ ವನಸಿರಿಯ ಪೂರಕ ಅಂಶ. ಕರ್ನಾಟಕದ ಪರಿಚಿತ ವನ್ಯಮೃಗಗಳೊಂದಿಗೆ ಇನ್ನಿತರ ಅಪರಿಚಿತ ಮೃಗಗಳ ವಿವರಣೆ ನೀಡಲಾಗಿದೆ. ಹಿಂದೆ ನಡೆಯುತ್ತಿದ್ದ ಹುಲಿಯ ಬೇಟೆ, ಆನೆಯ `ಖೆಡ್ಡ` ಇವುಗಳ ವಿವರಣೆಯನ್ನು ಚಾರಿತ್ರಿಕ ಕುತೂಹಲತೆಗಾಗಿ ಕೊಡಲಾಗಿದೆ. ಭಾರತ ಕೃಷಿಪ್ರಾಧಾನ್ಯವಾದ ದೇಶ. ಕರ್ನಾಟಕದಲ್ಲಿಯೂ ಕೃಷಿಯೇ ಮುಖ್ಯ ಬದುಕು. ಅರಣ್ಯಗಳು ಕೃಷಿಗೆ ತಾಯಿಯಂತೆ ಆಸರೆ ಕೊಟ್ಟು, ಕೃಷಿಯ ಅಭಿವೃದ್ಧಿಗೆ ನೆರವಾಗುತ್ತಿವೆ. ವಿವಿಧ ಭೂಗುಣ ಹವಾಗುಣಗಳಿಗೆ ಒಗ್ಗುವ ಮರಜಾತಿಗಳು, ಸಾಲುಮರಗಳು, ಉದ್ಯಾನವನದ ಮರಗಳು, ಅಂದದ ಹಂದರದ ಸುಂದರ ಪುಷ್ಪಗಳ ಮರಗಳು, ಮೇವಿನ ಹುಲ್ಲುಗಳು, ಔಷಧಿಗೆ ಉಪಯುಕ್ತವಾದ ಅನೇಕ ಅಮೂಲ್ಯ ಮರ, ಗಿಡ, ಮೂಲಿಕೆಗಳು, ವನ್ಯಮೃಗ ಪಕ್ಷಿಗಳು, ಸರ್ಪಗಳು, ಅರಣ್ಯ ಕೀಟಗಳು, ಅರಣ್ಯ ಬುಡಕಟ್ಟಿನವರ ರೀತಿ ನೀತಿಗಳು, ಭೂಸವೆತ - ಅದರ ಕಾರಣ, ಪರಿಣಾಮ, ಪರಿಹಾರಗಳು ಹಾಗೂ ಸಾಮಾಜಿಕ ಅರಣ್ಯಗಳ ನಿರ್ಮಾಣ, ನಿರ್ವಹಣೆ, ನೀತಿ, ಅವುಗಳ ಬಗ್ಗೆ ಜನರ ಹೊಣೆ ಇವುಗಳೆಲ್ಲದರ ವಿಶ್ಲೇಷಣೆಗಳೂ ಇಲ್ಲಿ ಸೇರಿವೆ. ಅರಣ್ಯಶಾಸ್ತ್ರ ಪುಸ್ತಕದ ಮಾಹಿತಿ: ಭಾರತ ಕೃಷಿಪ್ರಾಧಾನ್ಯವಾದ ದೇಶ. ಕರ್ನಾಟಕದಲ್ಲಿಯೂ ಕೃಷಿಯೇ ಮುಖ್ಯ ಬದುಕು. ಅರಣ್ಯಗಳು ಕೃಷಿಗೆ ತಾಯಿಯಂತೆ ಆಸರೆ ಕೊಟ್ಟು, ಕೃಷಿಯ ಅಭಿವೃದ್ಧಿಗೆ ನೆರವಾಗುತ್ತಿವೆ. ವಿವಿಧ ಭೂಗುಣ ಹವಾಗುಣಗಳಿಗೆ ಒಗ್ಗುವ ಮರಜಾತಿಗಳು, ಸಾಲುಮರಗಳು, ಉದ್ಯಾನವನದ ಮರಗಳು, ಅಂದದ ಹಂದರದ ಸುಂದರ ಪುಷ್ಪಗಳ ಮರಗಳು, ಮೇವಿನ ಹುಲ್ಲುಗಳು, ಔಷಧಿಗೆ ಉಪಯುಕ್ತವಾದ ಅನೇಕ ಅಮೂಲ್ಯ ಮರ, ಗಿಡ, ಮೂಲಿಕೆಗಳು, ವನ್ಯಮೃಗ ಪಕ್ಷಿಗಳು, ಸರ್ಪಗಳು, ಅರಣ್ಯ ಕೀಟಗಳು, ಅರಣ್ಯ ಬುಡಕಟ್ಟಿನವರ ರೀತಿ ನೀತಿಗಳು, ಭೂಸವೆತ - ಅದರ ಕಾರಣ, ಪರಿಣಾಮ, ಪರಿಹಾರಗಳು ಹಾಗೂ ಸಾಮಾಜಿಕ ಅರಣ್ಯಗಳ ನಿರ್ಮಾಣ, ನಿರ್ವಹಣೆ, ನೀತಿ, ಅವುಗಳ ಬಗ್ಗೆ ಜನರ ಹೊಣೆ ಇವುಗಳೆಲ್ಲದರ ವಿಶ್ಲೇಷಣೆಗಳೂ ಇಲ್ಲಿ ಸೇರಿವೆ.

Guaranteed safe checkout

Vanasiri- Kagasiri Aranyashastra (Combo)
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.